ಸರ್ಕಾರದ ತುರ್ತು ಗಮನಕ್ಕೆ.. ಌಂಬುಲೆನ್ಸ್‌ ಸಿಗ್ತಿಲ್ಲ, ಹೆಚ್‌ಕೆ ಪಾಟೀಲ್‌ ನೀಡಿದರು ಉಚಿತ ಸಲಹೆ

ಸರ್ಕಾರದ ತುರ್ತು ಗಮನಕ್ಕೆ.. ಌಂಬುಲೆನ್ಸ್‌ ಸಿಗ್ತಿಲ್ಲ, ಹೆಚ್‌ಕೆ ಪಾಟೀಲ್‌ ನೀಡಿದರು ಉಚಿತ ಸಲಹೆ
ಈಗ ಹೆಚ್.ಕೆ.ಪಾಟೀಲ್ ಏನು ಮಾಡುತ್ತಿದ್ದಾರೆ? ಮಾಜಿ ಸಿಎಂ ಕುಮಾರಸ್ವಾಮಿ ಪ್ರ

ಬೆಂಗಳೂರು: ರಾಜ್ಯದಲ್ಲಿ ದಿನೆ ದಿನೇ ಕೊರೊನಾ ಕೈ ಮೀರಿ ಬೆಿಳೆಯುತ್ತಿರುವುದಕ್ಕ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿವೆ. ಈ ಸಬಂಂಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ನಾಯಕ ಹೆಚ್‌ ಕೆ ಪಾಟೀಲ್‌, ಸರ್ಕಾರ ಎಚ್ಚೆತ್ತುಕೊಂಡು ಪರಿಸ್ಥಿತಿಯನ್ನ ನೀಭಾಯಿಸಬೇಕು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿರುವ ಹೆಚ್‌ ಕೆ ಪಾಟೀಲ್‌, ಌಂಬುಲೆನ್ಸ್‌ ಕೊರತೆ ನೀಗಿಸಲು ರಾಜ್ಯ ಸರ್ಕಾರ ಕೂಡಲೇ ಸರ್ಕಾರಿ ಬಸ್‌ಗಳನ್ನು ಆ್ಯಂಬುಲೆನ್ಸ್‌ಗಳಾಗಿ ಪರಿವರ್ತಿಸಬೇಕು ಎಂದು ಸಲಹೆ ನೀಡಿದ್ದಾರೆ. ಇಟಲಿ, ನ್ಯೂಯರ್ಕ್‌ನ್ನೂ ಮೀರಿಸುವ ಸ್ಥಿತಿ ರಾಜ್ಯದಲ್ಲಿ: ಹೆಚ್‌ಕೆ ಪಾಟೀಲ್‌ ಸರ್ಕಾರ […]

Guru

| Edited By: KUSHAL V

Jul 04, 2020 | 2:24 PM

ಬೆಂಗಳೂರು: ರಾಜ್ಯದಲ್ಲಿ ದಿನೆ ದಿನೇ ಕೊರೊನಾ ಕೈ ಮೀರಿ ಬೆಿಳೆಯುತ್ತಿರುವುದಕ್ಕ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿವೆ. ಈ ಸಬಂಂಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ನಾಯಕ ಹೆಚ್‌ ಕೆ ಪಾಟೀಲ್‌, ಸರ್ಕಾರ ಎಚ್ಚೆತ್ತುಕೊಂಡು ಪರಿಸ್ಥಿತಿಯನ್ನ ನೀಭಾಯಿಸಬೇಕು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿರುವ ಹೆಚ್‌ ಕೆ ಪಾಟೀಲ್‌, ಌಂಬುಲೆನ್ಸ್‌ ಕೊರತೆ ನೀಗಿಸಲು ರಾಜ್ಯ ಸರ್ಕಾರ ಕೂಡಲೇ ಸರ್ಕಾರಿ ಬಸ್‌ಗಳನ್ನು ಆ್ಯಂಬುಲೆನ್ಸ್‌ಗಳಾಗಿ ಪರಿವರ್ತಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇಟಲಿ, ನ್ಯೂಯರ್ಕ್‌ನ್ನೂ ಮೀರಿಸುವ ಸ್ಥಿತಿ ರಾಜ್ಯದಲ್ಲಿ: ಹೆಚ್‌ಕೆ ಪಾಟೀಲ್‌ ಸರ್ಕಾರ ಇದುವರೆಗೆ ಆಗಿರುವ ತಪ್ಪು ತಿದ್ದಿಕೊಂಡು ಎಚ್ಚರಿಕೆಯಿಂದ ಕೆಲಸ ಮಾಡಲಿ. ಪರಿಸ್ಥಿತಿ ಕೈ ಮೀರಿ ಹೋಗುವ ಮೊದಲು ಸರ್ಕಾರ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಲಿ. ಇಟಲಿ, ನ್ಯೂಯಾರ್ಕ್‌ಗಳನ್ನೂ ಮೀರಿಸುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣ ಆಗಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದಿದ್ದಾರೆ.

