ಔತಣ ಕೂಟದಲ್ಲಿ ಊಟ ಮಾಡಿದವರಿಗೆ ವಾಂತಿ, ಭೇದಿ: 150 ಮಂದಿ ಅಸ್ವಸ್ಥ

ಅಸ್ವಸ್ಥರಾದವರನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವರಿಗೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಔತಣ ಕೂಟದಲ್ಲಿ ಊಟ ಮಾಡಿದವರಿಗೆ ವಾಂತಿ, ಭೇದಿ: 150 ಮಂದಿ ಅಸ್ವಸ್ಥ
ಅಂಗನವಾಡಿ ಕೇಂದ್ರದಲ್ಲಿ ಅಸ್ವಸ್ಥರಿಗೆ ಚಿಕಿತ್ಸೆ
Updated By: ganapathi bhat

Updated on: Apr 07, 2022 | 5:32 PM

ರಾಮನಗರ: ಮದುವೆಯ ಸಂತಸದ ಕ್ಷಣಗಳು ಮುಗಿಯುವಷ್ಟರಲ್ಲಿ ಅವಘಡವೊಂದು ಸಂಭವಿಸಿದೆ. ಮದುವೆ ಮುಗಿಸಿ, ಬೀಗರ ಔತಣ ಕೂಟದಲ್ಲಿ ಭಾಗವಹಿಸಿದ್ದ 100ರಿಂದ 150 ಮಂದಿ ಅಸ್ವಸ್ಥರಾಗಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಮೊಳೆದೊಡ್ಡಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.

ಕಳೆದ ಭಾನುವಾರ ಮುತ್ತುರಾಜು ಹಾಗೂ ರೋಹಿಣಿ ಜೋಡಿಯ ಮದುವೆಯಾಗಿತ್ತು. ನಿನ್ನೆ ಯುವತಿ ಮನೆಯವರಿಂದ ಬೀಗರ ಔತಣ ಕೂಡ ಆಯೋಜನೆ ಮಾಡಲಾಗಿತ್ತು. ಔತಣ ಕೂಟದಲ್ಲಿ ಸುಮಾರು 700 ರಿಂದ 800 ಜನ ಊಟ ಮಾಡಿದ್ದರು. ಅದರಲ್ಲಿ 100 ರಿಂದ 150 ಜನರಿಗೆ ವಾಂತಿ, ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.

ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಅಧಿಕಾರಿಗಳು

ಅಸ್ವಸ್ಥರಾದವರು ಅಂಗನವಾಡಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಅಸ್ವಸ್ಥರಾದವರನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವರಿಗೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಲೇಜು ಕೊಠಡಿಯಲ್ಲೇ ವಿದ್ಯಾರ್ಥಿಗಳ ಮದುವೆ: ಬಾಲ್ಯ ವಿವಾಹ ಪ್ರಕರಣ ದಾಖಲು

Published On - 2:03 pm, Wed, 9 December 20