ಪಾಕಿಸ್ತಾನದಲ್ಲಿ ಕೇವಲ ಶ್ರೀಮಂತರು ಮಾತ್ರ ಚಹಾ ಸೇವಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 15, 2021 | 8:15 PM

ಟೀ ಪೌಡರ್, ಹಾಲಿನ ಪೌಡರ್ ಮತ್ತು ಸಕ್ಕರೆಯನ್ನು ಪಾಕಿಸ್ತಾನ ಮೊದಲೆಲ್ಲ ಭಾರತದಿಂದಲೇ ತರಿಸಿಕೊಳ್ಳುತಿತ್ತು. ಆಮದು ಮಾಡಿಕೊಳ್ಳವುದನ್ನು ನಿಲ್ಲಿಸಿದ ಮೇಲೆ ಬೆಲೆಗಳು ಗಗನಕ್ಕೇರಿವೆ. ಅದರ ಪರಿಣಾಮ ಜನಸಾಮಾನ್ಯರ ಮೇಲೆ ಆಗುತ್ತಿದೆ.

ಪಾಕಿಸ್ತಾನದ ಜನರಿಗೆ ಟೀ ಕುಡಿಯುವುದು ಸಹ ಬಹಳ ಸಮಸ್ಯೆಯಾಗುತ್ತಿದೆ ಮಾರಾಯ್ರೇ. ಒಂದು ಸರಳವಾದ ಅಂಶವನ್ನು ಆರ್ಥಮಾಡಿಕೊಳ್ಳುವುದು ಅಲ್ಲಿನ ಸರ್ಕಾರಗಳಿಗೆ ಅರ್ಥವಾಗುತ್ತಿಲ್ಲ, ಭಾರತದೊಂದಿಗೆ ವೈರತ್ವ ಸಾಧಿಸಿದರೆ ಅದಕ್ಕೆ ಚೀನಾದೊಂದಿಗೆ ಸ್ನೇಹ ಬಿಟ್ಟರೆ ಬೇರೆ ಏನೂ ಲಭ್ಯವಾಗುವುದಿಲ್ಲ. ಚೀನಾದ ಜೊತೆ ಗೆಳೆತನ ಬಹಳ ದುಬಾರಿಯಾಗಲಿದೆ ಅನ್ನೋದು ಸಹ ಪಾಕಿಸ್ತಾನಕ್ಕೆ ಅರ್ಥವಾಗುತ್ತಿಲ್ಲ. ಯಾಕೆಂದರೆ ಚೀನಾ ಒಂದು ಮಹಾನ್ ಸ್ವಾರ್ಥಿ ದೇಶ. ಅದಕ್ಕೆ ತನ್ನ ಕಾರ್ಯ ಸಾಧನೆ ಮುಖ್ಯ. ಶತ್ರುವಿನ ಶತ್ರು ಸ್ನೇಹಿತ ಅನ್ನುವ ಗಾದೆ ನಿಜವಿರಬಹುದು, ಆದರೆ, ಚೀನಾ ಯಾರನ್ನೂ ತನ್ನ ಸ್ನೇಹಿತ ಅಂತ ಪರಿಗಣಿಸುವದಿಲ್ಲ. ಅದನ್ನು ನಂಬಿ ಪಾಕಿಸ್ತಾನವು ಭಾರತದೊಂದಿಗೆ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧಗಳು ಸೇರಿದಂತೆ ಎಲ್ಲ ಬಗೆಯ ಸಂಬಂಧಗಳನ್ನು ಮುರಿದುಕೊಂಡಿದೆ. ಇದರಿಂದ ಭಾರತಕ್ಕೆ ಕಿಂಚಿತ್ತೂ ನಷ್ಟವಿಲ್ಲ. ನಷ್ಟವಿರೋದು ಪಾಕಿಸ್ತಾನಕ್ಕೆ ಮಾತ್ರ.

ಇದನ್ನೆಲ್ಲ ಯಾಕೆ ಹೇಳಬೇಕಾಗಿದೆ ಎಂದರೆ, ಪಾಕಿಸ್ತಾನದಲ್ಲಿ ನೀವು ರಸ್ತೆಬದಿಯ ಟೀ ಸ್ಟಾಲ್ ನಲ್ಲಿ ಚಹಾ ಕುಡಿದರೂ ಕನಿಷ್ಠ 40 ರೂ. ಕಕ್ಕಬೇಕು. ಇಲ್ಲಿ ಟೀ ಮಾರುವ ವ್ಯಾಪಾರಿಗಳನ್ನು ದೂಷಿಸುವಂತಿಲ್ಲ. ಪಾಕಿಸ್ತಾನದಲ್ಲಿ ಒಂದು ಲೀಟರ್ ಹಾಲಿನ ಬೆಲೆ 120-140 ರೂ. ಗಳು. ಸಕ್ಕರೆ, ಅಡುಗೆ ಅನಿಲ, ಟೀ ಪೌಡರ್ ಎಲ್ಲವೂ ದುಬಾರಿ.

ಈ ವಸ್ತುಗಳ ಬೆಲೆ ಕೆಲವೇ ವಾರಗಳಲ್ಲಿ ಶೇಕಡಾ 35 ರಷ್ಟು ಹೆಚ್ಚಾಗಿದೆ. ಒಂದು ತಿಂಗಳ ಹಿಂದೆ ಅಲ್ಲಿ ಒಂದು ಕಪ್ ಟೀ ಬೆಲೆ ರೂ. 30 ಆಗಿತ್ತು. ಅಲ್ಲಿನ ಬಡವರಿಗೆ ಟೀ ಈಗ ಕುಡಿಯುವ ಯೋಚನೆಯೇ ದುಸ್ವಪ್ನವಾಗಿ ಕಾಡುತ್ತಿರಬಹುದು.

ಟೀ ಪೌಡರ್, ಹಾಲಿನ ಪೌಡರ್ ಮತ್ತು ಸಕ್ಕರೆಯನ್ನು ಪಾಕಿಸ್ತಾನ ಮೊದಲೆಲ್ಲ ಭಾರತದಿಂದಲೇ ತರಿಸಿಕೊಳ್ಳುತಿತ್ತು. ಆಮದು ಮಾಡಿಕೊಳ್ಳವುದನ್ನು ನಿಲ್ಲಿಸಿದ ಮೇಲೆ ಬೆಲೆಗಳು ಗಗನಕ್ಕೇರಿವೆ. ಅದರ ಪರಿಣಾಮ ಜನಸಾಮಾನ್ಯರ ಮೇಲೆ ಆಗುತ್ತಿದೆ.

ಪಾಕಿಸ್ತಾನದ ನಾಯಕರಲ್ಲಿ ವಿವೇಕ ಮತ್ತು ವಿವೇಚನೆ ಯಾವತ್ತೂ ಹುಟ್ಟದು. ಆದರೆ ಅವರ ಮೂರ್ಖತನ ಬೇರೆಯವರಿಗೆ ಶಾಪವಾಗುತ್ತಿದೆ.

ಇದನ್ನೂ ಓದಿ:   Viral Video: ಒಂದೇ ಕಾಲಿನಲ್ಲಿ ಸೈಕಲ್ ತುಳಿಯುತ್ತಾ ಸಾಗಿದ ವ್ಯಕ್ತಿ; ಹೃದಯಸ್ಪರ್ಶಿ ವಿಡಿಯೋ ನೋಡಿ ಸೆಲ್ಯೂಟ್ ಎಂದ ನೆಟ್ಟಿಗರು