ಬೈಕ್ ವ್ಹೀಲಿಂಗ್ ವೇಳೆ ಅಪಘಾತ ಶಂಕೆ, ಜಿಕೆವಿಕೆ ಬಳಿ ಮೂವರ ಸಾವು

|

Updated on: Jun 21, 2020 | 11:40 AM

ಬೆಂಗಳೂರು: ಎರಡು ಬೈಕ್​ಗಳು ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಅಪಘಾತ ನಗರದ ಜಿಕೆವಿಕೆ ಬಳಿ ನಡೆದಿದೆ. ಬೈಕ್ ವ್ಹೀಲಿಂಗ್ ವೇಳೆ ಅಪಘಾತ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮಹಮ್ಮದ್ ಆದಿಲ್ ಅಯಾನ್(16), ಸಯ್ಯದ್ ರಿಯಾಜ್(22), ಮಾಜ್ ಅಹಮ್ಮದ್ ಖಾನ್(17) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ನಾಗವಾರ ಸಮೀಪದ ಗೋವಿಂದಪುರ ನಿವಾಸಿಗಳು. ಘಟನೆ ಸಂಬಂಧ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಘಟನಾಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹಗಳನ್ನು […]

ಬೈಕ್ ವ್ಹೀಲಿಂಗ್ ವೇಳೆ ಅಪಘಾತ ಶಂಕೆ, ಜಿಕೆವಿಕೆ ಬಳಿ ಮೂವರ ಸಾವು
Follow us on

ಬೆಂಗಳೂರು: ಎರಡು ಬೈಕ್​ಗಳು ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಅಪಘಾತ ನಗರದ ಜಿಕೆವಿಕೆ ಬಳಿ ನಡೆದಿದೆ. ಬೈಕ್ ವ್ಹೀಲಿಂಗ್ ವೇಳೆ ಅಪಘಾತ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮಹಮ್ಮದ್ ಆದಿಲ್ ಅಯಾನ್(16), ಸಯ್ಯದ್ ರಿಯಾಜ್(22), ಮಾಜ್ ಅಹಮ್ಮದ್ ಖಾನ್(17) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ನಾಗವಾರ ಸಮೀಪದ ಗೋವಿಂದಪುರ ನಿವಾಸಿಗಳು. ಘಟನೆ ಸಂಬಂಧ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಘಟನಾಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.