15 ದಿನ ಬಳಿಕ SSLC ವಿದ್ಯಾರ್ಥಿಗಳ ಸುರಕ್ಷತೆ ಗೊತ್ತಾಗುತ್ತೆ! ಸಿದ್ದು ಬಯಸ್ತಾ ಇರೋದು ಏನು?
ಶಿಕ್ಷಣ ಸಚಿವ ಸುರೇಶ್ಕುಮಾರ್ ಮುಂಚೂಣಿಯಲ್ಲಿ ನಿಂತು ಯುದ್ಧೋಪಾದಿಯಲ್ಲಿ ಈ ಬಾರಿಯ SSLC ಪರೀಕ್ಷೆಯನ್ನು ಮುಗಿಸಿ, ಸಮಾಧಾನದ ನಿಟ್ಟುಸಿರುಬಿಟ್ಟಿದ್ದಾರೆ. ಶೇ. 98ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದು ಸೈ ಅನ್ನಿಸಿಕೊಂಡಿದ್ದಾರೆ. ಸದ್ಯ ಅವರಲ್ಲಿ ಯಾರಿಗೂ ಕೊರೊನಾ ಸೋಂಕು ಬಾಧಿಸುತ್ತಿಲ್ಲ. ಆದ್ರೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, ವಿದ್ಯಾರ್ಥಿಗಳು ಸುರಕ್ಷಿತರಾಗಿರಲಿ ಎಂದು ನಾನೂ ಬಯಸ್ತೇನೆ. ಆದ್ರೆ 15 ದಿನದ ಬಳಿಕ ಅವರ ಸುರಕ್ಷತೆ ಬಗ್ಗೆ ಗೊತ್ತಾಗುತ್ತೆ ಎಂದಿದ್ದಾರೆ. ರಾಜ್ಯ ಸರ್ಕಾರ ಅತ್ಯಂತ ಆತ್ಮವಿಶ್ವಾಸದಿಂದ SSLC ಪರೀಕ್ಷೆ ಪೂರೈಸಿದೆ. ಸುರಕ್ಷತಾ ಕ್ರಮ […]
ಶಿಕ್ಷಣ ಸಚಿವ ಸುರೇಶ್ಕುಮಾರ್ ಮುಂಚೂಣಿಯಲ್ಲಿ ನಿಂತು ಯುದ್ಧೋಪಾದಿಯಲ್ಲಿ ಈ ಬಾರಿಯ SSLC ಪರೀಕ್ಷೆಯನ್ನು ಮುಗಿಸಿ, ಸಮಾಧಾನದ ನಿಟ್ಟುಸಿರುಬಿಟ್ಟಿದ್ದಾರೆ. ಶೇ. 98ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದು ಸೈ ಅನ್ನಿಸಿಕೊಂಡಿದ್ದಾರೆ. ಸದ್ಯ ಅವರಲ್ಲಿ ಯಾರಿಗೂ ಕೊರೊನಾ ಸೋಂಕು ಬಾಧಿಸುತ್ತಿಲ್ಲ.
ಆದ್ರೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, ವಿದ್ಯಾರ್ಥಿಗಳು ಸುರಕ್ಷಿತರಾಗಿರಲಿ ಎಂದು ನಾನೂ ಬಯಸ್ತೇನೆ. ಆದ್ರೆ 15 ದಿನದ ಬಳಿಕ ಅವರ ಸುರಕ್ಷತೆ ಬಗ್ಗೆ ಗೊತ್ತಾಗುತ್ತೆ ಎಂದಿದ್ದಾರೆ.
ರಾಜ್ಯ ಸರ್ಕಾರ ಅತ್ಯಂತ ಆತ್ಮವಿಶ್ವಾಸದಿಂದ SSLC ಪರೀಕ್ಷೆ ಪೂರೈಸಿದೆ. ಸುರಕ್ಷತಾ ಕ್ರಮ ಕೈಗೊಂಡು ಪರೀಕ್ಷೆ ನಡೆಸಿದ್ದೇವೆ ಅನ್ನೋ ಭರವಸೆಯಲ್ಲೂ ಇದ್ದೀರಿ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತರಾಗಿರಲಿ ಅಂತಾ ನಾನೂ ಸಹ ಬಯಸುತ್ತೇನೆ. ಅದ್ರೆ ಹದಿನೈದು ದಿನಗಳ ಬಳಿಕವಷ್ಟೇ ಅವರು ಸುರಕ್ಷಿತವಾಗಿದ್ದಾರೋ ಇಲ್ವೋ ಅನ್ನೋದು ಗೊತ್ತಾಗುತ್ತೆ ಎಂದು ಟ್ವೀಟ್ ಮಾಡಿದ್ದಾರೆ.
ಜೊತೆಗೆ, ಜೂನ್ 15 ರಿಂದ ಜುಲೈ 20 ವರೆಗಿನ ಕೊವಿಡ್ ಪಾಸಿಟಿವ್ ಬಂದಿರುವವರ ಸಂಪೂರ್ಣ ದಾಖಲೆ ಸಂಗ್ರಹಿಸಿ. ಇವರಲ್ಲಿ SSLC ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪ್ರಾಥಮಿಕ ಸಂಪರ್ಕದಲ್ಲಿ ಇದ್ದರೋ ಇಲ್ಲವೋ ಎಂಬುದರ ಬಗ್ಗೆ ಪರಿಶೀಲಿಸಿ. ಅದಾದ ಬಳಿಕವಷ್ಟೇ ಪರೀಕ್ಷೆ ಸುರಕ್ಷಿತವಾಗಿ ನಡೆಸಿರುವುದು ಬೆಳಕಿಗೆ ಬರುತ್ತೆ ಎಂದು ಪರೀಕ್ಷೆಯಲ್ಲಿ ಸಚಿವ ಸುರೇಶ್ ಕುಮಾರ್ ಪಾಸ್ ಅಂತಾ ಬಿಜೆಪಿ ನಾಯಕರ ಹೇಳಿಕೆಗೆ ಟ್ವೀಟ್ ಮೂಲಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
.@CMofKarnataka seems to be motivated & overconfident to conduct more exams after 'assuming' that SSLC exams were conducted safely.
I too hope that everybody are safe. But we will have to wait for 15 days to know the exact outcome.
1/2
— Siddaramaiah (@siddaramaiah) July 4, 2020
Published On - 2:49 pm, Sat, 4 July 20