ಕೊರೊನಾ ಸೋಂಕಿತರ ಮನೆಗೆ ಎಚ್ಚರಿಕೆಯ ಪೋಸ್ಟರ್​ ಬೇಡ: ಸುಪ್ರೀಂಕೋರ್ಟ್​ ಸೂಚನೆ

ಕರ್ನಾಟದಲ್ಲಿ ಈಗಾಗಲೇ ಈ ಪ್ರಕ್ರಿಯೆಗೆ ಬ್ರೇಕ್​ ಹಾಕಲಾಗಿದೆ. ಆದರೆ, ಅನೇಕ ರಾಜ್ಯಗಳಲ್ಲಿ ಈ ಕ್ರಮ ಇಂದು ಕೂಡ ಮುಂದುವರಿದಿದೆ.

ಕೊರೊನಾ ಸೋಂಕಿತರ ಮನೆಗೆ ಎಚ್ಚರಿಕೆಯ ಪೋಸ್ಟರ್​ ಬೇಡ: ಸುಪ್ರೀಂಕೋರ್ಟ್​ ಸೂಚನೆ
ಸಾಂದರ್ಭಿಕ ಚಿತ್ರ
Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 09, 2020 | 4:45 PM

ನವದೆಹಲಿ: ಕೊರೊನಾ ವೈರಸ್ ಸೋಂಕಿತರ ಮನೆಗೆ ಎಚ್ಚರಿಕೆಯ ಪೋಸ್ಟರ್​ ಅಂಟಿಸುವ ಕ್ರಮವನ್ನು ತಕ್ಷಣ ನಿಲ್ಲಿಸಿ ಎಂದು ಸುಪ್ರೀಂಕೋರ್ಟ್​ ಸೂಚನೆ ನೀಡಿದೆ.

ಕರ್ನಾಟದಲ್ಲಿ ಈಗಾಗಲೇ ಈ ಪ್ರಕ್ರಿಯೆಗೆ ಬ್ರೇಕ್​ ಹಾಕಲಾಗಿದೆ. ಆದರೆ, ಅನೇಕ ರಾಜ್ಯಗಳಲ್ಲಿ ಈ ಕ್ರಮ ಇಂದು ಕೂಡ ಮುಂದುವರಿದಿದೆ. ಇದಕ್ಕೆ, ಸುಪ್ರೀಂಕೋರ್ಟ್​ ಈಗ ಆಕ್ಷೇಪ ವ್ಯಕ್ತಪಡಿಸಿದ್ದು, ಸೋಂಕಿತರಲ್ಲಿ ಕಳಂಕಿತರು ಎನ್ನುವ ಭಾವನೆ ಮೂಡಲಿದೆ ಎಂದು ಕಳವಳ ಹೊರಹಾಕಿದೆ.

ಕೊರೊನಾ ಸೋಂಕಿತರ ಮನೆ ಎದುರು ಗೇಟ್​ ನಿಲ್ಲಿಸಿ, ಅದಕ್ಕೆ ಎಚ್ಚರಿಕೆಯ ಪೋಸ್ಟರ್​ ಅಂಟಿಸಲಾಗುತ್ತಿತ್ತು. ಈ ಮೂಲಕ ಮನೆಯಲ್ಲಿ ಕೊರೊನಾ ಸೋಂಕಿತರಿದ್ದಾರೆ ಎನ್ನುವ ಎಚ್ಚರಿಕೆಯನ್ನು ಅಕ್ಕ-ಪಕ್ಕದ ಮನೆಯವರಿಗೆ ನೀಡುವುದು ಇದರ ಉದ್ದೇಶವಾಗಿತ್ತು. ಈ ಕ್ರಮದ ಉದ್ದೇಶ ಉತ್ತಮವಾಗಿದ್ದರೂ, ಕೊರೊನಾ ಸೋಂಕಿತರನ್ನು ನೋಡುವ ದೃಷ್ಟಿ ಬೇರೆ ಆಗಿದೆ ಎನ್ನುವ ಅಭಿಪ್ರಾಯವನ್ನು ಅನೇಕರು ಹೊರ ಹಾಕಿದ್ದರು. ಈಗ ಸುಪ್ರೀಂಕೋರ್ಟ್​ ಕೂಡ ಇದೇ ರೀತಿಯ ಅಭಿಪ್ರಾಯ ಹೊರ ಹಾಕಿದೆ.

ಸುಪ್ರೀಂ ಹೇಳಿದ್ದೇನು: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್​, ಕೊರೊನಾ ಸೊಂಕಿತರ ಮನೆಗೆ ಪೋಸ್ಟರ್ ಅಂಟಿಸುವ ಅವಶ್ಯಕತೆ ಇಲ್ಲ. ಪೋಸ್ಟರ್ ಅಂಟಿಸುವುದು ಸರಿಯಾದ ಕ್ರಮವಲ್ಲ. ಹೀಗೆ ಪೋಸ್ಟರ್​ ಅಂಟಿಸುವದರಿಂದ ಸೋಂಕಿತರಲ್ಲಿ ಕಳಂಕಿತರು ಎನ್ನುವ ಭಾವನೆ ಮೂಡಲಿದೆ. ಎಚ್ಚರಿಕೆಯ ಪೋಸ್ಟರ್​​​ಗಳು ಅಸ್ಪೃಶ್ಯತೆಗೆ ಕಾರಣವಾಗಬಾರದು ಎಂದಿದೆ.

ಸರ್ಕಾರಗಳಿಗೆ ಸೂಚನೆ: ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜವಾಬ್ದಾರಿ. ಹೀಗಾಗಿ, ಸರ್ಕಾರಗಳಿಗೆ ಈ ಬಗ್ಗೆ ಗಮನಹರಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಬೆಂಗಳೂರಲ್ಲಿ ಹಾಕಲಾಗುತ್ತಿತ್ತು ಪೋಸ್ಟರ್​: ಯಾವುದೇ ವ್ಯಕ್ತಿಗೆ ಕೊರೊನಾ ಬಂದರೆ, ಅಂಥವರ ಮನೆಗೆ ಗೇಟ್​ ಹಾಕಿ ಎಚ್ಚರಿಕೆಯ ಪೋಸ್ಟರ್​ ಅಂಟಿಸಲಾಗುತ್ತಿತ್ತು. ಆರಂಭದ ದಿನಗಳಲ್ಲಿ ಕೊರೊನಾ ಪಾಸಿಟಿವ್ ಬಂದ ಗಲ್ಲಿಯನ್ನೇ ಸೀಲ್​ ಡೌನ್​ ಮಾಡಲಾಗುತ್ತಿತ್ತು. ಆದರೆ, ದಿನ ಕಳೆದಂತೆ, ಈ ಕ್ರಮಗಳನ್ನು ಕೈಬಿಡಲಾಗಿತ್ತು.

ನಟಿ ಮೇಘನಾ ರಾಜ್‌ ಹಾಗೂ ಫ್ಯಾಮಿಲಿಗೆ ಕೊರೊನಾ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada