ಪಡಿತರ ಅಕ್ಕಿಯಲ್ಲಿ ಪ್ಲ್ಯಾಸ್ಟಿಕ್ ಅಕ್ಕಿ ಸೇರಿರುವ ಆರೋಪ, ಕರಡಕಲ್‌ನ ನ್ಯಾಯಬೆಲೆ ಅಂಗಡಿ ವಿರುದ್ಧ ಗ್ರಾಮಸ್ಥರ ಆಕ್ರೋಶ

| Updated By: ಆಯೇಷಾ ಬಾನು

Updated on: Nov 30, 2021 | 1:17 PM

ಪ್ರತಿ ತಿಂಗಳಿನಂತೆ ಗ್ರಾಮಸ್ಥರಿಗೆ ನ್ಯಾಯಬೆಲೆ ಅಂಗಡಿಯಿಂದ ರೇಷನ್ ಅಕ್ಕಿ ಸೇರಿದಂತೆ ಆಹಾರ ಧಾನ್ಯಗಳನ್ನ ವಿತರಣೆ ಮಾಡಲಾಗುತ್ತೆ. ಹೀಗಾಗಿ ಈ ತಿಂಗಳಿನ ರೇಷನ್ ವಿತರಣೆ ಮಾಡುವಾಗ ಗ್ರಾಮಸ್ಥರು ಆರೋಪಿಸಿದ್ದಾರೆ. ನಿನ್ನ ಗ್ರಾಮಸ್ಥರು ರೇಷನ್ ಅಕ್ಕಿ ಪಡೆದ ಬಳಿಕ ಪ್ಲಾಸ್ಟಿಕ್ ಅಕ್ಕಿಗಳು ಕಂಡು ಬಂದಿವೆ ಅಂತ ಮನೆಗೆ ಹೋಗಿ ಸುಡುವ ಹಂಚಿನ‌ ಮೇಲೆ ಹಾಕಿ ಚೆಕ್ ಮಾಡಿದ್ದಾರೆ.

ಪಡಿತರ ಅಕ್ಕಿಯಲ್ಲಿ ಪ್ಲ್ಯಾಸ್ಟಿಕ್ ಅಕ್ಕಿ ಸೇರಿರುವ ಆರೋಪ, ಕರಡಕಲ್‌ನ ನ್ಯಾಯಬೆಲೆ ಅಂಗಡಿ ವಿರುದ್ಧ ಗ್ರಾಮಸ್ಥರ ಆಕ್ರೋಶ
Follow us on

ಯಾದಗಿರಿ: ಗ್ರಾಮದ‌ ನ್ಯಾಯಬೆಲೆ‌ ಅಂಗಡಿಯಲ್ಲಿ ಪಡಿತರ ರೇಷನ್ ಕಾರ್ಡ್ ಹೊಂದಿದವರಿಗೆ ವಿತರಣೆ ಮಾಡುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿವೇ ಅಂತ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ನಿನ್ನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕರಡಕಲ್ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಈ ಘಟನೆ ನಡೆದಿದೆ.

