ಉತ್ತರದ ಪಂತ್ ಮತ್ತು ದಕ್ಷಿಣದ ಸಂಜು ನಡುವೆ ಆರೋಗ್ಯಕರ ಸ್ಪರ್ಧೆ

ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್–ಯಾರು ಉತ್ತಮರು ಈ ಇಬ್ಬರೊಳಗೆ? ಇಂಥದೊಂದು ಚರ್ಚೆ ಅದಾಗಲೇ ಶುರುವಿಟ್ಟುಕೊಂಡಿದೆ. ಕೆಲವರು ಸಂಜು ಪರ ಬ್ಯಾಟ್ ಮಾಡುತ್ತಿದ್ದರೆ ಇನ್ನುಳಿದವರು ಪಂತ್ ಈಸ್ ಬೆಟರ್​ ಅನ್ನುತ್ತಿದ್ದಾರೆ. ಆಫ್​ಕೋರ್ಸ್, ಪಂತ್ ರಾಷ್ಟ್ರೀಯ ಟೀಮನ್ನು ಹೆಚ್ಚು ಪ್ರತಿನಿಧಿಸಿದ್ದಾರೆ ಮತ್ತು ಟೆಸ್ಟ್​ಗಳಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ದ ಆ ದೇಶಗಳ ನೆಲದಲ್ಲಿಯೇ ಶತಕಗಳನ್ನೂ ಬಾರಿಸಿದ್ದಾರೆ. ಇದು ಸಾಮಾನ್ಯ ಸಾಧನೆಯೇನಲ್ಲ. ಯಾಕೆಂದರೆ, ಉಪಖಂಡದ ಪಿಚ್​ಗಳಲ್ಲಿ ಟನ್​ಗಟ್ಟಲೆ ರನ್ ಗಳಿಸುವ ಭಾರತದ ಹಲವಾರು ಬ್ಯಾಟ್ಸ್​ಮನ್​ಗಳು ಓವರಸೀಸ್ ಟೂರ್​ಗಳಲ್ಲಿ ಬಹಳ ಕೆಟ್ಟದಾಗಿ […]

ಉತ್ತರದ ಪಂತ್ ಮತ್ತು ದಕ್ಷಿಣದ ಸಂಜು ನಡುವೆ ಆರೋಗ್ಯಕರ ಸ್ಪರ್ಧೆ

Updated on: Sep 26, 2020 | 8:20 PM

ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್ಯಾರು ಉತ್ತಮರು ಈ ಇಬ್ಬರೊಳಗೆ? ಇಂಥದೊಂದು ಚರ್ಚೆ ಅದಾಗಲೇ ಶುರುವಿಟ್ಟುಕೊಂಡಿದೆ. ಕೆಲವರು ಸಂಜು ಪರ ಬ್ಯಾಟ್ ಮಾಡುತ್ತಿದ್ದರೆ ಇನ್ನುಳಿದವರು ಪಂತ್ ಈಸ್ ಬೆಟರ್​ ಅನ್ನುತ್ತಿದ್ದಾರೆ.

ಆಫ್​ಕೋರ್ಸ್, ಪಂತ್ ರಾಷ್ಟ್ರೀಯ ಟೀಮನ್ನು ಹೆಚ್ಚು ಪ್ರತಿನಿಧಿಸಿದ್ದಾರೆ ಮತ್ತು ಟೆಸ್ಟ್​ಗಳಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ದ ಆ ದೇಶಗಳ ನೆಲದಲ್ಲಿಯೇ ಶತಕಗಳನ್ನೂ ಬಾರಿಸಿದ್ದಾರೆ. ಇದು ಸಾಮಾನ್ಯ ಸಾಧನೆಯೇನಲ್ಲ. ಯಾಕೆಂದರೆ, ಉಪಖಂಡದ ಪಿಚ್​ಗಳಲ್ಲಿ ಟನ್​ಗಟ್ಟಲೆ ರನ್ ಗಳಿಸುವ ಭಾರತದ ಹಲವಾರು ಬ್ಯಾಟ್ಸ್​ಮನ್​ಗಳು ಓವರಸೀಸ್ ಟೂರ್​ಗಳಲ್ಲಿ ಬಹಳ ಕೆಟ್ಟದಾಗಿ ವಿಫಲರಾಗಿದ್ದಾರೆ. ಅಂಥವರ ಒಂಧು ದೊಡ್ಡ ಪಟ್ಟಿಯನ್ನೇ ತಯಾರಿಸಬಹುದು.

