ಯಾದಗಿರಿ: ಸ್ಕೂಲ್ ಲೈಫ್ ಅಂದ್ರೆ ಒಂಥರಾ ಖುಷಿ. ಇಲ್ಲೂ ಅಷ್ಟೇ ಮಕ್ಕಳು ನಲಿದಾಡಿಕೊಂಡೇ ಶಾಲೆಗೆ ಹೋಗ್ತಾರೆ. ಆದ್ರೆ ಕ್ಲಾಸ್ರೂಮ್ ಒಂಥರಾ ಕುರಿದೊಡ್ಡಿಯಂತಾಗಿದೆ. ಅದಕ್ಕಿಂತ ಡೇಂಜರಸ್ ಅಂದ್ರೆ ಮಕ್ಕಳ ಪಕ್ಕದಲ್ಲೇ ಬಿಸಿಯೂಟ ತಯಾರು ಕೂಡ ಆಗುತ್ತೆ. ಮಕ್ಕಳ ಪಕ್ಕದಲ್ಲೇ ಸಿಲಿಂಡರ್ ಕೂಡ ಇದೆ. ಇಂಥಾ ಸ್ಥಿತಿಯಲ್ಲಿ ಮೇಷ್ಟ್ರು ಮಕ್ಕಳಿಗೆ ಪಾಠ ಮಾಡ್ಬೇಕು. ಹಂಗಂತ ಇದೇನು ಒಂದು ತರಗತಿಯಲ್ಲ. ಒಂದರಿಂದ ಐದನೇ ತರಗತಿ ಮಕ್ಕಳು ಒಂದೇ ಕೋಣೆಯಲ್ಲೇ ಪಾಠ ಕೇಳ್ಬೇಕಾಗಿದೆ.
ಒಂದೇ ಕೋಣೆಯಲ್ಲಿ ಪಾಠ:
ಮುಖ್ಯ ಶಿಕ್ಷಕರ ಕಚೇರಿ ಇದೇ ಚಿಕ್ಕದಾದ ಕೋಣೆಯಲ್ಲೇ ಇದೆ. ಮುಖ್ಯ ಶಿಕ್ಷಕರು ಕುತ್ಕೊಂಡ್ರೆ ಸಹಾಯಕ ಶಿಕ್ಷಕ ಪಾಠ ಮಾಡಬೇಕು. ಶಿಕ್ಷಕರು 5ನೇ ತರಗತಿಯ ಮಕ್ಕಳಿಗೆ ಪಾಠ ಮಾಡಿದ್ರೆ ಉಳಿದ ನಾಲ್ಕು ತರಗತಿಯ ಮಕ್ಕಳು ಇದೆ ಪಾಠವನ್ನ ಕೇಳಬೇಕು. ಈ ಬಗ್ಗೆ ಸಾಕಷ್ಟು ಬಾರಿ ಶಾಸಕರಿಗೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ರೆ, ಸರ್ಕಾರಿ ಜಮೀನು ಇಲ್ಲ ಅಂತಾ ಹೊಸ ಶಾಲಾ ಕಟ್ಟಡವನ್ನ ಕಟ್ಟಿಸಿಕೊಡದೆ ನೆಪ ಹೇಳ್ತಿದ್ದಾರಂತೆ.
1ರಿಂದ 5ನೇ ತರಗತಿ ಸ್ಟೂಡೆಂಟ್ಸ್ಗೆ ಅಲ್ಲೇ ಊಟ:
Published On - 6:58 pm, Fri, 10 January 20