
ಮೈಸೂರು: ಕಪಿಲಾ ನದಿಗೆ ಹಾರಿ ಮೂವರು ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರಲ್ಲಿ ಒಬ್ಬರು ಸಾವಿಗೀಡಾಗಿದ್ದು, ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ತಾಯಿಯ ಜೊತೆಗೆ ಇಬ್ಬರು ಪುತ್ರಿಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
35 ವರ್ಷದ ರಶ್ಮಿ ಮೃತ ದುರ್ದೈವಿ. ಮೃತ ರಶ್ಮಿ ತಾಯಿ ಅಕ್ಕಮ್ಮ ಹಾಗೂ ಅವರ ಮಗಳು, ಗೃಹಿಣಿ ಮಿಂಚು ರಕ್ಷಿಸಲ್ಪಟ್ಟಿದ್ದಾರೆ. ಇಬ್ಬರನ್ನೂ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಂಜನಗೂಡು ಮಲ್ಲನ ಮೂಲೆ ದೇವಸ್ಥಾನದ ಬಳಿ ಈ ಕಹಿ ಘಟನೆ ನಡೆದಿದೆ. ಇವರೆಲ್ಲರೂ ಮೈಸೂರಿನ ಜೆಎಸ್ಎಸ್ ಕಾಲೋನಿ ನಿವಾಸಿಗಳು. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.