HD ದೇವೇಗೌಡ, KR ರಮೇಶ್ ಕುಮಾರ್​ಗೆ ಮಗಳ ಮದುವೆ ಇನ್ವಿಟೇಶನ್​ ನೀಡಿದ ಶಾಸಕ ಜಮೀರ್ ಅಹಮದ್

|

Updated on: Jan 05, 2021 | 3:01 PM

ಜೆಡಿಎಸ್ ವಸಿಷ್ಠ ಹೆಚ್.ಡಿ. ದೇವೇಗೌಡ ಮತ್ತು ಮಾಜಿ ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರನ್ನು ಮಗಳ ಮದುವೆಗೆ ಆಹ್ವಾನಿಸಿದ ಶಾಸಕ ಜಮೀರ್ ಅಹಮದ್ ಖಾನ್

HD ದೇವೇಗೌಡ, KR ರಮೇಶ್ ಕುಮಾರ್​ಗೆ ಮಗಳ ಮದುವೆ ಇನ್ವಿಟೇಶನ್​ ನೀಡಿದ ಶಾಸಕ ಜಮೀರ್ ಅಹಮದ್
ಹೆಚ್.ಡಿ. ದೇವೇಗೌಡರನ್ನು ಮಗಳ ಮದುವೆಗೆ ಆಹ್ವಾನಿಸಿದ ಶಾಸಕ ಜಮೀರ್ ಅಹಮದ್ ಖಾನ್
Follow us on

ಬೆಂಗಳೂರು: ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ತಮ್ಮ ಪುತ್ರಿಯ ಮದುವೆ ಸಂಭ್ರಮದಲ್ಲಿದ್ದಾರೆ. ಕಾಂಗ್ರೆಸ್​ನ ಗಣ್ಯಾತಿಗಣ್ಯರಿಗೆ ಆಮಂತ್ರಣ ನೀಡಿ ಮದುವೆಗೆ ಬರುವಂತೆ ಆಹ್ವಾನಿಸುತ್ತಿದ್ದಾರೆ. ಇಂದು ಡಿ.ಕೆ. ಸಹೋದರರ ನಿವಾಸಕ್ಕೆ ತೆರಳಿ ಆಮಂತ್ರಣ ನೀಡಿದ ಬಳಿಕ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.

ಶಾಸಕ ಜಮೀರ್ ಅಹಮದ್ ಖಾನ್ ಪುತ್ರಿಯ ಮದುವೆ ನಿಶ್ಚಯವಾಗಿದ್ದು, ಜಮೀರ್ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಆಮಂತ್ರಣ ಹಂಚುವ ಕಾರ್ಯದಲ್ಲಿ ಶಾಸಕ ಬಿಜಿಯಾಗಿದ್ದಾರೆ. ವಸತಿ ಸಚಿವ ವಿ. ಸೋಮಣ್ಣ, ಸಚಿವ ಕೆ. ಗೋಪಾಲಯ್ಯ, ರಾಜ್ಯ ಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಎನ್.ಚಲುವರಾಯ ಸ್ವಾಮಿ, ಮುಸ್ಲಿಂ ಮುಖಂಡರು ಸೇರಿದಂತೆ ಗಣ್ಯರಿಗೆ ಅರಬ್ ಶೈಲಿಯಲ್ಲಿ ವಿನ್ಯಾಸ ಮಾಡಿರುವ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದ್ದಾರೆ. ಹಾಗೂ ಜೆಡಿಎಸ್ ವಸಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ಮಗಳ ಮದುವೆಗೆ ಆತ್ಮೀಯ ಆಹ್ವಾನ ಕೋರಿದ್ದಾರೆ.

Published On - 2:59 pm, Tue, 5 January 21