ಬೆಂಗಳೂರಿನಲ್ಲಿ ನಿನ್ನೆ ಸಂಜೆಯಿಂದ ಕೊರೊನಾಗೆ 14 ಜನ ಸಾವು

ಬೆಂಗಳೂರು: ನಗರದಲ್ಲಿ ಕೊರೊನಾಗೆ ಸೋಂಕಿತರ ಸಂಖ್ಯೆ ಜೊತೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ನಿನ್ನೆ ಸಂಜೆಯಿಂದ ಈವರೆಗೆ ಕೊರೊನಾಗೆ 14 ಜನರು ಮೃತಪಟ್ಟಿದ್ದಾರೆ. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 60 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದಾರೆ. ರಾಜಾಜಿನಗರ ಇಎಸ್‌ಐ ಆಸ್ಪತ್ರೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ಮತ್ತು 75 ವರ್ಷದ ವೃದ್ಧರು, ಕೊವಿಡ್ ವಾರ್ಡ್‌ನಲ್ಲಿದ್ದ ಮತ್ತೋರ್ವ ಸೋಂಕಿತ ಮೃತಪಟ್ಟಿದ್ದಾರೆ. ವಿಕ್ಟೋರಿಯಾದಲ್ಲಿ 72 ವರ್ಷದ ವೃದ್ಧೆ ಕೊರೊನಾಗೆ ಕೊನೆಯುಸಿರೆಳೆದಿದ್ದಾರೆ. ಉಳಿದ 6 ಮಂದಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ […]

ಬೆಂಗಳೂರಿನಲ್ಲಿ ನಿನ್ನೆ ಸಂಜೆಯಿಂದ ಕೊರೊನಾಗೆ 14 ಜನ ಸಾವು
Edited By:

Updated on: Jul 23, 2020 | 1:51 PM

ಬೆಂಗಳೂರು: ನಗರದಲ್ಲಿ ಕೊರೊನಾಗೆ ಸೋಂಕಿತರ ಸಂಖ್ಯೆ ಜೊತೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ನಿನ್ನೆ ಸಂಜೆಯಿಂದ ಈವರೆಗೆ ಕೊರೊನಾಗೆ 14 ಜನರು ಮೃತಪಟ್ಟಿದ್ದಾರೆ.

ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 60 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದಾರೆ. ರಾಜಾಜಿನಗರ ಇಎಸ್‌ಐ ಆಸ್ಪತ್ರೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ಮತ್ತು 75 ವರ್ಷದ ವೃದ್ಧರು, ಕೊವಿಡ್ ವಾರ್ಡ್‌ನಲ್ಲಿದ್ದ ಮತ್ತೋರ್ವ ಸೋಂಕಿತ ಮೃತಪಟ್ಟಿದ್ದಾರೆ.

ವಿಕ್ಟೋರಿಯಾದಲ್ಲಿ 72 ವರ್ಷದ ವೃದ್ಧೆ ಕೊರೊನಾಗೆ ಕೊನೆಯುಸಿರೆಳೆದಿದ್ದಾರೆ. ಉಳಿದ 6 ಮಂದಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರು ಮೃತಪಟ್ಟಿದ್ದಾರೆ.

Published On - 11:48 am, Wed, 22 July 20