ಕೊರೊನಾ ಸಮಯದಲ್ಲೂ ಭೃಷ್ಟಾಚಾರ ಕೊರೊನಾದಂಥಹ ಪರಿಸ್ಥಿತಿಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಈಗ ಪೂರೈಕೆ ಮಾಡಿರುವ ಸ್ಯಾನಿಟೈಸರ್ ಕಳಪೆ ಗುಣಮಟ್ಟದಲ್ಲಿದೆ. ಯಾವ ಮುಖ ಹಿಡಿದುಕೊಂಡು ಸರ್ಕಾರ ನಡಸ್ತೀರಾ. ಹೀಗಾದ್ರೆ ಜನ ಬಾರ್ ಕೋಲ್ ಹಿಡಿದುಕೊಂಡು ಬರುತ್ತಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಪಾಟೀಲ್‌ ಹರಿಹಾಯ್ದಿದ್ದಾರೆ.

ರಾಜ್ಯದಲ್ಲಿ ಕಮ್ಯುನಿಟಿ ಸ್ಪ್ರೇಡ್‌ ಆಗಿದೆಯಾ ಕೊರೊನಾ? ಕೋವಿಡ್‌ ನಿಯಂತ್ರಿಸುವಲ್ಲಿ ಸರ್ಕಾರದಲ್ಲಾಗಿರುವ ಗೊಂದಲದ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಹೆಚ್‌ಕೆ, ಮೊದಲು ನಿಮ್ಮಲ್ಲಿ ಇರುವ ಗೊಂದಲ ಬಗೆಹರಿಸಿಕೊಳ್ಳಿ. ಕೊರೊನಾ ಕಮ್ಯುನಿಟಿ ಸ್ಪ್ರೆಡ್ ಆಗಿದೆ. ಮುದ್ಗಿಲ್ ಏನು ವರದಿ ಕೊಟ್ಟಿದ್ದಾರೆ ಅನ್ನೋದನ್ನ ಕಣ್ಣು ತೆರೆದು ನೋಡಿ. ಜನರಿಗೆ ಮೊದಲು ಸತ್ಯ ಹೇಳಿ. ಇಲ್ಲ ಅಂದ್ರೆ ಜನರ ಆಕ್ರೋಶಕ್ಕೆ ಕಾರಣರಾಗ್ತೀರಾ ಎಂದು ಸರ್ಕಾಕರದ ಮೇಲೆ ದಾಳಿ ಮಾಡಿದ್ದಾರೆ.

ರಾಜ್ಯ ಮಾನವ ಹಕ್ಕು ಆಯೋಗವನ್ನು ಕೂಡಾ ಎಚ್ಚರಿಸಿರುವ ಕಾಂಗ್ರೆಸ್‌ ನಾಯಕ, ಸರ್ಕಾರದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಕೆಲಸ ಮಾಡಿ. ರಸ್ತೆ ಮೇಲೆ ಜನ ಸಾಯುತ್ತಿದ್ದಾರೆ. ಸರ್ಕಾರಕ್ಕೆ ಬುದ್ಧಿ ಹೇಳುವ ಸ್ವಯಂ ಪ್ರೇರಿತ ಕೆಲಸ ಮಾಡಿ ಎಂದು ಆಗ್ರಹಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada