ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗಣೇಶ ಮಹೋತ್ಸವ ಕಳೆಗುಂದಿದೆ. ಪ್ರತಿ ವರ್ಷ ವಾರಕ್ಕೂ ಮೊದಲೇ ಗಲ್ಲಿಗಲ್ಲಿಗಳಲ್ಲಿ ಗಣಪ ರಾರಾಜಿಸುತ್ತಿದ್ದ. ಆದರೆ ಈ ಬಾರಿ ಆ ಸಂಭ್ರಮ ಕಡಿಮೆಯಾಗಿದೆ. ಈ ವರ್ಷ ದೇವಸ್ಥಾನಗಳಲ್ಲೇ ಭಕ್ತರ ಸಂಖ್ಯೆ ಕ್ಷೀಣಿಸಿದೆ.
ಬಸವನಗುಡಿಯ ದೊಡ್ಡ ಗಣೇಷ ದೇವಸ್ಥಾನದಲ್ಲಿ ತೀರ ವಿರಳವಾದ ಭಕ್ತಾದಿಗಳು ಕಂಡು ಬಂದ್ರು. ಹಬ್ಬವಿದ್ದರು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿಲ್ಲ. ಅಲ್ಲದೆ ಇನ್ನೂ ದೇವಸ್ಥಾನದ ಬಾಗಿಲು ತೆರೆದಿಲ್ಲ. ಗಣೇಶ ಅನುಗ್ರಹಕ್ಕಾಗಿ ದೇವಸ್ಥಾನದ ಬಾಗಿಲಲ್ಲಿ ಕೆಲ ಭಕ್ತರು ಕಾದು ಕುಳಿತಿದ್ದಾರೆ. ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಬಾರಿ ದೊಡ್ಡ ಗಣೇಶ ದೇವಸ್ಥಾನದಲ್ಲಿ ಸರಳ ಪೂಜೆ ಮಾಡಲಾಗುತ್ತೆ.
ಇಂದು ಗೌರಿ ಪೂಜೆ, ನಾಳೆ ಗಣೇಶ ಚತುರ್ಥಿ ಇದ್ದರೂ ಪ್ರತಿ ಬಾರಿಯಂತೆ ಯಾವುದೇ ವಿಶೇಷ ಅಭಿಷೇಕ, ಹೋಮ ಹವನ ಏನೂ ಇರೋದಿಲ್ಲ. ಹಾಲು, ಸಕ್ಕರೆ, ಜೇನು ತುಪ್ಪ ವಿಶೇಷ ಅಭಿಷೇಕಕ್ಕೆ ತಡೆ ಹಿಡಿಯಲಾಗಿದೆ. ಸರಳವಾಗಿ ಪೂಜೆ ಮಾಡಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತೆ. ಕೊರೊನಾದಿಂದಾಗಿ ಗಣೇಶ ಹಬ್ಬಕ್ಕೇ ಪ್ರಥಮ ಪೂಜಿತ ಗಣಪನ ವಿಶೇಷ ಪೂಜೆಯನ್ನು ಮಾಡಲಾಗುತ್ತಿಲ್ಲ. ಹಾಗೂ ಭಕ್ತರ ಸಂಖ್ಯೆ ಕಡಿಮೆಯಾಗಿದೆ.