ಮಾಸ್ಕ್ ಧರಿಸದೆ, ಅಂತರ ಕಾಯ್ದುಕೊಳ್ಳದಿದ್ದಕ್ಕೆ ಟ್ರಾಫಿಕ್ ಠಾಣೆಯ 6 ಸಿಬ್ಬಂದಿ ಅಮಾನತು

ಬೆಂಗಳೂರು: ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಜಾಲಹಳ್ಳಿ ಟ್ರಾಫಿಕ್ ಠಾಣೆಯ ಆರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಹಾಗೂ ಅಮಾನತು ಅವಧಿಯಲ್ಲಿ ಖಾಸಗಿ ನೌಕರಿ ಹಾಗೂ ವ್ಯವಹಾರ ಮಾಡಿದರೆ ಜೀವನ ಭತ್ಯೆ ಮುಟ್ಟುಗೋಲು ಹಾಕಿಕೊಳ್ಳುವುದು, ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಸೌಮ್ಯಲತಾ ಎಚ್ಚರಿಕೆ ನೀಡಿದ್ದಾರೆ. ಕರ್ತವ್ಯ ಬಿಟ್ಟು ಪಾರ್ಕ್‌ನಲ್ಲಿ ಗುಂಪು ಸೇರಿದ್ದ ಹಿನ್ನೆಲೆಯಲ್ಲಿ ಆರು ಮಂದಿ ಪೊಲೀಸರನ್ನ ಅಮಾನತು ಮಾಡಿ ಡಿಸಿಪಿ ಆದೇಶಿಸಿದ್ದಾರೆ. ಜಾಲಹಳ್ಳಿ ಸಂಚಾರ ಠಾಣೆಯ ಎಎಸ್‌ಐ ಮಂಜುನಾಥಯ್ಯ, ಹೆಡ್ […]

ಮಾಸ್ಕ್ ಧರಿಸದೆ, ಅಂತರ ಕಾಯ್ದುಕೊಳ್ಳದಿದ್ದಕ್ಕೆ ಟ್ರಾಫಿಕ್ ಠಾಣೆಯ 6 ಸಿಬ್ಬಂದಿ ಅಮಾನತು

Updated on: Aug 21, 2020 | 3:28 PM

ಬೆಂಗಳೂರು: ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಜಾಲಹಳ್ಳಿ ಟ್ರಾಫಿಕ್ ಠಾಣೆಯ ಆರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಹಾಗೂ ಅಮಾನತು ಅವಧಿಯಲ್ಲಿ ಖಾಸಗಿ ನೌಕರಿ ಹಾಗೂ ವ್ಯವಹಾರ ಮಾಡಿದರೆ ಜೀವನ ಭತ್ಯೆ ಮುಟ್ಟುಗೋಲು ಹಾಕಿಕೊಳ್ಳುವುದು, ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಸೌಮ್ಯಲತಾ ಎಚ್ಚರಿಕೆ ನೀಡಿದ್ದಾರೆ.

ಕರ್ತವ್ಯ ಬಿಟ್ಟು ಪಾರ್ಕ್‌ನಲ್ಲಿ ಗುಂಪು ಸೇರಿದ್ದ ಹಿನ್ನೆಲೆಯಲ್ಲಿ ಆರು ಮಂದಿ ಪೊಲೀಸರನ್ನ ಅಮಾನತು ಮಾಡಿ ಡಿಸಿಪಿ ಆದೇಶಿಸಿದ್ದಾರೆ. ಜಾಲಹಳ್ಳಿ ಸಂಚಾರ ಠಾಣೆಯ ಎಎಸ್‌ಐ ಮಂಜುನಾಥಯ್ಯ, ಹೆಡ್ ಕಾನ್ಸ್​ಟೇಬಲ್​ ನಾಗರಾಜು, ಕಾನ್ಸ್​ಟೇಬಲ್​ಗಳಾದ ಪದ್ಮನಾಭ್, ಮಧುಸೂದನ್, ವಿಶ್ವನಾಥ್, ಮಹಿಳಾ ಕಾನ್ಸ್​ಟೇಬಲ್ ಸುಜನಾ ಅಮಾನತು ಮಾಡಲಾಗಿದೆ.

ಜಾಲಹಳ್ಳಿ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಆಗಸ್ಟ್ 11ರಂದು ಠಾಣೆಯ ಆರು ಸಿಬ್ಬಂದಿಯನ್ನು ಗಂಗಮ್ಮನಗುಡಿ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದರು. ಕೋಬ್ರಾ ಡ್ಯೂಟಿಗೆ, ಜಾಲಹಳ್ಳಿ ಜಂಕ್ಷನ್, ಗಂಗಮ್ಮನ ವೃತ್ತ, ಸಾಹಿತ್ಯ ಕೂಟ ಜಂಕ್ಷನ್ ಸೇರಿ ಹಲವೆಡೆ ಸಂಚಾರ ನಿರ್ವಹಣೆಯ ಕರ್ತವ್ಯಕ್ಕೆ ನಿಯೋಜನೆ‌ ಮಾಡಲಾಗಿತ್ತು. ಕೊರೊನಾ ಸಂಬಂಧ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವಂತೆ ಆ ಸಿಬ್ಬಂದಿಗೆ ಸೂಚಿಸಲಾಗಿತ್ತು.

ಆದರೆ ಹಿರಿಯ ಅಧಿಕಾರಿಗಳ ಸಲಹೆಯನ್ನು ಲೆಕ್ಕಿಸದೇ, ಆರು ಮಂದಿ ಸಿಬ್ಬಂದಿ ಸಾಹಿತ್ಯ ಕೂಟ ಬಳಿಯ ಪಾರ್ಕ್‌ನಲ್ಲಿ ಗುಂಪು ಸೇರಿದ್ದರು‌. ಈ ವೇಳೆ ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಯ್ದುಕೊಳ್ಳದ ನಿರ್ಲಕ್ಷ್ಯವಹಿಸಿದ್ದಾರೆ. ಹೀಗಾಗಿ ಆರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

Published On - 10:15 am, Fri, 21 August 20