ರಾಯಚೂರು: ಭಷ್ಟ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಲೆಂದೇ ಎಸಿಬಿ ಸ್ಥಾಪನೆಯಾಗಿದೆ. ಲೋಕಾಯುಕ್ತಕ್ಕೆ ಎಳ್ಳುನೀರು ಬಿಟ್ಟ ನಂತರ, ಎಸಿಬಿ ಅಸ್ತಿತ್ವಕ್ಕೆ ಬಂದಿದೆ. ಎಸಿಬಿ ಠಾಣೆ ಸ್ಥಾಪನೆ, ಕಚೇರಿಗಳ ಸ್ಥಾಪನೆಗೆ ಅಂತಾನೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಕೂಡ ಮಾಡಿದೆ. ಆದರೆ ಇದೆಲ್ಲವೂ ಈಗ ನೀರಲ್ಲಿ ಹೋಮ ಮಾಡಿದಂತಾಗಿದೆ.
ಎಸಿಬಿ ಆಟಕ್ಕುಂಟು ಲೆಕ್ಕಕ್ಕಿಲ್ಲ:
ದೇಶ ಹಾಗೂ ರಾಜ್ಯವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಲ್ಲಿ ಭ್ರಷ್ಟಾಚಾರವೂ ಒಂದು. ಬಡವರ ಹಾಗೂ ಸಮಸ್ಯೆ ಸುಳಿಯಲ್ಲಿ ಸಿಲುಕಿ ನರಳುತ್ತಿರುವವರ ಬಳಿ ಭ್ರಷ್ಟರು ಲೂಟಿಗಿಳಿದಿದ್ದಾರೆ. ಇದೆಲ್ಲದಕ್ಕೂ ಬ್ರೇಕ್ ಹಾಕಿ ಭ್ರಷ್ಟರಿಗೆ ಪಾಠಕಲಿಸಲು ಸ್ಥಾಪನೆಯಾಗಿದ್ದ ಲೋಕಾಯುಕ್ತ ಸಂಸ್ಥೆಗೆ ಸಿದ್ದರಾಮಯ್ಯ ಸರ್ಕಾರ ಎಳ್ಳುನೀರು ಬಿಟ್ಟು ಎಸಿಬಿ ಸ್ಥಾಪನೆ ಮಾಡಲಾಗಿತ್ತು. ಆದ್ರೆ ಸರ್ಕಾರ ಅಂದುಕೊಂಡಿದ್ದೇ ಒಂದು, ಆಗಿರೋದು ಮತ್ತೊಂದು. ಎಸಿಬಿ ಸ್ಥಾಪನೆಯಾದ ಬಳಿಕ ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣವಾಗಲಿದೆ ಅನ್ನೋ ಭರವಸೆ ಹುಸಿಯಾಗಿದೆ. ಅದರಲ್ಲೂ ಅಭಿವೃದ್ಧಿ ವಿಚಾರದಲ್ಲಿ ತೀರಾ ಹಿಂದುಳಿದಿರುವ ಕಲ್ಯಾಣ ಕರ್ನಾಟಕದಲ್ಲಿ ಎಸಿಬಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಬಡವರನ್ನು ಸುಲಿಗೆ ಮಾಡುವ ಭ್ರಷ್ಟರಿಗಿಲ್ಲ ಶಿಕ್ಷೆ?
ಎಸಿಬಿ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ!
ಒಟ್ನಲ್ಲಿ ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತುಹಾಕುವ ಸರ್ಕಾರದ ಕನಸು ಇನ್ನೂ ನನಸಾಗಿಲ್ಲ. ಈ ಹೊತ್ತಲ್ಲೇ ‘ಎಸಿಬಿ’ ಇದ್ದೂ ಇಲ್ಲದಂತಾಗಿದ್ದು, ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಮೇಜರ್ ಸರ್ಜರಿಗೆ ಮುಂದಾಗಬೇಕಿದೆ.