ಅಕ್ರಮ ಹಣ ವರ್ಗಾವಣೆ: ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಅರ್ಜಿಗೆ ಸುಪ್ರೀಂಕೋರ್ಟ್ ಮನ್ನಣೆ
₹ 175 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರತಾಪ್ ಸರ್ನಾಯಕ್, ಅವರ ಮಗ ವಿಹಾಂಗ್ ಸರ್ನಾಯಕ್ ಮತ್ತು ದಾಯಾದಿ ಯೋಗೇಶ್ ಚಂಡೆಗಲ ಆರೋಪಿಗಳಾಗಿದ್ದಾರೆ.
ಮುಂಬೈ: ಮುಂಬೈ ಮೆಟ್ರೊಪಾಲಿಟನ್ ರೀಜನ್ ಡೆವಲಪ್ಮೆಂಟ್ ಅಥಾರಿಟಿಯ (MMRDA) ವಿವಿಧ ಯೋಜನೆಗಳಿಗೆ ಸೆಕ್ಯುರಿಟಿ ಗಾರ್ಡ್ಗಳನ್ನು ಒದಗಿಸುವ ಒಪ್ಪಂದದಲ್ಲಿ ನಡೆದಿರುವ ಅಕ್ರಮಗಳ ಆರೋಪ ಹೊತ್ತಿರುವ ಟಾಪ್ಸ್ ಗ್ರೂಪ್‌ನ ಆಡಳಿತ ಮಂಡಳಿ ಸದಸ್ಯ ಶಿವಸೇನೆಯ ಶಾಸಕ ಪ್ರತಾಪ್ ಸರ್ನಾಯಕ್ಗೆ ಸುಪ್ರೀಂಕೋರ್ಟ್ ಕೆಲ ರಿಯಾಯ್ತಿಗಳನ್ನು ನೀಡಿದೆ.
₹ 175 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರತಾಪ್ ಸರ್ನಾಯಕ್, ಅವರ ಮಗ ವಿಹಾಂಗ್ ಸರ್ನಾಯಕ್ ಮತ್ತು ದಾಯಾದಿ ಯೋಗೇಶ್ ಚಂಡೆಗಲ ಆರೋಪಿಗಳಾಗಿದ್ದಾರೆ. ಇವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿತ್ತು.
ಇಡಿ ಸಮನ್ಸ್ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಪ್ರತಾಪ್ ಸರ್ನಾಯಕ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಅರ್ಜಿದಾರರ ವಿರುದ್ಧ ಯಾವುದೇ ಏಕಪಕ್ಷೀಯ ಕ್ರಮ ತೆಗೆದುಕೊಳ್ಳಬಾರದು ಎಂದು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಸೂಚಿಸಿತು. ನಮ್ಮ ವಕೀಲರ ಸಮ್ಮುಖದಲ್ಲಿಯೇ ವಿಚಾರಣೆ ನಡೆಸಬೇಕು. ವಿಚಾರಣೆಯ ವಿಡಿಯೊ ಮತ್ತು ಆಡಿಯೊ ರೆಕಾರ್ಡ್ ಮಾಡಬೇಕು ಎಂದು ಸರ್ದೇಸಾಯಿ ಅರ್ಜಿಯಲ್ಲಿ ವಿನಂತಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಪ್ಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಶಶಿಧರನ್ರನ್ನು ಇಡಿ ಈಚೆಗೆ ಬಂಧಿಸಿತ್ತು. ಶಶಿಧರನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ವಿವಿಧ ಕಲಂಗಳ ಅನ್ವಯ ಆರೋಪ ಹೊರಿಸಲಾಗಿತ್ತು.
2014 ಮತ್ತು 2015ರ ಅವಧಿಯಲ್ಲಿ ಮುಂಬೈ ಮೆಟ್ರೊಪಾಲಿಟನ್ ರೀಜನ್ ಡೆವಲಪ್ಮೆಂಟ್ ಅಥಾರಿಟಿಯ (MMRDA) ಯೋಜನೆಗಳಿಗೆ ಸೆಕ್ಯುರಿಟಿ ಗಾರ್ಡ್ ಒದಗಿಸುವಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಇಡಿ ಪರಿಶೀಲನೆ ನಡೆಸುತ್ತಿತ್ತು. ಟಾಪ್ಸ್ ಗ್ರೂಪ್‌ನ ಮಾಜಿ ನಿರ್ದೇಶಕ ರಮೇಶ್ ಅಯ್ಯರ್ ಕಂಪನಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಶಶೀಧರನ್ ಇತ್ತೀಚೆಗೆ ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಈ ಪ್ರಕರಣವು ಮುಂಬೈ ಪೊಲೀಸ್ ಇಲಾಖೆ ನೀಡಿರುವ ಆರ್ಥಿಕ ಅಪರಾಧಗಳ ಮಾಹಿತಿಯನ್ನು ಆಧರಿಸಿದೆ. 2009ರಲ್ಲಿ ಕೆಲವು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಇತರ ಕೆಲವು ವಹಿವಾಟುಗಳಲ್ಲಿ ನಡೆದ ಅಕ್ರಮದ ಕುರಿತು ಟಾಪ್ಸ್ ಗ್ರೂಪ್‌ನ ಪ್ರವರ್ತಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಹಿಂದುತ್ವ: ಶಿವ ಸೇನಾ ಮತ್ತು ಬಿಜೆಪಿ ನಡುವೆ ನಿಲ್ಲದ ಜಗಳ | BJP-Shiv Sena again lock horns over Hindutva