ಯಾದಗಿರಿ: ಆನೆಕಾಲು ರೋಗ ತಡೆ ಮಾತ್ರೆ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಆನೆಕಾಲು ರೋಗ ತಡೆ ಮಾತ್ರೆ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರುವಂತಹ ಘಟನೆ ಯಾದಗಿರಿ ತಾಲೂಕಿನ ಶೆಟ್ಟಿಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಯಾದಗಿರಿ: ಆನೆಕಾಲು ರೋಗ ತಡೆ ಮಾತ್ರೆ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
ಮಾತ್ರೆ ಸೇವಿಸಿ ಅಸ್ವಸ್ಥಗೊಂಡ ಮಕ್ಕಳು
Edited By:

Updated on: Nov 14, 2022 | 9:59 PM

ಯಾದಗಿರಿ: ಆನೆಕಾಲು ರೋಗ ತಡೆ ಮಾತ್ರೆ (tablets) ಸೇವಿಸಿ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರುವಂತಹ ಘಟನೆ ಯಾದಗಿರಿ ತಾಲೂಕಿನ ಶೆಟ್ಟಿಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಆನೆಕಾಲು ರೋಗ ಮುಕ್ತ ಮಾಡುವ ಹಿನ್ನೆಲೆ ಇಂದು ಮಕ್ಕಳಿಗೆ ಔಷಧಿಗಳನ್ನ ನುಂಗಿಸುವ ಕಾರ್ಯಕ್ರಮವಿದ್ದು, ಈ ವೇಳೆ ಅವಘಡ ಉಂಟಾಗಿದೆ ಎನ್ನಲಾಗುತ್ತಿದೆ. ಅಸ್ವಸ್ಥಗೊಂಡ 20 ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ಅಸ್ವಸ್ಥ ಮಕ್ಕಳನ್ನು ವೈದ್ಯರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪಿಸಲಾಗಿದೆ. ಈ ಕುರಿತಾಗಿ ಜಿಲ್ಲಾಸ್ಪತ್ರೆ ವೈದ್ಯರು ಮತ್ತು ಪೋಷಕರ ನಡುವೆ ಮಾತಿನ ಚಕಮಕಿ ಸಹ ಉಂಟಾಗಿದೆ.

ಮಕ್ಕಳ ದಿನಾಚರಣೆ ಹಿನ್ನೆಲೆ ಮಕ್ಕಳಿಗೆ ಗಂಧದಗುಡಿ ಸಿನಿಮಾ ತೋರಿಸಿದ ಸಾಲುಮರದ ವೆಂಕಟೇಶ್

ಚಾಮರಾಜನಗರ: ಇಂದು ಮಕ್ಕಳ ದಿನಾಚರಣೆ ಹಿನ್ನೆಲೆ ಗಂಧದಗುಡಿ ಸಿನಿಮಾ ತೋರಿಸಿ ಮಕ್ಕಳಲ್ಲಿ ಅರಣ್ಯ ಹಾಗೂ ಪರಿಸರದ ಬಗ್ಗೆ ಅರಿವು ಮೂಡಿಸಲು ಸಾಲುಮರದ ವೆಂಕಟೇಶ್ ಮುಂದಾದರು. ಚಾಮರಾಜನಗರದಲ್ಲಿ 60 ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಗಂಧದಗುಡಿ ಚಿತ್ರದ ಟಿಕೇಟ್ ಉಚಿತವಾಗಿ ನೀಡಲಾಯಿತು. ನಗರದ ರಾಘವೇಂದ್ರ ಚಿತ್ರಮಂದಿರದಲ್ಲಿ ಶಾಲಾ ಮಕ್ಕಳಿಗೆ ಗಂಧದಗುಡಿ ಚಿತ್ರ ತೋರಿಸಲಾಯಿತು. ಆಸಕ್ತಿಯಿಂದ ಚನ್ನಿಪುರಮೋಳೆ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಗಂಧದ ಗುಡಿ ವೀಕ್ಷಿಸಿದರು. ತೆರೆಯ ಮೇಲೆ ಅಪ್ಪು ಕಂಡು ಶಾಲಾ ಮಕ್ಕಳ ಹರ್ಷೋದ್ಘಾರಗೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:40 pm, Mon, 14 November 22