ನೀರಾವರಿ ಯೋಜನೆ ಜಾರಿಗೆ ಬರಬೇಕು ಅಂದ್ರೆ ನಾಲ್ಕು ಸರ್ಕಾರ ಬದಲಾಗಬೇಕು: ಸಿಎಂ ಬಸವರಾಜ್ ಬೊಮ್ಮಾಯಿ

| Updated By: preethi shettigar

Updated on: Mar 19, 2022 | 4:53 PM

ನೀರಾವರಿ ಯೋಜನೆ ಜಾರಿಗೆ ಬರಬೇಕು ಅಂದರೆ ನಾಲ್ಕು ಸರ್ಕಾರ ಬದಲಾಗಬೇಕು. ಒಂದು ಸರ್ಕಾರ ಮಂಜೂರು ಮಾಡಬೇಕು, ಇನ್ನೋಂದು ಸರ್ಕಾರ ಚಾಲನೆ ನೀಡಬೇಕು. ಮೂರನೇ ಸರ್ಕಾರ ಹಣ ಬಿಡುಗಡೆ ಮಾಡಬೇಕು. ನಾಲ್ಕನೇ ಸರ್ಕಾರ ಅದಕ್ಕೆ ಉದ್ಘಾಟನೆ ಮಾಡಬೇಕು. ಆದ್ರೆ ನಮ್ಮ ಸರ್ಕಾರ ಈ ಸಂಪ್ರದಾಯ ಬದಲಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನೀರಾವರಿ ಯೋಜನೆ ಜಾರಿಗೆ ಬರಬೇಕು ಅಂದ್ರೆ ನಾಲ್ಕು ಸರ್ಕಾರ ಬದಲಾಗಬೇಕು: ಸಿಎಂ ಬಸವರಾಜ್ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
Follow us on

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ನಡೆಯುತ್ತಿರುವ ಜಿಲ್ಲಾಡಳಿತದ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಮಾತನಾಡಿದ್ದಾರೆ. 1060 ಕೋಟಿ ರೂ. ವೆಚ್ಚದ ಅಡಿಗಲ್ಲು ಸಮಾರಂಭದಲ್ಲಿ ಭಾಗಿಯಾಗಿದ್ದೇನೆ. ದೇವತ್ಕಲ್ ಗ್ರಾಮದಲ್ಲಿ ಇಂದು(ಮಾರ್ಚ್ 19) ಐತಿಹಾಸಿಕ ದಿನ. 1060 ಕೋಟಿಯ ಕಾಮಗಾರಿಗಳಿಗೆ ಚಾಲನೆ(Inauguration) ನೀಡ್ತಾಯಿರೋದು ದಾಖಲೆ. ಇದಕ್ಕಿಂತ‌ ಹೆಚ್ಚಾಗಿ ನೀಮ್ಮ ಪ್ರೀತಿ ದೊಡ್ಡದ್ದು. ಅದಕ್ಕೆ ಬೆಲೆ ಕಟ್ಟಲು ಆಗಲ್ಲ. ಸರ್ಕಾರ ಶ್ರೀಮಂತವಾಗಿರಬೇಕಾ.? ಜನ ಶ್ರೀಮಂತರಾಗಿರಬೇಕಾ? ಜನ ಶ್ರೀಮಂತರಾದರೆ ಸರ್ಕಾರ(Government) ಶ್ರೀಮಂತ ಆಗುತ್ತೆ‌‌ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ನೀರಾವರಿ ಯೋಜನೆ ಜಾರಿಗೆ ಬರಬೇಕು ಅಂದರೆ ನಾಲ್ಕು ಸರ್ಕಾರ ಬದಲಾಗಬೇಕು. ಒಂದು ಸರ್ಕಾರ ಮಂಜೂರು ಮಾಡಬೇಕು, ಇನ್ನೋಂದು ಸರ್ಕಾರ ಚಾಲನೆ ನೀಡಬೇಕು. ಮೂರನೇ ಸರ್ಕಾರ ಹಣ ಬಿಡುಗಡೆ ಮಾಡಬೇಕು. ನಾಲ್ಕನೇ ಸರ್ಕಾರ ಅದಕ್ಕೆ ಉದ್ಘಾಟನೆ ಮಾಡಬೇಕು. ಆದ್ರೆ ನಮ್ಮ ಸರ್ಕಾರ ಈ ಸಂಪ್ರದಾಯ ಬದಲಿಸಲಿದೆ ಎಂದು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಲ್ಲಿ ಅಪೌಷ್ಟಿಕತೆಯಿದೆ:  ಸಿಎಂ ಬಸವರಾಜ ಬೊಮ್ಮಾಯಿ

