ಯಾದಗಿರಿ: ಹಣ ಕೊಡಲಿಲ್ಲವೆಂದು ಹೆರಿಗೆ ಮಾಡಿಸಿಕೊಳ್ಳದೇ ಮಗುವಿನ ಸಾವಿಗೆ ಕಾರಣರಾದ ವೈದ್ಯೆ ಅಮಾನತು

|

Updated on: Mar 17, 2023 | 8:53 AM

ಹೆರಿಗೆ ಮಾಡಿಸಲು ವೈದ್ಯೆ ಹಣ ಕೇಳಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲಾಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ.ಪಲ್ಲವಿ ಪೂಜಾರಿಯವರನ್ನ ಜಿಲ್ಲಾಧಿಕಾರಿ ಸ್ನೇಹಲ್.ಆರ್​ ಅವರು ಅಮಾನತುಗೊಳಿಸಿದ್ದಾರೆ.

ಯಾದಗಿರಿ: ಹಣ ಕೊಡಲಿಲ್ಲವೆಂದು ಹೆರಿಗೆ ಮಾಡಿಸಿಕೊಳ್ಳದೇ ಮಗುವಿನ ಸಾವಿಗೆ ಕಾರಣರಾದ ವೈದ್ಯೆ ಅಮಾನತು
ಅಮಾನತುಗೊಂಡ ವೈದ್ಯೆ ಡಾ.ಪಲ್ಲವಿ ಪೂಜಾರಿ
Follow us on

ಯಾದಗಿರಿ: ಹೆರಿಗೆ ಮಾಡಿಸಲು ವೈದ್ಯೆ ಹಣ ಕೇಳಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲಾಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ.ಪಲ್ಲವಿ ಪೂಜಾರಿಯವರನ್ನ ಜಿಲ್ಲಾಧಿಕಾರಿ ಸ್ನೇಹಲ್.ಆರ್​ ಅವರು ಅಮಾನತುಗೊಳಿಸಿದ್ದಾರೆ. ಹೌದು ನಿನ್ನೆ(ಮಾ.16) ಹೆರಿಗೆಗಾಗಿ ಸಂಗೀತ ಎಂಬ ಗರ್ಭಿಣಿ ಮಹಿಳೆ ಆಸ್ಪತ್ರೆಗೆ ಬಂದಿದ್ದಳು. ಈ ವೇಳೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲು 10 ಸಾವಿರ ಹಣವನ್ನ ವೈದ್ಯೆ ಡಾ.ಪಲ್ಲವಿ ಪೂಜಾರಿ ಕೇಳಿದ್ದಾರೆ. ಅಷ್ಟೊಂದು ಹಣ ಅವರ ಬಳಿ ಇರದ ಕಾರಣ, ಬೇರೆ ಕಡೆ ಅಲ್ಲಿ ಇಲ್ಲಿ ಕೇಳಿ ಹಣವನ್ನ ತರಲು ತಡವಾಗಿದೆ. ಅಲ್ಲಿಯವರೆಗೆ ಈ ವೈದ್ಯೆ ಹೆರಿಗೆ ಮಾಡಿಲ್ಲ. ಬಳಿಕ ಹಣ ಕೊಟ್ಟ ಮೇಲೆ ಹೆರಿಗೆ ಮಾಡಿದ್ದಾರೆ. ಆದರೆ ಹೆರಿಗೆಗೆ ತಡವಾಗಿದ್ದಕ್ಕೆ ಮಗು ಗರ್ಭದಲ್ಲೇ ಸಾವನ್ನಪ್ಪಿತ್ತು. ಬಳಿಕ ಮಗುವಿನ ಸಾವಿಗೆ ವೈದ್ಯೆ ನಿರ್ಲಕ್ಷ್ಯವೇ ಕಾರಣವೆಂದು ಪೋಷಕರು ಜಿಲ್ಲಾಸ್ಪತ್ರೆಯ ಬಳಿ ಪ್ರತಿಭಟನೆ ನಡೆಸಿ ಅಮಾನತಿಗೆ ಆಗ್ರಹಿಸಿದ್ದರು. ಇದೀಗ ಕರ್ತವ್ಯದಲ್ಲಿ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿತನ ತೋರಿದ್ದಕ್ಕೆ ಜಿಲ್ಲಾಧಿಕಾರಿ ಸ್ನೇಹಲ್.ಆರ್​ ಅವರು ಸಸ್ಪೆಂಡ್ ಮಾಡಿದ್ದಾರೆ.

ಕಳ್ಳತನಕ್ಕೆ ಪೊಲೀಸ್ ಕಾನ್ಸ್​ಟೇಬಲ್​ನಿಂದ ಸಹಾಯ ಆರೋಪ; ಪೇದೆ ಯಲ್ಲಪ್ಪ ಸಸ್ಪೆಂಡ್

ಬೆಂಗಳೂರು: ನಗರದ ಬನಶಂಕರಿ ಪೊಲೀಸ್​ ಠಾಣೆಯ ಕಾನ್ಸ್​ಟೇಬಲ್ ಯಲ್ಲಪ್ಪ ಎಂಬಾತ ಕಳ್ಳತನಕ್ಕೆ ಸಹಾಯ ಮಾಡಿದ್ದಾನೆ ಎಂಬ ಆರೋಪದ ಮೇಲೆ ಸಸ್ಪೆಂಡ್ ಮಾಡಲಾಗಿದೆ. ಯಲ್ಲಪ್ಪ ಬನಶಂಕರಿ ಠಾಣೆಯ ಕ್ರೈಂ ವಿಭಾಗದ ಕಾನ್ಸ್​ಟೇಬಲ್ ಆಗಿದ್ದನು. ಬನಶಂಕರಿ ಠಾಣೆಯ ಪೊಲೀಸರು ಕಳ್ಳತನದ ಗ್ಯಾಂಗ್ ಒಂದನ್ನ ಬಂಧನ ಮಾಡಿದ್ದರು. ಆ ಆರೋಪಿಗಳ ವಿಚಾರಣೆ ವೇಳೆ ಕಳ್ಳರು ಕಳ್ಳತನದಲ್ಲಿ ಯಲ್ಲಪನ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಹಂತದಲ್ಲಿ ಯಲಪ್ಪನ ಪಾತ್ರದ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಯಲ್ಲಪ್ಪನನ್ನು ಅಮಾನತು ಮಾಡಿ ತನಿಖೆಗೆ ಅದೇಶ ಹೊರಡಿಸಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