ಹಿಂಬದಿ ಸವಾರರಿಗೆ ಥರ್ಡ್ ಪಾರ್ಟಿ ವಿಮೆ ಪರಿಹಾರವಿಲ್ಲ -ಹೈಕೋರ್ಟ್ ಮಹತ್ವದ ತೀರ್ಪು
ಥರ್ಡ್ ಪಾರ್ಟಿ ವಿಮೆಯಿಂದ ಅಪಘಾತಕ್ಕೀಡಾದವರಿಗೆ ಪರಿಹಾರ ನೀಡಲಾಗುವುದು. ಆದರೆ, ಅಪಘಾತ ಮಾಡಿದ ವಾಹನದ ಹಿಂಬದಿ ಸವಾರ ಮತ್ತು ಸಹ ಪ್ರಯಾಣಿಕರಿಗೆ ಥರ್ಡ್ ಪಾರ್ಟಿ ವಿಮೆ ಪರಿಹಾರವಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರು: ಥರ್ಡ್ ಪಾರ್ಟಿ ವಿಮೆಯಿಂದ ಅಪಘಾತಕ್ಕೀಡಾದವರಿಗೆ ಪರಿಹಾರ ನೀಡಲಾಗುವುದು. ಆದರೆ, ಅಪಘಾತ ಮಾಡಿದ ವಾಹನದ ಹಿಂಬದಿ ಸವಾರ ಮತ್ತು ಸಹ ಪ್ರಯಾಣಿಕರಿಗೆ ಥರ್ಡ್ ಪಾರ್ಟಿ ವಿಮೆ ಪರಿಹಾರವಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಹತ್ವದ ತೀರ್ಪು ನೀಡಿದೆ.
ಆದರೆ, ಪ್ರತ್ಯೇಕ ವಿಮೆ ಮೊತ್ತ ಭರಿಸಿದರೆ ಮಾತ್ರ ಹಿಂಬದಿ ಸವಾರ, ಸಹಪ್ರಯಾಣಿಕರಿಗೂ ಪರಿಹಾರ ಅನ್ವಯವಾಗುತ್ತದೆ. ಇಲ್ಲವಾದರೆ ವಿಮೆ ಕಂಪನಿ ಪರಿಹಾರ ನೀಡಬೇಕಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
‘ಆ್ಯಕ್ಟ್ ವಿಮೆ’ಗಳಲ್ಲಿ ಡ್ರೈವರ್, ಸಹಪ್ರಯಾಣಿಕರಿಗೆ ಪರಿಹಾರವಿಲ್ಲ. ಇದಕ್ಕಾಗಿ ಪ್ರತ್ಯೇಕ ಮೊತ್ತ ಭರಿಸಿದ್ದರೆ ಮಾತ್ರ ವಿಮೆ ಅನ್ವಯವಾಗುತ್ತದೆ ಎಂದು ಕೋರ್ಟ್ ತಿಳಿಸಿದೆ. ಜೊತೆಗೆ, ಥರ್ಡ್ ಪಾರ್ಟಿ ವಿಮೆ ಕಾನೂನಿನಡಿ ಕಡ್ಡಾಯ. ಆದರೆ, ಖಾಸಗಿ ವಾಹನದ ಚಾಲಕ, ಸಹಪ್ರಯಾಣಿಕರ ವಿಮೆ ಐಚ್ಛಿಕ. ಹೀಗಾಗಿ, ಅಪಘಾತದಲ್ಲಿ ಮೃತಪಟ್ಟರೆ ವಾಹನದ ಮಾಲೀಕನೇ ಹೊಣೆ ಎಂದು ನ್ಯಾ.ಹಂಚಟೆ ಸಂಜೀವ್ ಕುಮಾರ್ ಮಹತ್ವದ ತೀರ್ಪು ನೀಡಿದ್ದಾರೆ.
BJP ಸರ್ಕಾರ ವಿತರಿಸುವ ಕೊರೊನಾ ಲಸಿಕೆಯನ್ನು ನಾನಂತೂ ಪಡೆಯುವುದಿಲ್ಲ: ಅಖಿಲೇಶ್ ಯಾದವ್
Published On - 4:23 pm, Sat, 2 January 21