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ನಾವು ಮೂರು ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ನಾವು ಪೂರ್ತಿ ಹಣ ಬಳಕೆ ಮಾಡುತ್ತೇವೆ. ನಮ್ಮ ಸರ್ಕಾರ ರೈತ ಪರವಾಗಿರುವ ಸರ್ಕಾರ. ಹತ್ತು ಲಕ್ಷ ರೈತರಿಗೆ ಸಾಲ ಕೊಡುವ ಕೆಲಸ ಮಾಡುತ್ತೇವೆ. 300 ಕೋಟಿ ರೂ. ಕೊಟ್ಟು ಯಶಸ್ವಿನಿ ಯೋಜನೆ ಆರಂಭಿಸುತ್ತೇವೆ. ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಲ್ಲಿ ಅಪೌಷ್ಟಿಕತೆಯಿದೆ. ಆರೋಗ್ಯ, ಶಿಕ್ಷಣ ಹಾಗೂ ಅಪೌಷ್ಟಿಕತೆ ನಿವಾರಣೆಗಾಗಿ ಜನ ಕಲ್ಯಾಣ ಯೋಜನೆಯಲ್ಲಿ ಮೂರು ಸಾವಿರ ಕೋಟಿ ಮೀಸಲಿಟ್ಟಿದ್ದೇವೆ. ಯಾದಗಿರಿ ಜಿಲ್ಲೆ ರಚನೆಯಾದಾಗ ನಾವು ಸ್ವಲ್ಪ ದಿನ ಉಸ್ತುವಾರಿ ಸಚಿವನಾಗಿದ್ದೆ‌. ಎಲ್ಲದ್ದಕ್ಕೂ ಯಸ್ ಎನ್ನುವ ರೀತಿಯಲ್ಲಿ ರಾಜುಗೌಡ ನಮ್ಗೆ ಮಾಟಮಂತ್ರ ಮಾಡಿದ್ದಾನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ನಗೆ ಚಟಾಕಿ ಹಾರಿಸಿದ್ದಾರೆ.

ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದು ನಮ್ಮ ಧ್ಯೇಯವಾಗಿದೆ: ಸಿಎಂ ಬಸವರಾಜ ಬೊಮ್ಮಾಯಿ

ನಿನ್ನೆ ಗುಜರಾತ್‌ನಲ್ಲಿ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದ್ದಾರೆ. ಈ ಕುರಿತು ನಮ್ಮ ಸಚಿವರು ಚರ್ಚೆ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯವರು ವಿವರ ಪಡೆದ ನಂತರ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ. ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದು ನಮ್ಮ ಧ್ಯೇಯವಾಗಿದೆ. ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಬೇಕೆಂದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದು ನಮ್ಮ ಧ್ಯೇಯ ಎಂದು ದೇವತ್ಕಲ್‌ನಲ್ಲಿ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಯಾದಗಿರಿ ಜಿಲ್ಲಾಧಿಕಾರಿಯನ್ನು ಹಾಡಿ ಹೊಗಳಿದ ಸಚಿವ ಆರ್.ಅಶೋಕ್

ದಿನದ 24 ಗಂಟೆಯಲ್ಲಿ ಹಳ್ಳಿಯಲ್ಲಿ ಇರುತ್ತೇನೆ ಎಂದು ಈ ಹಿಂದೆ ವಿಡಿಯೋ ಕಾನ್ಫರೆನ್ಸ್ ವೇಳೆ ಯಾದಗಿರಿ ಡಿಸಿ ರಾಗಪ್ರಿಯಾ ಹೇಳಿದ್ರು. ನಾನು ಬೇರೆ ಬೇರೆ ಡಿಸಿಗಳ ಜೊತೆ ಮಾತನಾಡಿದ್ದೆ. ಆದ್ರೆ ಯಾದಗಿರಿ ಡಿಸಿ ಮಾತ್ರ ದಿನದ 24 ಗಂಟೆ ಹಳ್ಳಿಯಲ್ಲಿ ಇರ್ತೇನೆ ಅಂತ ಹೇಳಿದ್ರು. 24 ಗಂಟೆಗಳ ಕಾಲ ಗ್ರಾಮದಲ್ಲು ಇದ್ದು ವಾಸ್ತವ್ಯ ಮಾಡುತ್ತೇನೆ ಎಂದಿದ್ದರು. ಗ್ರಾಮ ವಾಸ್ತವ್ಯದ ವೇಳೆ ಫಲಾನುಭವಿಗಳಿಗೆ ದಾಖಲಾತಿಗಳನ್ನ ನೀಡುತ್ತೇವೆ. ಇದರಿಂದ ಜನರಿಗೆ ಸೌಲತ್ತುಗಳು ಸಿಗೋಕೆ ಅವಕಾಶ ಸಿಗುತ್ತೆ ಎಂದು ಯಾದಗಿರಿ ಜಿಲ್ಲಾಧಿಕಾರಿಯನ್ನು ಸಚಿವ ಆರ್.ಅಶೋಕ್ ಹಾಡಿ ಹೊಗಳಿದ್ದಾರೆ.

ಕೃಷಿ ಕಣಕ್ಕೆ ನಮಿಸಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ ರಾಮಾಯಣ ಪುಸ್ತಕ ಹಾಗೂ ರಾಮ ಮಂದಿರ ಮೂರ್ತಿ ನೀಡಿ ಗೌರವಿಸಲಾಯಿತು. ಸಿಎಂ ಜೊತೆ ಸಚಿವರಾದ ಆರ್.ಅಶೋಕ್, ಗೋವಿಂದ ಕಾರಜೋಳ ಹಾಗೂ ಪ್ರಭು ಚೌಹಾಣ್ ಅವರಿಗೂ ಪುಸ್ತಕ ಮತ್ತು ಮೂರ್ತಿ ನೀಡಿ, ಶಾಸಕ ರಾಜುಗೌಡ ಗೌರವಿಸಿದರು.

ಇದನ್ನೂ ಓದಿ:

ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದು ನಮ್ಮ ಧ್ಯೇಯವಾಗಿದೆ; ಯಾದಗಿರಿಯಲ್ಲಿ ಸಿಎಂ ಬೊಮ್ಮಾಯಿ ಮಾತು

Holi 2022: ‘ಹೋಳಿ ಪರಿಸರ ಸ್ನೇಹಿಯಾಗಿರಲಿ’; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭಾಶಯ

Published On - 2:54 pm, Sat, 19 March 22