ಪ್ರತಿ ತಿಂಗಳಿನಂತೆ ಗ್ರಾಮಸ್ಥರಿಗೆ ನ್ಯಾಯಬೆಲೆ ಅಂಗಡಿಯಿಂದ ರೇಷನ್ ಅಕ್ಕಿ ಸೇರಿದಂತೆ ಆಹಾರ ಧಾನ್ಯಗಳನ್ನ ವಿತರಣೆ ಮಾಡಲಾಗುತ್ತೆ. ಹೀಗಾಗಿ ಈ ತಿಂಗಳಿನ ರೇಷನ್ ವಿತರಣೆ ಮಾಡುವಾಗ ಗ್ರಾಮಸ್ಥರು ಆರೋಪಿಸಿದ್ದಾರೆ. ನಿನ್ನ ಗ್ರಾಮಸ್ಥರು ರೇಷನ್ ಅಕ್ಕಿ ಪಡೆದ ಬಳಿಕ ಪ್ಲಾಸ್ಟಿಕ್ ಅಕ್ಕಿಗಳು ಕಂಡು ಬಂದಿವೆ ಅಂತ ಮನೆಗೆ ಹೋಗಿ ಸುಡುವ ಹಂಚಿನ‌ ಮೇಲೆ ಹಾಕಿ ಚೆಕ್ ಮಾಡಿದ್ದಾರೆ. ಇನ್ನು ಹಂಚಿನ ಮೇಲೆ ಹಾಕಿ ಚೆಕ್ ಮಾಡಿದ್ದಾಗ ಅಕ್ಕಿ ಬೆಂದ ಬಳಿಕ ಹಂಚಿಗೆ ಮೆತ್ತಿಕೊಂಡಿದ್ದು ಗ್ರಾಮಸ್ಥರಿಗೆ ಶಾಕ್ ಅಗಿದೆ. ಇದೆ ಮೊದಲು ಇಂತಹ ಅನುಭವ ಗ್ರಾಮಸ್ಥರಿಗೆ ಆಗಿದ್ದು ಪ್ಲಾಸ್ಟಿಕ್ ಅಕ್ಕಿನೇ ಇದು ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇನ್ನು ಸ್ಥಳಕ್ಕೆ ಬಂದ ಆಹಾರ ಇಲಾಖೆ‌ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇನ್ನು ಅಧಿಕಾರಿಗಳು ಪರಿಶೀಲನೆ ಬಳಿಕ ಸತ್ಯ ಗೊತ್ತಾಗಿದೆ. ಇದು ಶಾಲಾ ಮಕ್ಕಳ ಬಿಸಿಯೂಟಕ್ಕೆ ಬಳಕೆಯಾಗಬೇಕಿದ್ದ ಅಕ್ಕಿಯನ್ನ ಅಧಿಕಾರಿಗಳ ಯಡವಟ್ಟಿನಿಂದ ನ್ಯಾಯಬೆಲೆ ಅಂಗಡಿಗೆ ಬಂದಿದೆ ಎಂದು ಗೊತ್ತಾಗಿದೆ. ಇದು ಪ್ಲಾಸ್ಟಿಕ್ ಅಕ್ಕಿ ಅಲ್ಲ ಬದಲಿಗೆ ಶಾಲಾ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಇಂತಹ ಅಕ್ಕಿಗಳ ಬಳಕೆ ಮಾಡಲಾಗುತ್ತೆ ಎಂದು ಗ್ರಾಮಸ್ಥರಿಗೆ ಅಧಿಕಾರಿಗಳು ತಿಳಿ ಹೇಳಿದ್ದಾರೆ. ಆದ್ರೆ ಗ್ರಾಮಸ್ಥರು ಮಾತ್ರ ಅಧಿಕಾರಿಗಳ ಮಾತಿನಿಂದ ಸಮಾಧಾನಗೊಳ್ಳದೇ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಪ್ಲಾಸ್ಟಿಕ್ ಅಕ್ಕಿ ಅಲ್ಲ. ಬದಲಿಗೆ ಶಾಲೆಗಳಲ್ಲಿ ಮಾಡುವ ಬಿಸಿಯೂಟಕ್ಕೆ ಬಳಕೆಯಾಗುವ ಅಕ್ಕಿಯಾಗಿದೆ. ನಿನ್ನೆ ಗ್ರಾಮಸ್ಥರು ಮಾಹಿತಿ ಕೊಟ್ಟ ಹಿನ್ನಲೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಇನ್ನು ಅಧಿಕಾರಿಗಳು ಮಾಡಿರುವ ಯಡವಟ್ಟಿನಿಂದ ಶಾಲೆಗೆ ಹೋಗಬೇಕಿದ್ದ ಅಕ್ಕಿ ರೇಷನ್ ಅಂಗಡಿಗೆ ಬಂದಿದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ರಾಜು ಸ್ಪಷ್ಟನೆ ನೀಡಿದ್ದಾರೆ.

ವರದಿ: ಅಮೀನ್ ಹೊಸುರ್, ಟಿವಿ9 ಕನ್ನಡ ಯಾದಗಿರಿ

ಇದನ್ನೂ ಓದಿ: ಪ್ರಕೃತಿ ಪ್ರಿಯರಿಗೆ ಗುಡ್ ನ್ಯೂಸ್; ಡಿಸೆಂಬರ್ 1ರಿಂದ ವಿಶ್ವವಿಖ್ಯಾತ ಪ್ರವಾಸಿತಾಣ ನಂದಿ ಹಿಲ್ಸ್ ಪ್ರವೇಶಕ್ಕೆ ಅನುಮತಿ

Published On - 9:36 am, Tue, 30 November 21