ಯಾದಗಿರಿ: PSI ಅಕ್ರಮ ನೇಮಕಾತಿ ಹಗರಣ ಹಿನ್ನೆಲೆ ಕಲ್ಯಾಣ ಕರ್ನಾಟಕ ಕೋಟಾದಡಿ 22ನೇ ರ್ಯಾಂಕ್ ಪಡೆದಿದ್ದ ಸಿದ್ದು ಎಂಬಾತನನ್ನು ಕಲಬುರ್ಗಿಯ ಸಿಐಡಿ ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಇವತ್ತು ಅರೆಸ್ಟ್ ಆಗಿರುವ ಅಭ್ಯರ್ಥಿ ಸಿದ್ದಗೌಡ ಯಾದಗಿರಿ ತಾಲೂಕಿನ ಮುದ್ನಾಳ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಫ್ಡಿಎ ಆಗಿ ಕೆಲಸ ಮಾಡ್ತಾಯಿದ್ದ.
22ನೇ Rank ಪಡೆದಿದ್ದ ಸಿದ್ದಗೌಡ ಇದಕ್ಕೂ ಮೊದಲು ಎರಡು ಬಾರಿ ಸಿಐಡಿ ವಿಚಾರಣೆಗೆ ಹಾಜರಾಗಿದ್ದ. ನಿನ್ನೆ ವಿಚಾಣೆಗೆಂದು ಕರೆದುಕೊಂಡು ಬಂದು ಅರೆಸ್ಟ್ ಮಾಡಲಾಗಿದೆ. ಸಿದ್ದುಗೌಡ ಅಭ್ಯರ್ಥಿ ಹಾಗೂ ಮದ್ಯವರ್ತಿಯೂ ಆಗಿದ್ದ. ಬಂಧಿತ ಸಿದ್ದು, ಹಗರಣದ ಕಿಂಗ್ ಪಿನ್ ಆರ್.ಡಿ. ಪಾಟೀಲ್ ಸಂಬಂಧಿ ಎಂಬುದು ಗಮನಾರ್ಹ. ಹಗರಣ ಬಯಲಾಗುತ್ತಿದ್ದ ಹಾಗೆಯೇ ಜೂನ್ 4 ರಿಂದ 19 ರ ವರೆಗೆ ಅನಾರೋಗ್ಯದ ನೆಪವೊಡ್ಡಿ ಸಿದ್ದು ರಜೆಯಲ್ಲಿದ್ದ.
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಇಥಿಯೋಪಿಯಾದಿಂದ ಸಾಗಿಸ್ತಿದ್ದ 112 ಕೋಟಿ ರೂ ಮೌಲ್ಯದ ಹೆರಾಯಿನ್ ಜಪ್ತಿ
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 112 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ ಮಾಡಲಾಗಿದೆ. ಇಥಿಯೋಪಿಯಾದಿಂದ ದೆಹಲಿಗೆ ಸಾಗಿಸುತ್ತಿದ್ದ ವೇಳೆ ಅಪಾರ ಮೌಲ್ಯದ ಹೆರಾಯಿನ್ ಜಪ್ತಿಯಾಗಿದೆ. ಟ್ರಾಲಿ ಬ್ಯಾಗ್ನಲ್ಲಿ 16 ಕೆಜಿ ಹೆರಾಯಿನ್ ಸಾಗಿಸುತ್ತಿದ್ದ ವಿದೇಶಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಕಂದಾಯ ಗುಪ್ತಚರ ನಿರ್ದೇಶನಾಯದ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಮಾದಕ ಸರಕಿನೊಂದಿಗೆ ಇಥಿಯೋಪಿಯಾದಿಂದ ಬೆಂಗಳೂರಿಗೆ (ಕೆಐಎಬಿ) ಬಂದು ನಂತರ, ದೆಹಲಿಗೆ ತೆರಳುತ್ತಿದ್ದ.
ಮಗನ ಮೇಲೆ ಚಿರತೆ ದಾಳಿ; ಸುದ್ದಿ ತಿಳಿದು ತಾಯಿ ಹೃದಯಾಘಾತದಿಂದ ಸಾವು
ಬೆಳಗಾವಿ: ಮಗನ ಮೇಲೆ ಚಿರತೆ ದಾಳಿ ಮಾಡಿದೆ ಎಂಬ ಸುದ್ದಿ ತಿಳಿದು ತಾಯಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಕೆ.ಹೆಚ್.ಖನಗಾವಿ ಗ್ರಾಮದಲ್ಲಿ ನಡೆದಿದೆ. ತಾಯಿ ಶಾಂತಾ ಮಿರಜಕರ್(65) ಮೃತ ದುರ್ದೈವಿ. ಕಟ್ಟಡ ಕಾರ್ಮಿಕ ಜಾಧವ್ನಗರದಲ್ಲಿ ಸಿದ್ದರಾಯಿ ಮಿರಜಕರ್ ಎಂಬುವರ ಮೇಲೆ ಚಿರತೆ ದಾಳಿ ಮಾಡಿತ್ತು. ಇದರಿಂದ ಗಾಯಗೊಂಡ ಸಿದ್ದರಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬರುತ್ತಿದ್ದರು. ಈ ವೇಳೆ ಮಗನ ಮೇಲೆ ಚಿರತೆ ದಾಳಿ ಮಾಡಿದೆ ಎಂದು ಸುದ್ದಿ ತಿಳಿದು ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Published On - 9:08 pm, Fri, 5 August 22