ಬೆಳಗಾವಿ: ಎರಡು ದಿನದ ಹಸುಗೂಸನ್ನು ರಸ್ತೆಯಲ್ಲಿ ಬಿಸಾಡಿದ ಪಾಪಿಗಳು, ಸ್ಥಳೀಯರಿಂದ ರಕ್ಷಣೆ

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Nov 24, 2022 | 2:38 PM

ಸ್ಥಳೀಯರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಳಗಾವಿ: ಇದು ಘೋರ ಅಪರಾಧವಲ್ಲದೆ ಮತ್ತೇನೂ ಅಲ್ಲ. ಯಾರೋ ಪಾಪಿಗಳು ತಮಗೆ ಬೇಡದ, ಕೇವಲ ಎರಡು-ದಿನದ ಮಗುವನ್ನು ಒಂದು ಹರಕಲು ಬ್ಯಾಗ್ ನಲ್ಲಿಟ್ಟು ಗುಂಡಿಯಲ್ಲಿ ಬಿಸಾಡಿರುವ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ನಿಪ್ಪಾಣಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಪಾಪಿಗಳು ನಿಪ್ಪಾಣಿಯ ಕೆಎಲ್ ಶಾಲೆ ಬಳಿಯ ಗುಂಡಿಯೊಂದರಲ್ಲಿ ಹಸುಗೂಸನ್ನು ಬಿಸಾಡಿದ್ದಾರೆ. ಸ್ಥಳೀಯರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
TV9 Web

TV9 Kannada

Read More