ಪರೀಕ್ಷಾ ಕೇಂದ್ರದಲ್ಲಿ ನಿಯಮ ಉಲ್ಲಂಘಿಸಿದ ಯಾದಗಿರಿ ಶಾಸಕರ ಪುತ್ರ; ಹುಟ್ಟುಹಬ್ಬ ಹಿನ್ನೆಲೆ ಗಿಡ ನೆಟ್ಟ ಮಹೇಶರೆಡ್ಡಿ ಮುದ್ನಾಳ್

| Updated By: preethi shettigar

Updated on: Mar 28, 2022 | 11:44 AM

ಯಾದಗಿರಿ ಬಿಜೆಪಿ ಶಾಸಕ ವೆಂಕಟರಡ್ಡಿ ಮುದ್ನಾಳ್ ಪುತ್ರ, ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿದ್ದಾರೆ. ಶಾಸಕರ ಪುತ್ರ ಮಹೇಶರೆಡ್ಡಿ ಮುದ್ನಾಳ್ ಜನ್ಮ ದಿನದ ಪ್ರಯುಕ್ತ ಪರೀಕ್ಷಾ ಕೇಂದ್ರದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ.

ಪರೀಕ್ಷಾ ಕೇಂದ್ರದಲ್ಲಿ ನಿಯಮ ಉಲ್ಲಂಘಿಸಿದ ಯಾದಗಿರಿ ಶಾಸಕರ ಪುತ್ರ; ಹುಟ್ಟುಹಬ್ಬ ಹಿನ್ನೆಲೆ ಗಿಡ ನೆಟ್ಟ ಮಹೇಶರೆಡ್ಡಿ ಮುದ್ನಾಳ್
ಹುಟ್ಟುಹಬ್ಬ ಹಿನ್ನೆಲೆ ಗಿಡ ನೆಟ್ಟ ಮಹೇಶರೆಡ್ಡಿ ಮುದ್ನಾಳ್
Follow us on

ಯಾದಗಿರಿ: ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರದ ಆವರಣದಲ್ಲೇ ನಿಯಮ ಉಲ್ಲಂಘನೆ ಮಾಡಿದ ಘಟನೆ ಯಾದಗಿರಿಯ ಪಿಯು ಕಾಲೇಜಿನ (PU College) ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ. ಯಾದಗಿರಿ ಬಿಜೆಪಿ (BJP) ಶಾಸಕ ವೆಂಕಟರಡ್ಡಿ ಮುದ್ನಾಳ್ ಪುತ್ರ, ಅಧಿಕಾರಿಗಳು ನಿಯಮ ಉಲ್ಲಂಘನೆ (Rules break) ಮಾಡಿದ್ದಾರೆ. ಶಾಸಕರ ಪುತ್ರ ಮಹೇಶರೆಡ್ಡಿ ಮುದ್ನಾಳ್ ಜನ್ಮ ದಿನದ ಪ್ರಯುಕ್ತ ಪರೀಕ್ಷಾ ಕೇಂದ್ರದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ.

ಶಾಸಕರ ಪುತ್ರನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಪರೀಕ್ಷೆ ನಡೆಯುವ ಸ್ಥಳದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಪರವಾನಿಗೆ ನೀಡಿದ್ಯಾರು? ಎಂಬ ಪ್ರಶ್ನೆ ಸದ್ಯ ಸಾರ್ವಜನಿಕ ವಲಯದಲ್ಲಿ ಉದ್ಭವವಾಗಿದೆ.

ಬೆಂಗಳೂರು: ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿನಿ

ಇಂದಿನಿಂದ ರಾಜ್ಯಾದ್ಯಂತ ಎಸ್ಎಸ್ಎಲ್​ಸಿ ಪರೀಕ್ಷೆ ಆರಂಭವಾಗಿದೆ. 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾಳೆ. ಈ ವೇಳೆ ಪ್ರಶ್ನಿಸಿದಾಗ, ನನಗೆ ಶಿಕ್ಷಣ ಇಲಾಖೆಯ ಆದೇಶ ಗೊತ್ತಿಲ್ಲ. ನೋ ಐಡಿಯಾ ಎಂದಿದ್ದಾಳೆ. ಶಾಲೆಯಲ್ಲಿ ನಮಗೆ ಈ ಆದೇಶದ ಬಗ್ಗೆ ಹೇಳಿಲ್ಲ. ಹಿಜಾಬ್ ತೆಗೆಯಿರಿ ಅಂದರೆ ರಿಮೂವ್ ಮಾಡಿ ಹೋಗುತ್ತೇವೆ. ಇಲ್ಲ ಅಂದರೆ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುತ್ತೇವೆ ಎಂದಿದ್ದಾಳೆ.

ಮನೆಯಲ್ಲೂ ನಮ್ಮ ಪೋಷಕರು ಹೇಳಿ ಕಳುಹಿಸಿದ್ದಾರೆ. ಹಿಜಾಬ್ಗೆ ಅವಕಾಶ ನೀಡಿಲ್ಲ ಅಂದರೆ ತೆಗೆದು ಪರೀಕ್ಷೆ ಬರೆಯಲು ಸೂಚಿಸಿದ್ದಾರೆ. ಅದರಂತೆ ಪರೀಕ್ಷೆ ಬರೆಯುತ್ತೇವೆ ಅಂತ ಶಿವಾಜಿನಗರದ ಬಳಿಯ ಸರ್ಕಾರಿ ವಿಕೆಓ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿ ಹೇಳಿದ್ದಾಳೆ.

ಇನ್ನು ರಾಯಚೂರು ನಗರದ ಸರ್ಕಾರಿ ಶಾಲೆಗೆ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬಂದಿದ್ದಾರೆ. ಬಳಿಕ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತೆಗೆದಿದ್ದಾರೆ. ಹಿಜಾಬ್ ತೆಗೆದ ಬಳಿಕ ಪರೀಕ್ಷಾ ಕೇಂದ್ರದೊಳಗೆ ಸಿಬ್ಬಂದಿ ಅನುಮತಿ ನೀಡಿದ್ದಾರೆ. ರಾಮನಗರದಲ್ಲೂ ವಿದ್ಯಾರ್ಥಿನಿಯರು ಹಿಜಾಬ್, ಬುರ್ಕಾ ಧರಿಸಿ ಪರೀಕ್ಷಾ ಕೇಂದ್ರಗಳತ್ತ ಆಗಮಿಸಿದ್ದಾರೆ.  ಹಿಜಾಬ್ ಕಳಚಿ ಬರುವಂತೆ ಶಿಕ್ಷಕರು ಸೂಚನೆ ನೀಡಿದ್ದು,  ಹಿಜಾಬ್, ಬುರ್ಕಾ ತೆಗೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

ಇದನ್ನೂಓದಿ:

ಹಿಜಾಬ್ ಧರಿಸಿಕೊಂಡು ಬಂದ್ರೆ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಇಲ್ಲ ಎಂಟ್ರಿ; ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆದೇಶ

ಇಂದಿನಿಂದ ರಾಜ್ಯಾದ್ಯಂತ ಎಸ್ಎಸ್ಎಲ್​ಸಿ ಪರೀಕ್ಷೆ; ತಳಿರು ತೋರಣಗಳಿಂದ ಕಂಗೊಳಿಸುತ್ತಿರುವ ಎಕ್ಸಾಮ್​​ ಸೆಂಟರ್

 

Published On - 11:41 am, Mon, 28 March 22