ಕೊರೊನಾಗೆ ಬಲಿಯಾದವರ ಅಂತ್ಯಕ್ರಿಯೆಗೆ 2 ಎಕರೆ ಜಾಗ ಮೀಸಲು

|

Updated on: Jul 01, 2020 | 10:56 AM

ಬೆಂಗಳೂರು: ಮೃತ ಕೊರೊನಾ ಸೋಂಕಿತ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಿ ಬಳಸಿದ ಪಿಪಿಇ ಕಿಟ್​ಗಳನ್ನು ಅಲ್ಲಿಯೇ ಬಿಸಾಡಿ ಹೋಗಿದ್ದ ವಿಚಾರಕ್ಕೆ ಸಂಬಂಧಿಸಿ ಮಹತ್ವದ ಬೆಳವಣೆಗೆ ನಡೆದಿದೆ. ಈ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ ನಗರದಲ್ಲಿರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡುವಂತಿಲ್ಲ ಎಂದು ವಾರ್ನಿಂಕ್ ಕೊಟ್ಟಿದೆ. ಈ ಬಗ್ಗೆ ಟಿವಿ9ಗೆ ಆರೋಗ್ಯ ಖಾತೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ. ಯಾಕೆ ಈ ರೀತಿ ಗೊಂದಲ ಮಾಡ್ಕೋತಿದಾರೆ ತಿಳಿಯುತ್ತಿಲ್ಲ. ಬೆಂಗಳೂರಿನ ಹೊರವಲಯದಲ್ಲಿ 2 ಎಕರೆ ಜಾಗ ನೀಡ್ತೇವೆ. ಕೊರೊನಾ ಸೋಂಕಿತರ […]

ಕೊರೊನಾಗೆ ಬಲಿಯಾದವರ ಅಂತ್ಯಕ್ರಿಯೆಗೆ 2 ಎಕರೆ ಜಾಗ ಮೀಸಲು
Follow us on

ಬೆಂಗಳೂರು: ಮೃತ ಕೊರೊನಾ ಸೋಂಕಿತ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಿ ಬಳಸಿದ ಪಿಪಿಇ ಕಿಟ್​ಗಳನ್ನು ಅಲ್ಲಿಯೇ ಬಿಸಾಡಿ ಹೋಗಿದ್ದ ವಿಚಾರಕ್ಕೆ ಸಂಬಂಧಿಸಿ ಮಹತ್ವದ ಬೆಳವಣೆಗೆ ನಡೆದಿದೆ. ಈ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ ನಗರದಲ್ಲಿರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡುವಂತಿಲ್ಲ ಎಂದು ವಾರ್ನಿಂಕ್ ಕೊಟ್ಟಿದೆ. ಈ ಬಗ್ಗೆ ಟಿವಿ9ಗೆ ಆರೋಗ್ಯ ಖಾತೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಯಾಕೆ ಈ ರೀತಿ ಗೊಂದಲ ಮಾಡ್ಕೋತಿದಾರೆ ತಿಳಿಯುತ್ತಿಲ್ಲ. ಬೆಂಗಳೂರಿನ ಹೊರವಲಯದಲ್ಲಿ 2 ಎಕರೆ ಜಾಗ ನೀಡ್ತೇವೆ. ಕೊರೊನಾ ಸೋಂಕಿತರ ಅಂತ್ಯಕ್ರಿಯೆಗೆ 2 ಎಕರೆ ಜಾಗ ಮೀಸಲಿಡುತ್ತೇವೆ. ಬಿಬಿಎಂಪಿ ಕಮೀಷನರ್ ಪ್ರಸ್ತಾವನೆಗೆ ಇಂದೇ ಅನುಮೋದನೆ ಎಂದು ಶ್ರೀರಾಮುಲು ಹೇಳಿದ್ರು.