ವಿದ್ಯಾಬ್ಯಾಸಕ್ಕೆಂದು ವಿದೇಶಕ್ಕೆ ತೆರಳಿದ ಯುವಕ ಬಾಹ್ಯಾಕಾಶ ಇಂಜಿನಿಯರ್​ ಆಗಿ ವಾಪಸ್: ಭವ್ಯ ಸ್ವಾಗತ ಕೋರಿದ ಗ್ರಾಮಸ್ಥರು

| Updated By: ರಾಜೇಶ್ ದುಗ್ಗುಮನೆ

Updated on: Feb 06, 2021 | 1:34 PM

ಗ್ರಾಮದ ಬಸವರಾಜ ಸಂಕೀನ್ ಕಳೆದ 5 ವರ್ಷದ ಹಿಂದೆ ಬಡತನದ ನಡುವೆ ಉನ್ನತ ವ್ಯಾಸಂಗ ಮಾಡಲು ಸ್ಪೇನ್ ದೇಶಕ್ಕೆ ತೆರಳಿದನು. ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ಮಾಸ್ಟರ್ಸ ಇನ್ ಎರೋಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯಲ್ಲಿ ಉನ್ನತ ವಾಸಂಗ ಮಾಡಿದ್ದಾರೆ.

ವಿದ್ಯಾಬ್ಯಾಸಕ್ಕೆಂದು ವಿದೇಶಕ್ಕೆ ತೆರಳಿದ ಯುವಕ ಬಾಹ್ಯಾಕಾಶ ಇಂಜಿನಿಯರ್​ ಆಗಿ ವಾಪಸ್: ಭವ್ಯ ಸ್ವಾಗತ ಕೋರಿದ ಗ್ರಾಮಸ್ಥರು
ಬಸವರಾಜ ಸಂಕೀನ್​ನನ್ನು ಸ್ವಾಗತಿಸಿದ ಗ್ರಾಮಸ್ಥರು
Follow us on

ಯಾದಗಿರಿ: ಓದುವುದಕ್ಕೆ ಎಂದು ವಿದೇಶಕ್ಕೆ ಹೋಗಿದ್ದ ಯುವಕನೊಬ್ಬ ಬಾಹ್ಯಾಕಾಶ ಇಂಜಿನಿಯರ್ ವಾಪಾಸ್ಸಾಗಿದ್ದು, ಗ್ರಾಮಸ್ಥರು ಈ ಯುವಕನನ್ನು ಬಾಜಾ, ಭಜಂತ್ರಿ ಮೂಲಕ ಊರಿಗೆ ಬರಮಾಡಿಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ತುಮಕೂರು ಗ್ರಾಮದ ಬಸವರಾಜ್ ಸಂಕೀನ್ ಎಂಬ ಯುವಕ ಕಳೆದ ಐದು ವರ್ಷಗಳ ಹಿಂದೆ ತನ್ನೂರಿನಿಂದ ಉನ್ನತ ಹಂತದ ವ್ಯಾಸಂಗಕ್ಕೆಂದು ದೂರದ ಸ್ಪೇನ್ ರಾಷ್ಟ್ರಕ್ಕೆ ಹೋಗಿದ್ದರು. ಸದ್ಯ ಊರಿಗೆ ಈ ಯುವಕ ಮರಳಿದ್ದು, ಸುಮಾರು ಎರಡು ಕಿ.ಮೀ ವರೆಗೆ ಭವ್ಯ ಮೆರವಣಿಗೆ ಮೂಲಕ ಗ್ರಾಮಸ್ಥರು ಇತನ್ನು ಬರ ಮಾಡಿಕೊಂಡಿದ್ದಾರೆ.

ವಿದೇಶದಿಂದ ಬಂದ ಯುವಕನಿಗೆ ಅದ್ದೂರಿ ಮೆರವಣಿಗೆ:
ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ಸ್ಪೇನ್ ದೇಶದಿಂದ ಆಗಮಿಸಿದ ಖಾಸಗಿ ಕಂಪನಿಯ ಎಂಜಿನಿಯರ್ ಬಸವರಾಜ ಸಂಕೀನ್​ಗೆ ಅದ್ಧೂರಿ ಸ್ವಾಗತ ಕೊರಲಾಯಿತು. ತುಮಕೂರು ಗ್ರಾಮದ ಬಸವರಾಜ ಸಂಕೀನ್ ಕಳೆದ 5 ವರ್ಷದ ಹಿಂದೆ ಬಡತನದ ನಡುವೆ ಉನ್ನತ ವ್ಯಾಸಂಗ ಮಾಡಲು ಸ್ಪೇನ್ ದೇಶಕ್ಕೆ ತೆರಳಿದರು.

ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ಮಾಸ್ಟರ್ಸ ಇನ್ ಎರೋಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯಲ್ಲಿ ಉನ್ನತ ವಾಸಂಗ ಮಾಡಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ಉನ್ನತ ವ್ಯಾಸಂಗ ಪೂರ್ಣಗೊಳಿಸಿ ‌ನಂತರ ಕಳೆದ ಮೂರುವರೆ ವರ್ಷದಿಂದ ಬಾರ್ಸಿಲೋನಾದಲ್ಲಿ ಬಸವರಾಜ್ ಸಂಕೀನ್ ಖಾಸಗಿ ‌ಕಂಪನಿಯಲ್ಲಿ ಬಾಹ್ಯಕಾಶ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ದೇವರ ದರ್ಶನ ಪಡೆಯುತ್ತಿರುವ ಬಸವರಾಜ್ ಸಂಕೀನ್

