ವಿನಯ್ ಕುಲಕರ್ಣಿ ಆಪ್ತ, ಕೆಎಎಸ್​ ಸೋಮು ನ್ಯಾಮಗೌಡ ಬಂಧನದ ಹಿಂದಿದೆ ಸಿಬಿಐ ಮಾಸ್ಟರ್​​ ಪ್ಲಾನ್; ಕೇಸು ಮತ್ತಷ್ಟು ಬಿಗಿ

| Updated By: ಸಾಧು ಶ್ರೀನಾಥ್​

Updated on: Jul 08, 2021 | 9:48 AM

Yogesh Gowda Murder Case: ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದು ಕೋರಿ ಮಾಜಿ ಸಚಿವ ವಿನಯ್​ ಕುಲಕರ್ಣಿ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದಾರೆ. ಇಂದು ಆ ಅರ್ಜಿ ವಿಚಾರಣೆಗೆ ಬರಲಿದೆ. 

ವಿನಯ್ ಕುಲಕರ್ಣಿ ಆಪ್ತ, ಕೆಎಎಸ್​  ಸೋಮು ನ್ಯಾಮಗೌಡ ಬಂಧನದ ಹಿಂದಿದೆ ಸಿಬಿಐ ಮಾಸ್ಟರ್​​ ಪ್ಲಾನ್; ಕೇಸು ಮತ್ತಷ್ಟು ಬಿಗಿ
ವಿನಯ್ ಕುಲಕರ್ಣಿ ಆಪ್ತ, ಕೆಎಎಸ್​ ಸೋಮು ನ್ಯಾಮಗೌಡ ಬಂಧನದ ಹಿಂದಿದೆ ಸಿಬಿಐ ಮಾಸ್ಟರ್​​ ಪ್ಲಾನ್; ಕೇಸು ಮತ್ತಷ್ಟು ಬಿಗಿ
Follow us on

ಧಾರವಾಡ: ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತ ಕಾರ್ಯದರ್ಶಿ, ಕೆಎಎಸ್​ ಅಧಿಕಾರಿ ಸೋಮು ನ್ಯಾಮಗೌಡನನ್ನು ಸಿಬಿಐ ಅಧಿಕಾರಿಗಳು ರಾತ್ರಿಯೇ ಗದಗಕ್ಕೆ ತೆರಳಿ, ಇಂದು ಬೆಳಗಿನ ಜಾವ ಆತನನ್ನು ಅರೆಸ್ಟ್​ ಮಾಡಿ ಧಾರವಾಡ ಉಪನಗರ ಠಾಣೆಗೆ ಕರೆತಂದುಬಿಟ್ಟಿದ್ದಾರೆ. ಆದರೆ ಈ  ಬಂಧನದ ಹಿಂದೆ ಕುತೂಹಲಕಾರಿ ಸಂಗತಿಯಿದೆ. ಸಿಬಿಐ ಅಧಿಕಾರಿಗಳ ಮಾಸ್ಟರ್​​ ಪ್ಲಾನ್​ ಕೆಲಸ ಮಾಡಿದೆ. 

ಯೋಗೀಶಗೌಡ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರೋ ಸಿಬಿಐ  ಅಧಿಕಾರಿಗಳು ಪ್ರಕರಣವನ್ನು ಮತ್ತಷ್ಟು ಬಿಗಿಗೊಳಿಸಲು ಮತ್ತೊಂದು ತಂತ್ರ ಹೂಡಿದ್ದಾರೆ. ಸೋಮು ಬಂಧನದ ಹಿಂದಿದೆ ಸಿಬಿಐನ ಆ ಹೊಸ ತಂತ್ರ.

ವಿನಯ್​ ಕುಲಕರ್ಣಿಗೆ ಸಿಬಿಐ ಕಡೆಯಿಂದ ಮುಳುಗುನೀರು:
ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದು ಕೋರಿ ಮಾಜಿ ಸಚಿವ ವಿನಯ್​ ಕುಲಕರ್ಣಿ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದಾರೆ. ಇಂದು ಆ ಅರ್ಜಿ ವಿಚಾರಣೆಗೆ ಬರಲಿದೆ.  ಈ ಹಿನ್ನೆಲೆಯಲ್ಲಿ ವಿನಯ್​ ಕುಲಕರ್ಣಿ ಆಪ್ತ ಸೋಮು ನ್ಯಾಮಗೌಡನನ್ನು ಇಂದೇ ಬಂಧಿಸಿ, ಹೊಸ ತಂತ್ರ ಹೂಡಿದೆ ಸಿಬಿಐ ಎಂದು ಪ್ರಕರಣ ತನಿಖೆಯನ್ನು ವಿಶ್ಲೇಷಿಸಲಾಗಿದೆ.

ಪ್ರಕರಣ ತೀವ್ರತೆಯನ್ನು ಕೋರ್ಟ್ ಗಮನಕ್ಕೆ ತರಲು ಸಿಬಿಐ ಈ ತಂತ್ರ ಮಾಡಿದ್ದು, ಆ ಮೂಲಕ  ಪ್ರಕರಣವನ್ನು  ಗಟ್ಟಿಗೊಳಿಸೋ  ಪ್ರಯತ್ನದಲ್ಲಿದೆ ಸಿಬಿಐ.

ಮತ್ತೆ ಚುರುಕು ಪಡೆದ ಯೋಗೀಶ್ ಗೌಡ ಹತ್ಯೆ ಪ್ರಕರಣ ತನಿಖೆ: ಗದಗದಲ್ಲಿ ಕೆಎಎಸ್ ಅಧಿಕಾರಿ ಅರೆಸ್ಟ್

(Yogesh Gowda murder case CBI arrests KAS officer Somu Nyamagowda Vinay Kulkarni hearing in Supreme Court today)