ಚಿಕ್ಕಬಳ್ಳಾಪುರ: ಈ ಕೊರೊನಾ ಹೆಮ್ಮಾರಿಯೇ ಹಾಗೆ. ಸದ್ದಿಲ್ಲದೆ ಒಬ್ಬನ ದೇಹವನ್ನ ಹೊಕ್ಕರೆ ಆತನ ಸಂಪರ್ಕದಿಂದ ಎಲ್ಲರಿಗೂ ಸೋಂಕು ಹಬ್ಬುತ್ತದೆ. ಅಂತೆಯೇ, ಜಿಲ್ಲೆಯ ಚಿಂತಾಮಣಿ ತಾಲೂಕು ಆಸ್ಪತ್ರೆಯ ಸೋಂಕಿತ ವೈದ್ಯನ ಸಂಪರ್ಕಕ್ಕೆ ಬಂದ ನೂರು ಜನರನ್ನು ಇದೀಗ ಕ್ವಾರಂಟೈನ್ನಲ್ಲಿ ಇಡಲಾಗಿದೆ. ವೈದ್ಯೆನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಭಯ ಶುರುವಾಗಿದೆ. ಇದೀಗ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ 20 ಜನ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 80 ಜನರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಜೊತೆಗೆ ಆಸ್ಪತ್ರೆಗೆ ರಾಸಾಯನಿಕವನ್ನು ಸಿಂಪಡಿಸಿ ಒಂದು ದಿನದ ಮಟ್ಟಿಗೆ ಸೀಲ್ಡೌನ್ ಮಾಡಲಾಗಿದೆ.
Published On - 2:45 pm, Sat, 4 July 20