ಕಳೆದ ವರ್ಷ ಸ್ಪೇನ್ ದೇಶದಿಂದ ತಾಯಿ ನಾಡಿಗೆ ಬಸವರಾಜ ಸಂಕೀನ್ ಮರಳಿ ಬರಬೇಕೆಂದರೆ ಕೊರೋನಾ ಸಂಕಷ್ಟದ ಹಿನ್ನೆಲೆ ಮರಳಿ ಬರಲು ಸಾಧ್ಯವಾಗಿರಲಿಲ್ಲ. ಸ್ಪೇನ್ ದೇಶದಲ್ಲಿ ಕೂಡ ಕೊರೊನಾ ಸಂಕಷ್ಟ ಎದುರಾಗಿತ್ತು. ಈ ನಡುವೆ ಧೃತಿಗೆಡದೆ ಧೈರ್ಯವಾಗಿ ಸ್ಪೇನ್ ದೇಶದಲ್ಲಿ ಉಳಿದು ದೇಶದ ಜನರಿಗೆ ಬಸವರಾಜ ಸಂಕೀನ್ ಸಾಮಾಜಿಕ ಜಾಲತಾಣ ಮೂಲಕ ಜಾಗೃತಿ ಮೂಡಿಸಿದ್ದರು.

ಬಸವರಾಜ್ ಸಂಕೀನ್

ಬಸವರಾಜ್ ಮನೆಯಲ್ಲಿ ಸಂಭ್ರಮ:
ಬಸವರಾಜ ಸಂಕೀನ್ ಅವರ ತಂದೆ ಸಿದ್ದಪ್ಪ ಸಂಕೀನ್, ತಾಯಿ ಗೌರಮ್ಮ ಅವರು ಹೆತ್ತಮಗ ಹುಟ್ಟುರಿಗೆ ಬಂದಿದ್ದಕ್ಕೆ ಭಾವುಕರಾಗಿ ಖುಷಿಗೊಂಡಿದ್ದರು. ವಿದೇಶದಿಂದ ಬಂದ ಮಗನಿಗೆ ಮನೆಯೊಳಗೆ ಆರತಿ ಬೆಳಗಿ ಸ್ವಾಗತ ಮಾಡಿ ಸನ್ಮಾನಿಸಿ ಗೌರವಿಸಿದರು. ಇನ್ನು ಇದೆ ವೇಳೆ ಬಸವರಾಜ್ ಐದು ವರ್ಷದ ಬಳಿಕ ಗ್ರಾಮಕ್ಕೆ ವಾಪಸ್ ಆಗಿದ್ದರಿಂದ ಗ್ರಾಮದ ಪ್ರತಿಯೊಂದು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಸನ್ಮಾನ ಮಾಡಿ ಗೌರವಿಸಿದ ಗ್ರಾಮಸ್ಥರು

ಹಿಂದುಳಿದ ಯಾದಗಿರಿ ಜಿಲ್ಲೆಯ ಹೆಸರು ಬಾರ್ಸಿಲೋನದಲ್ಲಿ ಮಿಂಚಿಸಿದ ಯುವಕ:
ಯುವಕ ಬಸವರಾಜ್ ಕುಟುಂಬ ಬಡತನದಲ್ಲಿ ಶಿಕ್ಷಣವನ್ನ ಕೊಡಿಸಿದೆ. ಬೆಂಗಳೂರಿನಲ್ಲಿ ಇಂಜಿನೀಯರಿಂಗ್ ಪದವಿ ಮುಗಿಸಿದ ಬಸವರಾಜ್ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಬೇಕೆಂದುಕೊಂಡಿದ್ದರು. ಆದರೆ ಮನೆಯಲ್ಲಿ ಆರ್ಥಿಕ ಸಂಕಷ್ಟ ಇರುವ ಕಾರಣ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಕನಸು ಕನಸಾಗೆ ಉಳಿಯುತ್ತದೆ ಎಂದುಕೊಂಡಿದ್ದ ಬಸವರಾಜ್ ಅವರಿಗೆ ಸ್ನೇಹಿತರು ಹಾಗೂ ಹಿತೈಷಿಗಳ ಸಾಹಯ ಸಾಹಕಾರದಿಂದ ಸ್ಪೇನ್ ದೇಶದ ಬಾರ್ಸಿಲೋನದಲ್ಲಿ ಮಾಸ್ಟರ್ಸ್​ ಇನ್ ಎರೋಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಪದವಿಯನ್ನ ಪಡೆದು ಅದೇ ನಗರದಲ್ಲಿ ನೌಕರಿಯನ್ನ ಪಡೆಯಲು ಸಾಧ್ಯವಾಯಿತು. ಸದ್ಯ ಬಾರ್ಸಿಲೋನಾದಲ್ಲಿ ಖಾಸಗಿ ‌ಕಂಪನಿಯಲ್ಲಿ ಬಾಹ್ಯಕಾಶ ಇಂಜಿನಿಯರ್ ಆಗಿ ಬಸವರಾಜ ಸಂಕೀನ್ ಕೆಲಸ ಮಾಡುತ್ತಿದ್ದಾರೆ.

 

ಮೆರವಣಿಗೆ ಮೂಲಕ ಊರಿಗೆ ಸ್ವಾಗತಿಸಿದ ಗ್ರಾಮಸ್ಥರು

ಕೊರೊನಾ ಕಾಟ, ಭಾರತದ ವಿದ್ಯಾರ್ಥಿಗಳನ್ನ ಹೊರದಬ್ಬಲು ಸಜ್ಜಾದ ಅಮೆರಿಕ!