Illicit Relationship ಬೇರೊಬ್ಬನ ಜೊತೆ ಪತ್ನಿ ಅನೈತಿಕ ಸಂಬಂಧ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇಬ್ಬರನ್ನೂ ಕೊಚ್ಚಿ ಕೊಂದ ಪತಿ

ಹತ್ತಿ ಹೊಲದಲ್ಲಿ ಏಕಾಂತದಲ್ಲಿದ್ದ ಪತ್ನಿ ಹಾಗೂ ಆಕೆ ಪ್ರಿಯಕರನ ಮೇಲೆ ಪತಿ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

Illicit Relationship ಬೇರೊಬ್ಬನ ಜೊತೆ ಪತ್ನಿ ಅನೈತಿಕ ಸಂಬಂಧ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇಬ್ಬರನ್ನೂ ಕೊಚ್ಚಿ ಕೊಂದ ಪತಿ
ಸಾಂದರ್ಭಿಕ ಚಿತ್ರ
Updated By: ರಮೇಶ್ ಬಿ. ಜವಳಗೇರಾ

Updated on: Dec 01, 2022 | 8:26 PM

ಯಾದಗಿರಿ: ಅನೈತಿಕ ಸಂಬಂಧ ಹಿನ್ನೆಲೆ ಪತಿಯೇ ತನ್ನ ಪತ್ನಿ ಹಾಗೂ ಆಕೆ ಪ್ರಿಯಕರನನ್ನು ಕಲ್ಲು ಎತ್ತಿ ಹಾಕಿ ಬಳಿಕ ಕುಡುಗೋಲಿನಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಿದ್ದಾನೆ. ಈ ಘಟನೆ ಇಂದು(ಡಿಸೆಂಬರ್ 01) ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಾಚಾಪುರ ಗ್ರಾಮದಲ್ಲಿ ನಡೆದಿದೆ. ಪತ್ನಿ ಬಸಮ್ಮ ಬೆರೆ ವ್ಯಕ್ತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆ ಪತಿಯೇ ಕೊಲೆ ಮಾಡಿದ್ದಾನೆ.

ಬಸಮ್ಮ ಹಾಗೂ ಆಕೆಯ ಪ್ರಿಯಕರ ನಾಡಗೌಡ ಹತ್ಯೆಯಾದವರು. ಬಸಮ್ಮಳ ಪತಿ ಮಲ್ಲಣ್ಣ ಕೊಲೆ ಮಾಡಿದ ಆರೋಪಿ. ಬಸಮ್ಮ ಹಾಗೂ ಪ್ರಿಯಕರ ನಾಡಗೌಡ ಹಳ್ಳದ ಮನೆ ನಡುವೆ ಅನೈತಿಕ ಸಂಬಂಧ ಇತ್ತು. ಅದರಂತೆ ಇಂದು(ಗುರುವಾರ) ಹತ್ತಿ ಹೊಲದಲ್ಲಿ ಏಕಾಂತದಲ್ಲಿದ್ದಾಗ ಗಂಡ ಮಲ್ಲಣ್ಣನ ಕೈಗೆ ಸಿಕ್ಕಿಬಿದ್ದಿದ್ದಾರೆ.

ಇಬ್ಬರನ್ನು ಕಂಡ ಮಲ್ಲಣ್ಣನ ಕೋಪ ನೆತ್ತಿಗೇರಿದ್ದು, ಇಬ್ಬರ ಮೇಲೂ ಕಲ್ಲು ಎತ್ತಿ ಹಾಕಿದ್ದಾನೆ. ಬಳಿಕ ಕುಡುಗೊಲುನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಾಡಗೌಡನ ಜಮೀನಿನಲ್ಲೇ ಕೃತ್ಯ ನಡೆದಿದ್ದು, ಸ್ಥಳಕ್ಕೆ ಕೆಂಭಾವಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಕೊಲೆ ಆರೋಪಿ ಮಲ್ಲಣ್ಣನನ್ನು ಬಂಧಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