ದೆಹಲಿಯವರಾಗಿರುವ 22 ವರ್ಷ ವಯಸ್ಸಿನ ಪಂತ್ ಇದುವರೆಗೆ 13 ಟೆಸ್ಟ್, 16 ಒಂದು ದಿನದ ಅಂತರರಾಷ್ಟ್ರೀಯ, ಮತ್ತು 28 ಟಿ-20 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. 25ರ ಪ್ರಾಯದ ಸಂಜು ಸ್ಯಾಮ್ಸನ್ ಕೇರಳದವರಾಗಿದ್ದು ಇದುವೆರೆಗೆ ಕೇವಲ 4 ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರು ಟೀಮ್ ಇಂಡಿಯಾಗೆ ಆಡುತ್ತಿದ್ದಾಗ ಬೇರೆ ವಿಕೆಟ್​ಕೀಪರ್ಬ್ಯಾಟ್ಸ್​ಮನ್ ತಂಡದಲ್ಲಿ ಪ್ರವೇಶ ಪಡೆಯುವುದು ಸಾಧ್ಯವಿರಲಿಲ್ಲ. ಧೋನಿ ಟೆಸ್ಟ್ ಕ್ರಿಕೆಟ್​ನಿಂದ ಸನ್ಯಾಸ ತೆಗೆದುಕೊಂಡಾಗ ಪಶ್ಚಿಮ ಬಂಗಾಳದ ವೃದ್ಧಿಮಾನ್ ಸಹಾ ಅವಕಾಶ ಗಿಟ್ಟಿಸಿದರು. ಆದರೆ ಅವರಿಗೆ ಪದೇಪದೆ ಗಾಯದ ಸಮಸ್ಯೆಗಳು ಎದುರಾದಾಗ ಪಂತ್​ಗೆ ಅವಕಾಶ ಕಲ್ಪಿಸಲಾಯಿತು.

ರಾಷ್ಟ್ರೀಯ ಆಯ್ಕೆ ಸಮಿತಿ ಈಗ ಸಹಾರನ್ನು ಮರೆತಂತಿದೆ ಅಲ್ಲದೆ ವಯಸ್ಸು (35) ಕೂಡ ಅವರ ಪರವಾಗಿಲ್ಲ. ಹಾಗಾಗೇ, ಸದ್ಯದ ಫೋಕಸ್ ಪಂತ್ ಮತ್ತು ಸಂಜು ಮೇಲಿದೆ. ದಕ್ಷಿಣ ಭಾರತೀಯರ ಆರೋಪವೆಂದರೆ ಸಂಜು ಕೇರಳದವರಾಗಿರುವುದರಿಂದ ಕಡೆಗಾಣಿಸಲಾಗುತ್ತಿದೆ. ಆದರೆ, ಇದೇ ವರ್ಷದ ಆರಂಭದಲ್ಲಿ ಅವರಿಗೆ ನ್ಯೂಜಿಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳಲ್ಲಿ ಆಡಿಸಲಾಗಿತ್ತು, ಎರಡರಲ್ಲೂ ಸಂಜು ವಿಫಲರಾಗಿದ್ದರು. ಇದುವರೆಗೆ ಆಡಿರುವ 4 ಟಿ20 ಪಂದ್ಯಗಳಲ್ಲಿ ಅವರು ಕೇವಲ 35 ರನ್ ಮಾತ್ರ ಕಲೆ ಹಾಕಿದ್ದಾರೆ. 

