AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Holi 2022: ‘ಹೋಳಿ ಪರಿಸರ ಸ್ನೇಹಿಯಾಗಿರಲಿ’; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭಾಶಯ

PM Narendra Modi | CM Basavaraj Bommai: ಇಂದು ದೇಶಾದ್ಯಂತ ಹೋಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲಾದವರು ಶುಭಕೋರಿದ್ದಾರೆ.

Holi 2022: ‘ಹೋಳಿ ಪರಿಸರ ಸ್ನೇಹಿಯಾಗಿರಲಿ’; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭಾಶಯ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9 Web
| Updated By: shivaprasad.hs|

Updated on:Mar 18, 2022 | 8:55 AM

Share

ದೇಶದಲ್ಲಿ ಇಂದು ಸಡಗರ ಹಾಗೂ ಸಂಭ್ರಮದಿಂದ ಹೋಳಿ ಹಬ್ಬವನ್ನು (Holi 2022) ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಬಣ್ಣಗಳ ಹಬ್ಬ ಎಂದು ಕರೆಯಲ್ಪಡುವ ಹೋಳಿಯನ್ನು ದೇಶದ ವಿವಿಧ ಭಾಗಗಳಲ್ಲಿ ಬಹಳ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಗಣ್ಯರು ಹಾಗೂ ನಾಯಕರು ಹೋಳಿ ಹಬ್ಬಕ್ಕೆ ಶುಭ ಕೋರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಟ್ವೀಟ್ ಮೂಲಕ ಜನರಿಗೆ ಶುಭ ಕೋರಿದ್ದಾರೆ. ಹಬ್ಬವು ಜೀವನದಲ್ಲಿ ಸಂತೋಷದ ಬಣ್ಣವನ್ನು ತರಲಿ ಎಂದು ಅವರು ಹಾರೈಸಿದರು. ‘‘ನಿಮ್ಮೆಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಪರಸ್ಪರ ಪ್ರೀತಿ, ವಾತ್ಸಲ್ಯ ಮತ್ತು ಸಹೋದರತ್ವದ ಸಂಕೇತವಾಗಿರುವ ಈ ಹೋಳಿ ಹಬ್ಬವು ಜೀವನದಲ್ಲಿ ಸಂತೋಷದ ಬಣ್ಣವನ್ನು ತರಲಿ’’ ಎಂದು ಪ್ರಧಾನಿ ಟ್ವೀಟ್ ಟ್ವೀಟ್ ಮಾಡಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಟ್ವೀಟ್ ಮಾಡಿ ಹೋಳಿಯ ಶುಭಾಶಯ ಕೋರಿದ್ದಾರೆ. ‘‘ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಕೆಟ್ಟದನ್ನು ದಹಿಸಿ, ಒಳ್ಳೆಯದನ್ನು ಉಳಿಸಿಕೊಳ್ಳಿ ಎಂಬ ಸಂದೇಶ ಸಾರುವ ಈ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸೋಣ. ನಮ್ಮೆಲ್ಲರ ಜೀವನಗಳಲ್ಲಿ ಆರೋಗ್ಯ, ಸಮೃದ್ಧಿ, ಸಂತಸ, ಸಂಭ್ರಮದ ಬಣ್ಣಗಳೇ ಸದಾ ತುಂಬಿರಲಿ’’ ಎಂದು ಅವರು ಶುಭಾಶಯ ಕೋರಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್:

ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ ಸೇರಿದಂತೆ ಹಲವಾರು ಕೇಂದ್ರ ಸಚಿವರು ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ‘‘ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಬಣ್ಣಗಳು ಮತ್ತು ಸಂತೋಷದ ಈ ಮಹಾನ್ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಶಾಂತಿ, ಅದೃಷ್ಟ ಮತ್ತು ಹೊಸ ಶಕ್ತಿಯನ್ನು ತುಂಬಲಿ’’ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಅಮಿತ್ ಶಾ ಟ್ವೀಟ್ ಇಲ್ಲಿದೆ:

ಎರಡು ದಿನಗಳ ಈ ಹಬ್ಬವು ಫಾಲ್ಗುಣ ಮಾಸದ ಹುಣ್ಣಿಮೆಯ ದಿನದಂದು ‘ಹೋಲಿ ಕಾ ದಹನ್‌’ನೊಂದಿಗೆ ಪ್ರಾರಂಭವಾಗುತ್ತದೆ. ಮರುದಿನ ಹೋಳಿ ಹಬ್ಬದ ಮುಖ್ಯ ಆಚರಣೆಯ ಭಾಗವಾಗಿ ಜನರು ಬಣ್ಣಗಳನ್ನು ಎರಚಿ ಹೋಳಿ ಆಡುತ್ತಾರೆ. ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ಕಳೆದ ಎರಡು ವರ್ಷ ಹೋಳಿ ಸಂಭ್ರಮಾಚರಣೆ ಕಳೆಗುಂದಿತ್ತು. ಈ ಬಾರಿ ಪರಿಸ್ಥಿತಿ ಬಹುತೇಕ ಸುಧಾರಿಸಿರುವ ಕಾರಣ, ಎಲ್ಲೆಡೆ ಸಂಭ್ರಮದಿಂದ ಹಬ್ಬವನ್ನು ಆಚರಿಸಲಾಗುತ್ತಿದೆ.

ಇದನ್ನೂ ಓದಿ:

ಬದುಕಿಗೆ ಹೋಳಿ ರಂಗು ಖುಷಿ ತರಲಿ: ಪ್ರಧಾನಿ ನರೇಂದ್ರ ಮೋದಿ ಹಾರೈಕೆ

ಚುನಾವಣೆ ಭರವಸೆ ಈಡೇರಿಸದ ಪಕ್ಷಗಳಿಗೆ ದಂಡ ವಿಧಿಸಲು ಸಾಧ್ಯವಿಲ್ಲ; ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ

Published On - 8:54 am, Fri, 18 March 22

ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು