ಹಿಂದಿಯಲ್ಲಿ ನಂಬರ್ 1 ಸ್ಥಾನಕ್ಕೇರಿದ TV9 ಭಾರತ್​ವರ್ಷ್: ಭಾರತದ ಅತಿದೊಡ್ಡ ನ್ಯೂಸ್ ನೆಟ್​ವರ್ಕ್ ಆಗಿ​ ಹೊರಹೊಮ್ಮಿದ TV9 ಸಮೂಹ

ಟಿವಿ9 ಸಮೂಹದ ಭಾರತ್​ವರ್ಷ್​ ಭಾರತದ ನಂಬರ್ 1 ಹಿಂದಿ ಸುದ್ದಿವಾಹಿನಿ ಸ್ಥಾನಕ್ಕೆ ಏರಿದೆ. ಸತತ 74 ವಾರಗಳ ಅವಿರತ ಪರಿಶ್ರಮವು ಹಿಂದಿ ಸುದ್ದಿಜಗತ್ತಿನಲ್ಲಿ ಹೊಸ ನಾಯಕನ ಉದಯವನ್ನು ಸಾಧ್ಯವಾಗಿಸಿದೆ

ಹಿಂದಿಯಲ್ಲಿ ನಂಬರ್ 1 ಸ್ಥಾನಕ್ಕೇರಿದ TV9 ಭಾರತ್​ವರ್ಷ್: ಭಾರತದ ಅತಿದೊಡ್ಡ ನ್ಯೂಸ್ ನೆಟ್​ವರ್ಕ್ ಆಗಿ​ ಹೊರಹೊಮ್ಮಿದ TV9 ಸಮೂಹ
ಟಿವಿ9 ಭಾರತ್​ವರ್ಷ್​ ಭಾರತದಲ್ಲಿ ಅತಿಹೆಚ್ಚು ಜನರು ವೀಕ್ಷಿಸುವ ಹಿಂದಿ ನ್ಯೂಸ್​ ಚಾನೆಲ್ ಆಗಿದೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 18, 2022 | 11:34 AM

ದೆಹಲಿ: ಟಿವಿ9 ಸಮೂಹದ ಭಾರತ್​ವರ್ಷ್ (Tv9 Bharat​varsh) ಭಾರತದ ನಂಬರ್ 1 ಹಿಂದಿ ಸುದ್ದಿವಾಹಿನಿ ಸ್ಥಾನಕ್ಕೆ ಏರಿದೆ. ಸತತ 74 ವಾರಗಳ ಅವಿರತ ಪರಿಶ್ರಮವು ಹಿಂದಿ ಸುದ್ದಿಜಗತ್ತಿನಲ್ಲಿ ಹೊಸ ನಾಯಕನ ಉದಯವನ್ನು ಸಾಧ್ಯವಾಗಿಸಿದೆ. ಭಾರತದಲ್ಲಿ ಅತಿಹೆಚ್ಚು ವೀಕ್ಷಣೆ ಕಂಡು ಹಿಂದಿ ಸುದ್ದಿವಾಹಿನಿ ಎಂಬ ಶ್ರೇಯಕ್ಕೆ ಟಿವಿ9 ಭಾರತ್​ವರ್ಷ್ ಪಾತ್ರವಾಗಿದೆ. ಇಷ್ಟು ವರ್ಷ ಈ ಸ್ಥಾನದಲ್ಲಿ ಪಾರಂಪರಿಕ ಕಂಪನಿಗಳಿದ್ದವು. ಬಾರ್ಕ್ ಸಂಸ್ಥೆಯು (Broadcast Audience Research Council – BARK) ಮಾರ್ಚ್ 17ರಂದು ಪ್ರಕಟಿಸಿರುವ ದತ್ತಾಂಶಗಳ ಪ್ರಕಾರ ಟಿವಿ9 ಭಾರತ್​ವರ್ಷ್ ರಾಷ್ಟ್ರೀಯ ಹಿಂದಿ ಚಾನೆಲ್​ಗಳ ಪೈಕಿ ಗಮನೀಯ ಪ್ರಮಾಣದ, ಅಂದರೆ ಶೇ 16.8 ಮಾರುಕಟ್ಟೆ ಪಾಲು ಹೊಂದಿದೆ. ವಿವರಿಸಲು ಆಗದ ಕೆಲ ಕಾರಣಗಳಿಂದ ಬಾರ್ಕ್​ ದತ್ತಾಂಶಗಳು ಸುದೀರ್ಘ ಅವಧಿಗೆ ಪ್ರಕಟವಾಗಿದೆ.

ಕೇವಲ ಹಿಂದಿ ಮಾತ್ರವೇ ಅಲ್ಲ, ಟಿವಿ9 ಸಮೂಹವು ಇತರ ಐದು ಭಾಷೆಗಳಲ್ಲಿಯೂ ಸುದ್ದಿವಾಹಿನಿಗಳನ್ನು ಹೊಂದಿದೆ. ಟಿವಿ9 ಸಮೂಹದ ಕನ್ನಡ, ತೆಲುಗು, ಮರಾಠಿ, ಗುಜರಾತಿ ಮತ್ತು ಬೆಂಗಾಲಿ ಸುದ್ದಿವಾಹಿನಿಗಳು ಉತ್ತಮ ಸಾಧನೆ ಮಾಡಿವೆ. ಹೀಗಾಗಿಯೇ ರಾಷ್ಟ್ರಮಟ್ಟದಲ್ಲಿ ಟಿವಿ9 ಸಮೂಹವು ಮೊದಲ ಸ್ಥಾನಕ್ಕೇರಲು ಸಾಧ್ಯವಾಗಿದೆ. ಟಿವಿ9 ಸಮೂಹದ ಮೂರು ಚಾನೆಲ್​ಗಳು ಅವುಗಳ ಭಾಷೆಯಲ್ಲಿ ಮೊದಲ ಸ್ಥಾನದಲ್ಲಿವೆ. ಇತರ ಚಾನೆಲ್​ಗಳು ಮುನ್ನಡೆ ಕಾಯ್ದುಕೊಂಡಿವೆ. ಟಿವಿ9 ಸಮೂಹವು 292 ಮಿಲಿಯನ್ ಎಎಂಎ (Average Minute Audience – AMA) ಸಾಧಿಸಿದೆ. ಇದು ಸಮೀಪದ ಪ್ರತಿಸ್ಪರ್ಧಿಯಾಗಿರುವ ಝೀ ನೆಟ್​ವರ್ಕ್​ಗೆ ಹೋಲಿಸಿದರೆ ಶೇ 25ರಷ್ಟು ಮುನ್ನಡೆಯಾಗಿದೆ. ಝೀ ನೆಟ್​ವರ್ಕ್ ಒಟ್ಟು 13 ಚಾನೆಲ್ ಹೊಂದಿದೆ.

ಹಿಂದಿ ಸುದ್ದಿವಾಹಿನಿಗಳ ಜಗತ್ತಿನಲ್ಲಿ ಟಿವಿ9 ಭಾರತ್​ವರ್ಷ್ ಹೊಸ ಇತಿಹಾಸ ಬರೆದಿದೆ. 10ನೇ ವಾರದಲ್ಲಿ ಸಂಗ್ರಹವಾದ ದತ್ತಾಂಶಗಳ ಪ್ರಕಾರ (ಮಾರ್ಚ್ 5ರಿಂದ 11, 2022, ನಾಲ್ಕು ವಾರಗಳ ಮಾಹಿತಿ, ಎನ್​ಸಿಸಿಎಸ್, 15+, 0600-2400 ಗಂಟೆಗಳು) ಶೇ 14.8ರಷ್ಟು ಮಾರುಕಟ್ಟೆ ಪಾಲು ಪಡೆದ ಆಜ್​ತಕ್ 2ನೇ ಸ್ಥಾನದಲ್ಲಿದೆ. ನಿರಾಕರಿಸಲು ಸಾಧ್ಯವೇ ಇಲ್ಲದ ಎರಡು ಕಾರಣಗಳಿಂದಾಗಿ ಇದು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಮೊದಲನೆಯದಾಗಿ ಆಜ್​ತಕ್ ಕಳೆದ 20 ವರ್ಷಗಳಿಂದ ಹಿಂದಿ ಸುದ್ದಿ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿತ್ತು. ಎರಡನೆಯದಾಗಿ, ಟಿವಿ9 ಭಾರತ್​ವರ್ಷ್ ತನ್ನ 3ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲು ಇನ್ನೂ ಮೂರು ವಾರ ಬೇಕಿದೆ (ಮಾರ್ಚ್ 31).

ರಷ್ಯಾ-ಉಕ್ರೇನ್ ಯುದ್ಧ, ಕೊವಿಡ್ ಪಿಡುಗು ಮತ್ತು ಉತ್ತರ ಪ್ರದೇಶ ಚುನಾವಣೆ ಸೇರಿದಂತೆ ಹಲವು ಮಹತ್ವದ ವಿದ್ಯಮಾನಗಳನ್ನು ಟಿವಿ9 ಭಾರತ್​ವರ್ಷ್​ ಪರಿಣಾಮಕಾರಿಯಾಗಿ ವರದಿ ಮಾಡಿತ್ತು. ಸಂಪಾದಕೀಯ ಮಂಡಳಿಯ ಧೈರ್ಯ, ಸುದ್ದಿಮನೆಯ ಹೊಸ ಅನ್ವೇಷಣೆಗಳು, ಅತ್ಯುತ್ತಮ ಪ್ಯಾಕೇಜಿಂಗ್ ಮತ್ತು ಸ್ಥಳಕ್ಕೆ ತೆರಳಿ ವರದಿ ಮಾಡುವ ಕ್ರಮ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ರೇಟಿಂಗ್​ ಪಟ್ಟಿಯಲ್ಲಿ ಶೀಘ್ರಗತಿಯಲ್ಲಿ ಮೇಲೇರಲು ಇದು ಮುಖ್ಯ ಕಾರಣವಾಗಿತ್ತು. ಕಳೆದ ಎರಡು ವರ್ಷಗಳಿಂದ ಇದು ನಿರಂತರವಾಗಿ ಮುಂದುವರಿದಿದೆ.

ಟಿವಿ9 ಭಾರತ್​ವರ್ಷ್​ನ ಈ ಅಪ್ರತಿಮ ಸಾಧನೆಯನ್ನು ಶ್ಲಾಘಿಸಿರುವ ಟಿವಿ9 ಸುದ್ದಿ ಸಮೂಹದ ಸಿಇಒ ಬರುಣ್ ದಾಸ್, ‘ಕೆಲವರು ಯಾವುದನ್ನು ಬಚ್ಚಿಡಬೇಕು ಎಂದು ಬಯಸುತ್ತಿದ್ದರೋ ಅದನ್ನು BARC ರೇಟಿಂಗ್ ಬಹಿರಂಗಪಡಿಸಿದೆ. ನಾವು ಮೊದಲು ಸ್ಥಾನಕ್ಕೆ ಬರುತ್ತೇವೆ ಎನ್ನುವ ಬಗ್ಗೆ ನಮಗೆ ಭರವಸೆ ಇತ್ತು. ಈ ಅಂಕಿಅಂಶಗಳು ಅದನ್ನೇ ದೃಢಪಡಿಸಿವೆ. ಈಗಾಗಲೇ ಎಲ್ಲರಿಗೂ ತಿಳಿದಿದ್ದ ವಿಚಾರ ಅಧಿಕೃತವಾಗಿ ಬಹಿರಂಗವಾಗಬಾರದು ಎನ್ನುವ ಕಾರಣಕ್ಕೆ ಕೆಲವರು ರೇಟಿಂಗ್ಸ್​ ಪ್ರಕಟವಾಗುವುದನ್ನೇ ತಡೆಯಲು ಯತ್ನಿಸಿದರು. ಜನರ ಆಶೋತ್ತರಗಳು ಏನೆಂಬುದು ಕೊನೆಗೂ ಬಹಿರಂಗವಾಗಿದೆ’ ಎಂದು ಹೇಳಿದರು.

ಬರುಣ್ ಅವರ ಮಾತಿಗೆ ಪುಷ್ಟಿಕೊಡುವಂತೆ ಮಾತನಾಡಿದ ಟಿವಿ9 ಸಮೂಹದ ಗ್ರೂಪ್ ಎಡಿಟರ್ ಬಿ.ವಿ.ರಾವ್, ‘ಕೇವಲ BARC ನಿಲ್ಲಿಸುವ ಮೂಲಕ ನೀವು ಯಾರೊಬ್ಬರನ್ನೂ ಮೊದಲ ಸ್ಥಾನಕ್ಕೆ ಬಾರದಂತೆ ತಡೆಯಲು ಆಗುವುದಿಲ್ಲ ಎನ್ನುವುದು ಸಾಬೀತಾಗಿದೆ’ ಎಂದರು. ಟಿವಿ9 ಭಾರತ್​ವರ್ಷ್ ಸುದ್ದಿವಾಹಿನಿಯ ನ್ಯೂಸ್ ಡೈರೆಕ್ಟರ್ ಹೇಮಂತ್ ಶರ್ಮಾ ಮಾತನಾಡಿ, ‘ಇದು ನಿಜವಾದ ವಿಶ್ವಾಸಾರ್ಹ ಪತ್ರಿಕೋದ್ಯಮದ ಜಯ. ಸುದ್ದಿಮನೆ ಸಾಮರ್ಥ್ಯದ ಮೇಲೆ ಇದ್ದ ನಂಬಿಕೆಗೆ ಸಿಕ್ಕ ಜಯ’ ಎಂದು ವಿಶ್ಲೇಷಿಸಿದರು.

ಟಿವಿ9 ಭಾರತ್​ವರ್ಷ್​ನ ಮ್ಯಾನೇಜಿಂಗ್ ಎಡಿಟರ್ ಮತ್ತು ಹೊಸ ಆವಿಷ್ಕಾರಗಳ ಪ್ರೇರಕಶಕ್ತಿಯಾಗಿರುವ ಸಂತ ರಾಜ್ ಮಾತನಾಡಿ, ‘ನಮ್ಮ ವೀಕ್ಷಕರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ವೀಕ್ಷಕರಿಗೆ ಅತ್ಯುತ್ತಮವಾದದ್ದೇ ಸದಾ ಸಿಗಬೇಕು ಎಂಬುದು ನಮ್ಮ ನಂಬಿಕೆ. ನಮ್ಮ ಬದ್ಧತೆ ಮತ್ತು ಜವಾಬ್ದಾರಿಯಲ್ಲಿ ನಾವೆಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸುದ್ದಿಜಗತ್ತಿನ ವಿಭಾಗದಲ್ಲಿಯೂ ನಮ್ಮ ಹೆಜ್ಜೆಗಳು ದೃಢವಾಗಿವೆ’ ಎಂದು ಹೇಳಿದರು.

ಟಿವಿ9 ಸಮೂಹದ ಸ್ಥಿತಿಗತಿ ಕುರಿತು ಮಾತನಾಡಿದ ಸಿಇಒ ಬರುಣ್ ದಾಸ್, ‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಸುದ್ದಿ ಜಗತ್ತಿನಲ್ಲಿ ದೊಡ್ಡಮಟ್ಟದ ಪಾಲು ನಮ್ಮದಾಗಿದೆ ಎನ್ನುವುದು ಸಂತಸದ ವಿಚಾರ. ಯೋಜಿತ ರೀತಿಯಲ್ಲಿ ಪರಿಶ್ರಮದಿಂದ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ. ನಮ್ಮ ಸಮೂಹದ ಸರ್ವಾಂಗೀಣ ಪ್ರಗತಿ ಇದನ್ನು ಸಾಬೀತುಪಡಿಸಿದೆ’ ಎಂದರು.

ಇದನ್ನೂ ಓದಿ: ಟಿವಿ9 ಕನ್ನಡ ಸರಿಸಾಟಿ ಇಲ್ಲದ ನಂಬರ್ 1 ಸುದ್ದಿ ವಾಹಿನಿ; ಒಂದೂವರೆ ವರ್ಷದ ಬಳಿಕ ರೇಟಿಂಗ್​ನಲ್ಲಿ ಮತ್ತೆ ಸಾಬೀತು

ಇದನ್ನೂ ಓದಿ: ಟಿವಿ9 ಕನ್ನಡ ಡಿಜಿಟಲ್ ಮಹಾ ಸಮೀಕ್ಷೆ : ಭಾರತ ಯಾವ ದೇಶಕ್ಕೆ ಬೆಂಬಲ ನೀಡಬೇಕು?

Published On - 11:31 am, Fri, 18 March 22

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು