ನೆಲಮಂಗಲ: ಪಟ್ಟಣದಲ್ಲಿ 10 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎಲ್ಲಾ ವಿದ್ಯಾರ್ಥಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಪಟ್ಟಣದ ಒಂದೇ ಖಾಸಗಿ ನರ್ಸಿಂಗ್ ಕಾಲೇಜಿನವರು ಎಂದು ತಿಳಿದುಬಂದಿದೆ.
ಕಾಲೇಜು ಆರಂಭವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕೇರಳದಿಂದ ವಾಪಸ್ ಆಗಿದ್ರು ಎಂದು ತಿಳಿದುಬಂದಿದೆ. ಸದ್ಯ, 10 ನರ್ಸಿಂಗ್ ವಿದ್ಯಾರ್ಥಿಗಳ ಪೈಕಿ ಮೂವರು ನಿನ್ನೆ ಡಿಸ್ಚಾರ್ಜ್ ಆಗಿದ್ದು ಉಳಿದ 7 ಮಂದಿಗೆ ಕಾಲೇಜಿನ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದ 2 ನರ್ಸಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ದೃಢ
Published On - 5:01 pm, Sat, 2 January 21