ಮತ್ತೊಬ್ಬ ಡ್ರಗ್ ಸಪ್ಲೈಯರ್​ ಅರೆಸ್ಟ್​.. ಬಾಲಿವುಡ್​ ಗಣ್ಯರಿಗೆ ನಡುಕ ಶುರು

ಬಾಲಿವುಡ್​ ಡ್ರಗ್ಸ್ ಲಿಂಕ್​ ಸಂಬಂಧಪಟ್ಟಂತೆ ಎನ್​ಸಿಬಿ ಹಲವರನ್ನು ವಿಚಾರಣೆಗೆ ಒಳಪಡಿಸಿದೆ..ಬಂಧಿಸಿದೆ. ಈಗ ಬಂಧಿತನಾಗಿರುವ ರೆಗೆಲ್ ಕೂಡ ಬಾಲಿವುಡ್​ನ ಹಲವು ಗಣ್ಯರೊಂದಿಗೆ ಸಂಪರ್ಕದಲ್ಲಿದ್ದ ಎಂದು ತನಿಖಾ ದಳದ ಮೂಲಗಳು ತಿಳಿಸಿವೆ

ಮತ್ತೊಬ್ಬ ಡ್ರಗ್ ಸಪ್ಲೈಯರ್​ ಅರೆಸ್ಟ್​.. ಬಾಲಿವುಡ್​ ಗಣ್ಯರಿಗೆ ನಡುಕ ಶುರು
ಡ್ರಗ್ಸ್ ಪೆಡ್ಲರ್​ ರೆಗೆಲ್​ ಮಹಾಕಾಲ್​
Lakshmi Hegde

| Edited By: sadhu srinath

Dec 09, 2020 | 3:59 PM

ಮುಂಬೈ: ನಟ ಸುಶಾಂತ್​ ಸಿಂಗ್ ಸಾವಿನೊಂದಿಗೆ ತಳುಕು ಹಾಕಿಕೊಂಡಿರುವ ಡ್ರಗ್ಸ್ ಕೇಸ್​ಗೆ ಸಂಬಂಧಪಟ್ಟಂತೆ ಎನ್​ಸಿಬಿ ಮುಂಬೈನ ಐಷಾರಾಮಿ ಪ್ರದೇಶವಾದ ಅಂಧೇರಿ ಪಶ್ಚಿಮದಲ್ಲಿ ದಾಳಿ ನಡೆಸಿದ್ದು, ಸುಮಾರು 2.5 ಕೋಟಿ ರೂ.ಮೌಲ್ಯದ 5 ಕೆಜಿ ಹಶೀಶ್​ ಸೇರಿ ಹಲವು ವಿಧದ ಡ್ರಗ್ಸ್​ ವಶಪಡಿಸಿಕೊಂಡಿದೆ.

ಸುಶಾಂತ್ ಸಿಂಗ್​ ಮೃತಪಟ್ಟ ಬಳಿಕ ವಿವಿಧ ಆಯಾಮಗಳಲ್ಲಿ ತನಿಖೆ ಶುರುವಾಗಿತ್ತು. ಡ್ರಗ್ಸ್​ ಲಿಂಕ್​ಗೆ ಸಂಬಂಧಪಟ್ಟಂತೆ ತನಿಖೆ ಕೈಗೊಂಡಿದ್ದ ಎನ್​ಸಿಬಿ, ಹಲವು ಕಡೆಗಳಲ್ಲಿ ಈಗಾಗಲೇ ದಾಳಿ ನಡೆಸಿದೆ. ಈ ಬಾರಿ ಅಂಧೇರಿ ಪಶ್ಚಿಮದಲ್ಲಿ ರೇಡ್​ ಮಾಡಿದ್ದ ಎನ್​ಸಿಬಿ, ನಾಪತ್ತೆಯಾಗಿದ್ದ ಡ್ರಗ್ಸ್ ಪೆಡ್ಲರ್​ ರೆಗೆಲ್​ ಮಹಾಕಾಲ್​ ಎಂಬಾತನನ್ನು ಬಂಧಿಸಿದೆ. ಹಶಿಶ್​ ಜತೆಗೆ ಸ್ವಲ್ಪ ಪ್ರಮಾಣದಲ್ಲಿ ಎಂಡಿಎಂಎ ಮತ್ತು ಒಪಿಯಾಡ್​ಗಳನ್ನೂ ವಶಪಡಿಸಿಕೊಂಡಿದೆ.

2 ದಿನ NCB ಕಸ್ಟಡಿ​ಗೆ

ರೆಗೆಲ್ ಮಹಾಕಾಲ್​ನನ್ನು ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ಆತನನ್ನು ಎರಡು ದಿನಗಳ ಎನ್​ಸಿಬಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ನೀಡಿದೆ. ಆದರೆ ಈತ ರಿಯಾ ಚಕ್ರವರ್ತಿ ಮತ್ತು ಶೌವಿಕ್​​ನೊಂದಿಗೆ ಸಂಪರ್ಕದಲ್ಲಿದ್ದ ಬಗ್ಗೆ ಯಾವುದೇ ಮಾಹಿತಿಯನ್ನೂ ನಾವು ನೀಡುವುದಿಲ್ಲ ಎಂದು ಎನ್​ಸಿಬಿಯ ವಲಯ ನಿರ್ದೇಶಕ ಸಮೀರ್​ ವಾಂಖೆಡೆ ತಿಳಿಸಿದ್ದಾರೆ.

ಬಂಧಿತ ರೆಗೆಲ್​ ಮಹಾಕಾಲಾ ಇನ್ನೋರ್ವ ಆರೋಪಿ ಅನುಜ್ ಕೇಶ್ವಾನಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ಅನುಜ್ ಕೇಶ್ವಾನಿ, ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಮತ್ತು ಸುಶಾಂತ್​ಸಿಂಗ್ ರಜಪೂತ್​ಗೆ ಡ್ರಗ್ಸ್​ ನೀಡುತ್ತಿದ್ದ ಆರೋಪದಡಿ ಸೆಪ್ಟೆಂಬರ್​ನಲ್ಲಿಯೇ ಬಂಧಿತನಾಗಿದ್ದಾನೆ. ಇನ್ನು ರಿಯಾ ಮತ್ತು ಆಕೆಯ ಸಹೋದರ್​ ಶೌವಿಕ್​ರನ್ನು ಕೂಡ ಎನ್​ಸಿಬಿ ಬಂಧಿಸಿತ್ತು. ಅವರು ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿದ್ದಾರೆ.

ಬಾಲಿವುಡ್​ ಡ್ರಗ್ಸ್ ಲಿಂಕ್​ ಸಂಬಂಧಪಟ್ಟಂತೆ ಎನ್​ಸಿಬಿ ಹಲವರನ್ನು ವಿಚಾರಣೆಗೆ ಒಳಪಡಿಸಿದೆ..ಬಂಧಿಸಿದೆ. ಈಗ ಬಂಧಿತನಾಗಿರುವ ರೆಗೆಲ್ ಕೂಡ ಬಾಲಿವುಡ್​ನ ಹಲವು ಗಣ್ಯರೊಂದಿಗೆ ಸಂಪರ್ಕದಲ್ಲಿದ್ದ ಎಂದು ತನಿಖಾ ದಳದ ಮೂಲಗಳು ತಿಳಿಸಿವೆ. ಈತನಿಂದಾಗಿ ಇನ್ನಷ್ಟು ಜನರ ಸತ್ಯ ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada