ಬಲೆಗೆ ಹಾಕಿ, ದೊಣ್ಣೆಯಿಂದ ಹೊಡೆದರು: ಸತ್ತ ಅಮ್ಮನಿಗಾಗಿ ಪುಟ್ಟ ಮಂಗ ಕಣ್ಣೀರು..
ಹಾವೇರಿ: ಹಳ್ಳಿಯ ತೋಟದಲ್ಲಿ ಸ್ವಚ್ಛಂದವಾಗಿ ಓಡಾಡುತ್ತಾ, ಹಣ್ಣುಗಳನ್ನು ತಿಂದು ಬದುಕು ಸಾಗಿಸುತ್ತಿದ್ದ ಮಂಗಗಳನ್ನು ಅಮಾನವೀಯವಾಗಿ ಕೊಂದಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದಲ್ಲಿ ನಡೆದಿದೆ. ಮುಸಿಯ ಜಾತಿಗೆ ಸೇರಿದ ಮಂಗಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ. ಬಲೆಗೆ ಹಾಕಿ, ದೊಣ್ಣೆಯಿಂದ ಹೊಡೆದು ವಿಕೃತಿ ಗ್ರಾಮದ ಲಾಲಖಾನವರ ಎಂಬುವವರ ತೋಟದಲ್ಲಿ ವಾಸವಿದ್ದ ಸುಮಾರು ಐದು ಕೋತಿಗಳನ್ನು ಕೆಲವು ದುಷ್ಕರ್ಮಿಗಳು ಬಲೆ ಹಾಕಿ ಹಿಡಿದ್ದಾರೆ. ಬಳಿಕ ದೊಣ್ಣೆಯಿಂದ ಅವುಗಳಿಗೆ ಹೊಡೆದು ಭೀಕರವಾಗಿ ಕೊಂದು ಹಾಕುವ ಮೂಲಕ ವಿಕೃತಿ ಮೆರೆದಿದ್ದಾರೆ. ಸತ್ತ […]
ಹಾವೇರಿ: ಹಳ್ಳಿಯ ತೋಟದಲ್ಲಿ ಸ್ವಚ್ಛಂದವಾಗಿ ಓಡಾಡುತ್ತಾ, ಹಣ್ಣುಗಳನ್ನು ತಿಂದು ಬದುಕು ಸಾಗಿಸುತ್ತಿದ್ದ ಮಂಗಗಳನ್ನು ಅಮಾನವೀಯವಾಗಿ ಕೊಂದಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದಲ್ಲಿ ನಡೆದಿದೆ. ಮುಸಿಯ ಜಾತಿಗೆ ಸೇರಿದ ಮಂಗಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.
ಬಲೆಗೆ ಹಾಕಿ, ದೊಣ್ಣೆಯಿಂದ ಹೊಡೆದು ವಿಕೃತಿ ಗ್ರಾಮದ ಲಾಲಖಾನವರ ಎಂಬುವವರ ತೋಟದಲ್ಲಿ ವಾಸವಿದ್ದ ಸುಮಾರು ಐದು ಕೋತಿಗಳನ್ನು ಕೆಲವು ದುಷ್ಕರ್ಮಿಗಳು ಬಲೆ ಹಾಕಿ ಹಿಡಿದ್ದಾರೆ. ಬಳಿಕ ದೊಣ್ಣೆಯಿಂದ ಅವುಗಳಿಗೆ ಹೊಡೆದು ಭೀಕರವಾಗಿ ಕೊಂದು ಹಾಕುವ ಮೂಲಕ ವಿಕೃತಿ ಮೆರೆದಿದ್ದಾರೆ.
ಸತ್ತ ಕಪಿಗಳಲ್ಲಿ ತಾಯಿ ಮಂಗವೊಂದು ಸಹ ಇದೆ. ಅದರ ಮರಿ ಜೀವಂತವಾಗಿದ್ದು ತನ್ನ ತಾಯಿಗಾಗಿ ಪರಿತಪಿಸುತ್ತಿದ್ದ ದೃಶ್ಯ ಎಲ್ಲರ ಮನಕಲಕುವಂತಿತ್ತು. ಸದ್ಯ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳನ್ನ ಸೆರೆಹಿಡಿಯಲು ಮಾಹಿತಿ ಕಲೆ ಹಾಕಿದ್ದಾರೆ.