ಹೋಳಿ ಹಬ್ಬದ ಆಫರ್; ತನ್ನ ಫಾರ್ಮ್​ಹೌಸ್​ನಲ್ಲಿ ಬೆಳೆದ ಹಣ್ಣುಗಳನ್ನು ಕೊಳ್ಳುವವರಿಗೆ ವಿಶೇಷ ರಿಯಾಯಿತಿ ಕೊಟ್ಟ ಧೋನಿ!

MS Dhoni: ಮಾಹಿ ಫಾರ್ಮ್‌ಹೌಸ್​ನಲ್ಲಿ ಹೋಳಿ ಹಬ್ಬದ ವಿಶೇಷ ಸಂದರ್ಭದಲ್ಲಿ ಮೂರು ದಿನಗಳವರೆಗೆ ಸ್ಟ್ರಾಬೆರಿಗಳ ಮೇಲೆ ಬೈ 1 ಗೆಟ್ 1 ಆಫರ್ ನೀಡುತ್ತಿದೆ. ಹೀಗಾಗಿ ಹೋಳಿ ಸಂದರ್ಭದಲ್ಲಿ 17 ರಿಂದ 19 ರವರೆಗೆ ಮಹಿಯ ಫಾರ್ಮ್‌ಹೌಸ್‌ಗೆ ಭೇಟಿ ನೀಡುವ ಮೂಲಕ ನೀವು ಈ ಕೊಡುಗೆಯ ಲಾಭವನ್ನು ಪಡೆಯಬಹುದು.

ಹೋಳಿ ಹಬ್ಬದ ಆಫರ್; ತನ್ನ ಫಾರ್ಮ್​ಹೌಸ್​ನಲ್ಲಿ ಬೆಳೆದ ಹಣ್ಣುಗಳನ್ನು ಕೊಳ್ಳುವವರಿಗೆ ವಿಶೇಷ ರಿಯಾಯಿತಿ ಕೊಟ್ಟ ಧೋನಿ!
ಫಾರ್ಮ್​ಹೌಸ್​ನಲ್ಲಿ ಧೋನಿ
Follow us
TV9 Web
| Updated By: ಪೃಥ್ವಿಶಂಕರ

Updated on: Mar 17, 2022 | 4:08 PM

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಯಶಸ್ಸು ಮತ್ತು ಜನಪ್ರಿಯತೆ ಎರಡರ ಉತ್ತುಂಗದಲ್ಲಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ, ಮಾಹಿ ತನ್ನ ಹೆಚ್ಚಿನ ಸಮಯವನ್ನು ಕೃಷಿ ಮತ್ತು ಡೈರಿ ಮತ್ತು ಕೋಳಿ ಸಾಕಣೆಗೆ ಮೀಸಲಿಟ್ಟಿದ್ದಾರೆ. ಧೋನಿ ಅವರ ಫಾರ್ಮ್‌ಹೌಸ್ ರಾಂಚಿಯ ಸ್ಯಾಂಬೋದಲ್ಲಿದ್ದು, ಇದನ್ನು ಅಜಾ ಫಾರ್ಮ್‌ಹೌಸ್ ಎಂದು ಕರೆಯಲಾಗುತ್ತದೆ. ಇಲ್ಲಿ ಮಾಹಿ ಸುಮಾರು 43 ಎಕರೆ ಜಮೀನಿನಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುತ್ತಾರೆ. ಜೊತೆಗೆ ಡೈರಿ, ಮೀನು ಸಾಕಣೆಗೆ ಎರಡು ಕೆರೆಗಳೂ ಇವೆ. ಇಲ್ಲಿ ಸಾವಯವ ಪದ್ಧತಿಯಲ್ಲಿ ಗೋಧಿಯನ್ನೂ ಸಹ ಬೆಳೆಯಲಾಗುತ್ತದೆ.

ಮಾಹಿ ಈ ಫಾರ್ಮ್‌ಹೌಸ್‌ನಲ್ಲಿ ಸ್ಟ್ರಾಬೆರಿ, ಪಪ್ಪಾಯಿ ಮತ್ತು ಪೇರಲವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ ಎಂದು ತಿಳಿದುಬಂದಿದೆ. ಇದಕ್ಕಾಗಿ ದೇಶ ಮಾತ್ರವಲ್ಲದೆ ವಿದೇಶದಿಂದಲೂ ಸುಧಾರಿತ ತಳಿಯ ಬೀಜಗಳನ್ನು ತಂದಿದ್ದಾರೆ. ಇದೇ ವೇಳೆ ಧೋನಿ ಅವರ ಕೃಷಿ ಸಲಹೆಗಾರ ರೋಷನ್ ಕುಮಾರ್ ಮಾತನಾಡಿ, ಮಹಿ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ಕಾಲಕಾಲಕ್ಕೆ ಇಲ್ಲಿಗೆ ಬಂದು ಸ್ವಂತವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಧೋನಿ ಅವರ ಫಾರ್ಮ್‌ಹೌಸ್‌ನಲ್ಲಿ ಹಣ್ಣುಗಳಲ್ಲದೆ, ತರಕಾರಿಗಳನ್ನು ಸಹ ವ್ಯಾಪಕವಾಗಿ ಬೆಳೆಯಲಾಗುತ್ತದೆ ಎಂದಿದ್ದಾರೆ.

ಹೋಳಿ ಹಬ್ಬಕ್ಕೆ ವಿಶೇಷ ಕೊಡುಗೆ ಏತನ್ಮಧ್ಯೆ, ಮಾಹಿ ಫಾರ್ಮ್‌ಹೌಸ್​ನಲ್ಲಿ ಹೋಳಿ ಹಬ್ಬದ ವಿಶೇಷ ಸಂದರ್ಭದಲ್ಲಿ ಮೂರು ದಿನಗಳವರೆಗೆ ಸ್ಟ್ರಾಬೆರಿಗಳ ಮೇಲೆ ಬೈ 1 ಗೆಟ್ 1 ಆಫರ್ ನೀಡುತ್ತಿದೆ. ಹೀಗಾಗಿ ಹೋಳಿ ಸಂದರ್ಭದಲ್ಲಿ 17 ರಿಂದ 19 ರವರೆಗೆ ಮಹಿಯ ಫಾರ್ಮ್‌ಹೌಸ್‌ಗೆ ಭೇಟಿ ನೀಡುವ ಮೂಲಕ ನೀವು ಈ ಕೊಡುಗೆಯ ಲಾಭವನ್ನು ಪಡೆಯಬಹುದು. ಇದರೊಂದಿಗೆ ನೀವು ಕುಟುಂಬ ಸಮೇತ ಫಾರ್ಮ್‌ಹೌಸ್‌ಗೆ ಬಂದು ಮಾಹಿ ಅವರ ಫಾರ್ಮ್‌ಹೌಸ್‌ನಲ್ಲಿ ನಡೆಯುವ ಕೃಷಿ ಚಟುವಟಿಕೆಯನ್ನು ಹತ್ತಿರದಿಂದ ನೋಡಬಹುದು. ಮಾಹಿ ಫಾರ್ಮ್‌ಹೌಸ್‌ನಲ್ಲಿ 250 ಗ್ರಾಂ ಸ್ಟ್ರಾಬೆರಿ ಬೆಲೆ, ಮಾರುಕಟ್ಟೆಯಲ್ಲಿ ಸಿಗುವ ಸ್ಟ್ರಾಬೆರಿಗಿಂತ ಕಡಿಮೆ ಇರಲಿದ್ದು, ಇದರ ಗುಣಮಟ್ಟ ಹಲವು ಪಟ್ಟು ಉತ್ತಮವಾಗಿದೆ ಎಂದು ಕುಮಾರ್ ಹೇಳಿದ್ದಾರೆ.

ಧೋನಿ ತನ್ನ ಜರ್ಸಿ ಮೇಲೆ ನಂ.7ನೇ ಬಳಸುವುದ್ಯಾಕೆ? ಭಾರತದ ಖ್ಯಾತ ಕ್ರಿಕೆಟಿಗ ಎಂಎಸ್ ಧೋನಿ ( MS Dhoni) ಅವರ ಜೆರ್ಸಿ ನಂಬರ್ 7 ಬಗ್ಗೆ ಹಲವರು ಕುತೂಹಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಧೋನಿ ತನ್ನ ಜರ್ಸಿಯ ಮೇಲೆ 7 ನ ನಂಬರ್​ ಅನ್ನು ಬಳಸುವುದರ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಧೋನಿ ಹಲವು ವರ್ಷಗಳಿಂದ 7 ನಂಬರ್ ಜೆರ್ಸಿಯನ್ನು ಧರಿಸುತ್ತಿದ್ದಾರೆ. ಇಲ್ಲಿಯವರೆಗೆ, ಧೋನಿ ಏಳನೇ ಸಂಖ್ಯೆಯನ್ನು ಬಳಸಿದ ನಂತರ ವಿಭಿನ್ನ ಕಥೆಗಳನ್ನು ಸೇರಿಸಲಾಗಿದೆ. ಅಂತಿಮವಾಗಿ ಧೋನಿಯೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಏಳನೇ ನಂಬರ್ ಜರ್ಸಿ ಧರಿಸಲು ವಿಶೇಷ ಕಾರಣವಿಲ್ಲ ಎಂದಿರುವ ಧೋನಿ, ಇದು ನನ್ನ ಜನ್ಮ ದಿನಾಂಕ ಹಾಗಾಗಿ 7 ನೇ ನಂಬರ್ ಜೆರ್ಸಿ ಧರಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ:IPL 2022: ಅಭ್ಯಾಸಕ್ಕಾಗಿ ಸೂರತ್ ತಲುಪಿದ ಸಿಎಸ್​ಕೆ; ಧೋನಿಯ ಹೊಸ ಹೇರ್​ ಸ್ಟೈಲ್​ಗೆ ಫ್ಯಾನ್ಸ್ ಫಿದಾ!

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