Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದುಕಿಗೆ ಹೋಳಿ ರಂಗು ಖುಷಿ ತರಲಿ: ಪ್ರಧಾನಿ ನರೇಂದ್ರ ಮೋದಿ ಹಾರೈಕೆ

ಹಬ್ಬದ ಬಣ್ಣಗಳು ಜನರ ಬದುಕಿಗೆ ಹೊಸ ಬಣ್ಣಗಳನ್ನು ನೀಡಲಿ. ಪರಸ್ಪರ ಪ್ರೀತಿ, ಭ್ರಾತೃತ್ವ ಮತ್ತು ವಿಶ್ವಾಸ ಎಲ್ಲರ ಬಾಳಿನಲ್ಲೂ ಬೆಳಗಬೇಕು. ಪ್ರತಿ ಬಣ್ಣವೂ ಬದುಕಿಗೆ ಸಂತಸ ತರಲಿ’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಬದುಕಿಗೆ ಹೋಳಿ ರಂಗು ಖುಷಿ ತರಲಿ: ಪ್ರಧಾನಿ ನರೇಂದ್ರ ಮೋದಿ ಹಾರೈಕೆ
ಪ್ರಧಾನಿ ಮೋದಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 18, 2022 | 8:34 AM

ದೆಹಲಿ: ಹೋಳಿ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶದ ಜನರಿಗೆ ಶುಕ್ರವಾರ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಹಬ್ಬವು ಜನರ ಬದುಕಿನಲ್ಲಿ ವೈವಿಧ್ಯಮಯ ರಂಗು ತರಲಿ ಎಂದು ಕೋರಿದ್ದಾರೆ. ‘ನಿಮ್ಮೆಲ್ಲರಿಗೂ ಹೋಳಿ ಶುಭಾಶಯಗಳು. ಹಬ್ಬದ ಬಣ್ಣಗಳು ಜನರ ಬದುಕಿಗೆ ಹೊಸ ಬಣ್ಣಗಳನ್ನು ನೀಡಲಿ. ಪರಸ್ಪರ ಪ್ರೀತಿ, ಭ್ರಾತೃತ್ವ ಮತ್ತು ವಿಶ್ವಾಸ ಎಲ್ಲರ ಬಾಳಿನಲ್ಲೂ ಬೆಳಗಬೇಕು. ಪ್ರತಿ ಬಣ್ಣವೂ ಬದುಕಿಗೆ ಸಂತಸ ತರಲಿ’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ವಸಂತಋತುವಿನ ಆಗಮನವನ್ನು ಸಾರುವ ಹೋಳಿ ಹಬ್ಬವು ಕೆಡುಕಿನ ವಿರುದ್ಧ ಒಳಿತು ಗೆದ್ದ ಸಂಭ್ರಮವನ್ನು ಸಾರಿ ಹೇಳುತ್ತದೆ. ಹಿಂದೂಗಳ ಸಾಂಪ್ರದಾಯಿಕ ಹಬ್ಬವೇ ಆಗಿದ್ದರೂ ಇತರ ಧರ್ಮ ಮತ್ತು ಮತಗಳ ಜನರೂ ಹೋಳಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಚಳಿಗಾಲದ ಬೆಳೆಗಳ ಕೊಯ್ಲು ಸಹ ಹೋಳಿಯ ನಂತರ ಆರಂಭವಾಗುತ್ತದೆ. ವಿವಿಧ ರೀತಿಯ ಸಿಹಿ ತಿನಿಸುಗಳನ್ನು ತಯಾರಿಸುವ ಮೂಲಕ, ಬಣ್ಣಗಳನ್ನು ಎರಚುವ ಮೂಲಕ ಹೋಳಿ ಆಚರಿಸುವುದು ವಾಡಿಕೆ.

ಬಣ್ಣಗಳ ಅರ್ಥವೇನು? ಹೋಳಿ ಎಂದರೇ ಬಣ್ಣಗಳ ಹಬ್ಬ. ವಿವಿಧ ಬಣ್ಣಗಳಿಗೆ ವಿವಿಧ ಅರ್ಥಗಳೂ ಇರುವುದು ವಿಶೇಷ. ಕೆಂಪನ್ನು ಪ್ರೀತಿ, ಉತ್ಸಾಹ ಮತ್ತು ಫಲವತ್ತತೆಯ ಪ್ರತೀಕ ಎನ್ನಲಾಗುತ್ತದೆ. ಕೇಸರಿಯು ಹೊಸ ಆರಂಭದ ಸಂಕೇತವಾಗಿದೆ. ಹಳದಿಯು ಸಂತೋಷ, ಶಾಂತಿ, ಆನಂದ, ಧ್ಯಾನ, ಜ್ಞಾನ ಮತ್ತು ಕಲಿಕೆಯನ್ನು ಪ್ರತಿನಿಧಿಸುತ್ತದೆ. ಗುಲಾಬಿಯು ದಯೆ, ಸಹಾನುಭೂಮಿ ಮತ್ತು ಸಕಾರಾತ್ಮಕತೆಯನ್ನು ಸೂಚಿಸುತ್ತದೆ. ಹಸಿರು ಬಣ್ಣವು ಪ್ರಕೃತಿ, ಜೀವನ ಮತ್ತು ಸುಗ್ಗಿಯ ದ್ಯೋತಕವಾಗಿದೆ. ನೇರಳೆ ಬಣ್ಣವು ರಹಸ್ಯದ ಸಂಕೇತ. ಕಡು ನೀಲಿ ಬಣ್ಣವು ಕೃಷ್ಣ ವರ್ಣ ಎಂದೇ ಹೆಸರುವಾಸಿ. ಇದು ಅಧ್ಯಾತ್ಮ ಪ್ರಗತಿಯ ಸಂಕೇತವಾಗಿದೆ.

ಇದನ್ನೂ ಓದಿ: ಹೋಳಿ ಹಬ್ಬದ ಆಫರ್; ತನ್ನ ಫಾರ್ಮ್​ಹೌಸ್​ನಲ್ಲಿ ಬೆಳೆದ ಹಣ್ಣುಗಳನ್ನು ಕೊಳ್ಳುವವರಿಗೆ ವಿಶೇಷ ರಿಯಾಯಿತಿ ಕೊಟ್ಟ ಧೋನಿ!

ಇದನ್ನೂ ಓದಿ: Holi 2022: ಅಕ್ಬರನ ಆಸ್ಥಾನದಿಂದ ಬುಲ್ಲೆಹ್ ಷಾ ವರೆಗೆ; ಹೋಳಿಯಲ್ಲಿ ಬೆರತ ಭಾರತದ ಅನೇಕ ಧರ್ಮಗಳ ಬಣ್ಣಗಳು

VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಸಿಎಂ ನೀಡಿರುವ ಸ್ಪಷ್ಟನೆ ರಾಜ್ಯದ ಜನತೆಗೆ ನೆಮ್ಮದಿ ನೀಡಿದೆ: ಸ್ಪೀಕರ್
ಸಿಎಂ ನೀಡಿರುವ ಸ್ಪಷ್ಟನೆ ರಾಜ್ಯದ ಜನತೆಗೆ ನೆಮ್ಮದಿ ನೀಡಿದೆ: ಸ್ಪೀಕರ್