ಗಮನಿಸಬೇಕಿರುವ ಅಂಶವೆಂದರೆ, ಈಗ ಸಂಜು ಬ್ಯಾಟಿಂಗ್​ನಲ್ಲಿ ಬಹಳ ಸುಧಾರಣೆಯಾಗಿದೆ. ಮೊನ್ನೆ ಅವರು ಶಾರ್ಜಾದಲ್ಲಿ ಚೆನೈ ವಿರುದ್ಧ 32 ಎಸೆತಗಳಲ್ಲಿ 74 ರನ್ ಬಾರಿಸಿದ್ದು ಎಲ್ಲರ ಗಮನ ಸೆಳೆದಿದೆ. ಪಂತ್ ಜೊತೆ ಅವರ ಹೋಲಿಕೆ ಶುರುವಾಗಿದೆ. ಅವರಿಬ್ಬರ ನಡುವಿನ ವ್ಯತ್ಯಾಸ ಬರಿಗಣ್ಣಿಗೂ ಸ್ಪಷ್ಟವಾಗಗಿ ಗೋಚರಿಸುತ್ತಿದೆ. ಪಂತ್ ಎಂಟ್ಹತ್ತು ಕೆಜಿಗಳಷ್ಟು ತೂಕ ಜಾಸ್ತಿ ಮಾಡಿಕೊಂಡಿದ್ದರೆ, ಸಂಜು ಫಿಟ್ ಮತ್ತು ಎಜೈಲ್ ಅನಿಸುತ್ತಿದ್ದಾರೆ. ಪಂತ್ ರನ್ ಗಳಿಸಲು ತಿಣುಕಾಡುತ್ತಿದ್ದರೆ, ಸಂಜು ಲೀಲಾಜಾಲವಾಗಿ ಗಳಿಸುತ್ತಿದ್ದಾರೆ.

ಪಂತ್ ಬಾರಿಸುತ್ತಿರುವ ಅಥವಾ ಪ್ರಯತ್ನಿಸುತ್ತಿರುವ ಹೊಡೆತಗಳು ಸ್ಲಾಗ್ ಅನಿಸುತ್ತಿವೆ ಆದರೆ ಸಂಜು ವೈಜ್ಞಾನಿಕ ಮತ್ತು ಪಕ್ಕಾ ಕ್ರಿಕೆಟಿಂಗ್ ಹೊಡೆತಗಳನ್ನು ಆಡುತ್ತಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಖುದ್ದು ಹಾಗೆ ಕಾಮೆಂಟ್ ಮಾಡಿದ್ದಾರೆ. ಗೌತಮ್ ಗಂಭೀರ್ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಸಹ ಸಂಜು ಬ್ಯಾಟಿಂಗ್​ನಿಂದ ತುಂಬಾನೆ ಇಂಪ್ರೆಸ್ ಆಗಿದ್ದಾರೆ. ವೀಕ್ಷಕ ವಿವರಣೆಕಾರರ ಪ್ಯಾನೆಲ್ ಅವರ ಆಟವನ್ನು ಹಾಡಿ ಹೊಗಳುತ್ತಿದೆ.

ಆಯ್ಕೆ ಸಮಿತಿ ಯಾವಾಗಲೂ ಐಪಿಎಲ್ ಟೂರ್ನಿಯ ಮೇಲೆ ಒಂದು ಕಣ್ಣಿಟ್ಟಿರುತ್ತದೆ. ಈ ಹಿನ್ನಲೆಯಲ್ಲಿ ಸಂಜು ಅವರ ಅದೃಷ್ಟ ಖುಲಾಯಿಸಬಹುದೆ ಎಂಬ ನಿರೀಕ್ಷೆ ಜನರಲ್ಲಿ ಹುಟ್ಟಿಕೊಂಡಿದೆ.