ಯಾದಗಿರಿ: ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿಗೆ ಕೆಲವು ನಾಯಕರು ಬರಲಿದ್ದಾರೆ. ಈ ಕುರಿತು ಸಮಯ ಸಂದರ್ಭ ಬಂದಾಗ ನಾನೇ ಹೇಳುತ್ತೇನೆ ಎಂದು ಎಮ್ಎಲ್ಸಿ ರವಿಕುಮಾರ್ (N. Ravikumar)ಹೇಳಿದರು. ‘ಈಗಾಗಲೆ ಕಾಂಗ್ರೆಸ್ ಪಕ್ಷಕ್ಕೆ ಕೆಲವು ಬಿಜೆಪಿ ನಾಯಕರು ಸೇರಿದ್ದು, ಮುಂದೆಯು ಸೇರಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಪದೇ ಪದೇ ಹೇಳುತ್ತಿರುತ್ತಾರೆ. ಈ ಸಂಬಂಧ ರವಿಕುಮಾರ್ ಮಾತನಾಡಿ ಕೈ ನಾಯಕರು ಕಳೆದ ಮೂರ್ನಾಲ್ಕು ತಿಂಗಳಿಂದ ಹೇಳುತ್ತಲೇ ಇದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಯಾವ ನಾಯಕರು ಬಂದು ಸೇರಿದ್ದಾರೆ ಹೇಳಲಿ ಎಂದು ಕೇಳಿದ್ದಾರೆ.
ಸಚಿವ ಸೋಮಣ್ಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ವಿಚಾರವಾಗಿ ಯಾದಗಿರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಮ್ಎಲ್ಸಿ ರವಿಕುಮಾರ್ ‘ಸೋಮಣ್ಣನವರು ಕಾಂಗ್ರೆಸ್ಗೆ ಹೋಗ್ತಾರೆ ಎನ್ನುವ ಮಾತು ಸುಳ್ಳು,
ಈಗಾಗಲೇ ಹಲವು ಕಡೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ದೊಡ್ಡ ಪ್ರಮಾಣದಲ್ಲಿ ರೋಡ್ ಶೋ ಮಾಡಿದ್ದಾರೆ. ಸೋಮಣ್ಣ ಅವರು ಪಾರ್ಟಿ ಬಿಡುವ ಪ್ರಶ್ನೇಯೇ ಇಲ್ಲ, ಸೋಮಣ್ಣ ಅವರು ನಾವು ಸೇರಿ ಕಾಂಗ್ರೆಸ್ನ್ನ ಮನೆಗೆ ಕಳುಹಿಸುವುದು ಗ್ಯಾರಂಟಿ. ಕಾಂಗ್ರಸ್ನವರು ಸೋಲಿನ ಭೀತಿಯಲ್ಲಿ ಊಹಾ ಪೋಹ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ:4-6 ಶಾಸಕರನ್ನು ಬಿಟ್ಟು ಬಹುತೇಕ ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್; ಚರ್ಚೆಗೆ ಗ್ರಾಸವಾದ ಯಡಿಯೂರಪ್ಪ ಹೇಳಿಕೆ
ಮಂಡ್ಯದಲ್ಲಿ ಸಂಸದೆ ಸುಮಲತಾ ಬಿಜೆಪಿ ಸೇರ್ತಾರೆ ಎನ್ನುವ ವಿಚಾರ
ಇನ್ನು ಇದೇ ಸಂದರ್ಭದಲ್ಲಿ ಮಂಡ್ಯದಲ್ಲಿ ಸಂಸದೆ ಸುಮಲತಾ ಬಿಜೆಪಿ ಸೇರ್ತಾರೆ ಎನ್ನುವ ವಿಚಾರವಾಗಿ‘ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಎಂದು ಎರಡು ರಾಷ್ಟ್ರೀಯ ಪಕ್ಷಗಳನ್ನ ಆಯ್ಕೆಯಲ್ಲಿ ಇಟ್ಟುಕೊಂಡಿದ್ದಾರೆ. ಅವರು ಸಂಸದೆ ಆಗುವಾಗ ನಾವು ಅವರಿಗೆ ಬೆಂಬಲ ಕೊಟ್ಟಿದ್ವಿ, ಈಗ ಅವರು ಯಾವ ಪಕ್ಷಕ್ಕೆ ಸೇರ್ತಾರೋ ಅದು ಅವರ ಇಷ್ಟ. ಜೆಡಿಎಸ್ನ್ನು ದೊಡ್ಡ ಅಂತರದಲ್ಲಿ ಸೋಲಿಸಿದ ಅವರು ತುಂಬಾ ಒಳ್ಳಯ ಜನ, ಅವರು ಪಕ್ಷಕ್ಕೆ ಬಂದ್ರೆ ತುಂಬಾ ಅನುಕೂಲ ಆಗುತ್ತೆ ಎಂದು ರವಿಕುಮಾರ್ ಹೇಳಿದರು.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:27 am, Wed, 8 March 23