ಆನ್‌ಲೈನ್‌ನಲ್ಲಿ ಪೋಕರ್ ಗೇಮ್: ಮೂವರು ಅರೆಸ್ಟ್, ಮುಖ್ಯ ಆರೋಪಿಗಾಗಿ ಹುಡುಕಾಟ

ಬೆಂಗಳೂರು: ಲೈಸೆನ್ಸ್ ಇಲ್ಲದೆ ಆನ್‌ಲೈನ್‌ನಲ್ಲಿ ಪೋಕರ್ ಗೇಮ್ ಆಟದಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮುನಿರಾಜ್, ಶಂಕರಪ್ಪ, ಮಹಮ್ಮದ್ ಜಾಬೀರ್ ಬಂಧಿತ ಆರೋಪಿಗಳು. ಕೊರೊನಾ ವಿರುದ್ಧದ ಹೋರಾಟಕ್ಕೆ ದೇಶವನ್ನು ಲಾಕ್​ಡೌನ್ ಮಾಡಲಾಗಿದೆ. ಮನೆಯಲ್ಲೇ ಕುಳಿತು ಸೋಂಬೇರಿಗಳಾಗಿದ್ದ ಇವರು ಇಂತಹ ಕೃತ್ಯಕ್ಕೆ ಸಾಕ್ಷಿಯಾಗಿದ್ದಾರೆ. ಲೈಸೆನ್ಸ್ ಇಲ್ಲದೆ ಆನ್‌ಲೈನ್‌ನಲ್ಲಿ ಗೇಮ್ ಆಡಿ ವಾಟ್ಸ್ಯಾಪ್ ಗ್ರೂಪ್ ಮೂಲಕ ವ್ಯವಹರಿಸುತ್ತಿದ್ದರು. ಲಿಂಗರಾಜಪುರಂ ಬಸ್ ನಿಲ್ದಾಣದಲ್ಲಿ ವ್ಯವಹರಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಹಾಗೂ 1700 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಮತ್ತೋರ್ವ ಕಿಂಗ್ ಪಿನ್ […]

ಆನ್‌ಲೈನ್‌ನಲ್ಲಿ ಪೋಕರ್ ಗೇಮ್: ಮೂವರು ಅರೆಸ್ಟ್, ಮುಖ್ಯ ಆರೋಪಿಗಾಗಿ ಹುಡುಕಾಟ

Updated on: Apr 30, 2020 | 7:53 AM

ಬೆಂಗಳೂರು: ಲೈಸೆನ್ಸ್ ಇಲ್ಲದೆ ಆನ್‌ಲೈನ್‌ನಲ್ಲಿ ಪೋಕರ್ ಗೇಮ್ ಆಟದಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮುನಿರಾಜ್, ಶಂಕರಪ್ಪ, ಮಹಮ್ಮದ್ ಜಾಬೀರ್ ಬಂಧಿತ ಆರೋಪಿಗಳು. ಕೊರೊನಾ ವಿರುದ್ಧದ ಹೋರಾಟಕ್ಕೆ ದೇಶವನ್ನು ಲಾಕ್​ಡೌನ್ ಮಾಡಲಾಗಿದೆ. ಮನೆಯಲ್ಲೇ ಕುಳಿತು ಸೋಂಬೇರಿಗಳಾಗಿದ್ದ ಇವರು ಇಂತಹ ಕೃತ್ಯಕ್ಕೆ ಸಾಕ್ಷಿಯಾಗಿದ್ದಾರೆ.

ಲೈಸೆನ್ಸ್ ಇಲ್ಲದೆ ಆನ್‌ಲೈನ್‌ನಲ್ಲಿ ಗೇಮ್ ಆಡಿ ವಾಟ್ಸ್ಯಾಪ್ ಗ್ರೂಪ್ ಮೂಲಕ ವ್ಯವಹರಿಸುತ್ತಿದ್ದರು. ಲಿಂಗರಾಜಪುರಂ ಬಸ್ ನಿಲ್ದಾಣದಲ್ಲಿ ವ್ಯವಹರಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಹಾಗೂ 1700 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಮತ್ತೋರ್ವ ಕಿಂಗ್ ಪಿನ್ ಕಿಶೋರ್ ಎಂಬಾತ ತಪ್ಪಿಸಿಕೊಂಡಿದ್ದು ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬಾಣಸವಾಡಿ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Published On - 7:52 am, Thu, 30 April 20