ಬೆಂಗಳೂರು: ಫುಡ್ ಸಪ್ಲೈ ತಡವಾಯಿತೆಂದು ವೇಟರ್ ಜೊತೆ ಕಿರಿಕ್ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ಕಂಡುಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಟ್ಟಿಕಾ ಬಿರಿಯಾನಿ ಹೋಟೆಲ್ಗೆ ಬಂದಿದ್ದ ಯುವಕರು ಬಿರಿಯಾನಿ ಆರ್ಡರ್ ಮಾಡಿದ್ದರು. ಆದರೆ ತಡವಾಗಿ ಬಿರಿಯಾನಿ ತಂದುಕೊಟ್ಟಿದ್ದರಿಂದ ವೇಟರ್ ಜೊತೆ ಜಗಳ ಮಾಡಿದ್ದಾರೆ. ಜೊತೆಗೆ 6 ಜನ ಯುವಕರ ಗುಂಪು ಹೋಟೆಲ್ ಮೇಲೆ ದಾಂದಲೆ ನಡೆಸಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಮೆಕ್ಕಾದಲ್ಲಿ ರಾಮಮಂದಿರ ನಿರ್ಮಾಣ ಆಗಬೇಕಂತೆ, ಕುಂದಾಪುರ ಯುವಕ ಅರೆಸ್ಟ್
Published On - 10:18 am, Thu, 31 December 20