ನೋ ಟೆನ್ಷನ್, ನಾಳೆ ಬಂದ್ ಇದ್ರೂ ಬಹುತೇಕ ಸೇವೆಗಳು ಲಭ್ಯ.. ಏನಿರುತ್ತೆ? ಏನಿರಲ್ಲ
ಬೆಂಗಳೂರು: ಅಯ್ಯೋ ಲಾಕ್‌ಡೌನ್‌ನಿಂದ ಜೀವನ ಅಯೋಮಯವಾಗಿದೆ. ಈಗ ಮತ್ತೆ ಬಂದ್.. ಸೋಮವಾರ ಅಂದ್ರೆ ನಾಳೆ ಏನಾದ್ರೂ ಪ್ಲಾನ್ ಮಾಡಿಕೊಂಡಿದ್ರೆ, ಅದರಲ್ಲಿ ಸ್ವಲ್ಪ ವ್ಯತ್ಯಯ ಆಗಲಿದೆ. ಹಾಗಿದ್ರೆ ನಾಳೆ ಯಾವೆಲ್ಲಾ ಸೇವೆ ಇರುತ್ತೆ, ಏನ್ ಇರಲ್ಲ ಅಂತ ನೋಡೋದಾದ್ರೆ. ಬಂದ್ ಬಂದ್ ಬಂದ್.. ನಾಳೆ ಕರುನಾಡು ಬಂದ್ ಆಗಲಿದೆ. ಸರ್ಕಾರದ ವಿರುದ್ಧ ರೈತರು ರೊಚ್ಚಿಗೆದ್ದು ನಾಳೆ ರಾಜ್ಯ ಬಂದ್ ಮಾಡೋಕೆ ಹೊರಟಿದ್ದಾರೆ. ಇದರ ನಡುವೆ ಕೊರೊನಾದಿಂದ ಕಂಗೆಟ್ಟ ಜನಕ್ಕೆ ನಾಳೆ ಏನು ಇರುತ್ತೆ. ಏನು ಇರಲ್ಲ ಅನ್ನೋ ಟೆಕ್ಷನ್ […]

ಬೆಂಗಳೂರು: ಅಯ್ಯೋ ಲಾಕ್‌ಡೌನ್‌ನಿಂದ ಜೀವನ ಅಯೋಮಯವಾಗಿದೆ. ಈಗ ಮತ್ತೆ ಬಂದ್.. ಸೋಮವಾರ ಅಂದ್ರೆ ನಾಳೆ ಏನಾದ್ರೂ ಪ್ಲಾನ್ ಮಾಡಿಕೊಂಡಿದ್ರೆ, ಅದರಲ್ಲಿ ಸ್ವಲ್ಪ ವ್ಯತ್ಯಯ ಆಗಲಿದೆ. ಹಾಗಿದ್ರೆ ನಾಳೆ ಯಾವೆಲ್ಲಾ ಸೇವೆ ಇರುತ್ತೆ, ಏನ್ ಇರಲ್ಲ ಅಂತ ನೋಡೋದಾದ್ರೆ.
ಬಂದ್ ಬಂದ್ ಬಂದ್.. ನಾಳೆ ಕರುನಾಡು ಬಂದ್ ಆಗಲಿದೆ. ಸರ್ಕಾರದ ವಿರುದ್ಧ ರೈತರು ರೊಚ್ಚಿಗೆದ್ದು ನಾಳೆ ರಾಜ್ಯ ಬಂದ್ ಮಾಡೋಕೆ ಹೊರಟಿದ್ದಾರೆ. ಇದರ ನಡುವೆ ಕೊರೊನಾದಿಂದ ಕಂಗೆಟ್ಟ ಜನಕ್ಕೆ ನಾಳೆ ಏನು ಇರುತ್ತೆ. ಏನು ಇರಲ್ಲ ಅನ್ನೋ ಟೆಕ್ಷನ್ ಶುರುವಾಗಿದೆ. ಬಂದ್ ಆದ್ರೆ, ಹೆಂಗಪ್ಪ ಅನ್ನೋ ಚಿಂತೆ ಜನರನ್ನ ಕಾಡ್ತಿದೆ.
ಸಾರಿಗೆ ಸಂಚಾರ ಸೇರಿ ಲಭ್ಯವಿರುತ್ತೆ ಅಗತ್ಯ ಸೇವೆ! ಶುಕ್ರವಾರ ಹೆದ್ದಾರಿ ತಡೆದು ಆಕ್ರೋಶ ಹೊರ ಹಾಕಿದ ಅನ್ನದಾತರು ನಾಳೆ ಕರ್ನಾಟಕ ಬಂದ್‌ಗೆ ಮುಂದಾಗಿದ್ದಾರೆ. ಈ ಬಂದ್‌ಗೆ ಕೆಲ ಸಂಘಟನೆಗಳು ಕೇವಲ ನೈತಿಕ ಬೆಂಬಲ ನೀಡಲು ಮುಂದಾಗಿವೆ. ಅರ್ಥಾತ್, ಬಂದ್‌ಗೆ ಬೆಂಬಲ ಇರುತ್ತೆ. ಆದ್ರೆ ಬಂದ್ ಮಾಡೋದಿಲ್ಲ. ಹೀಗಾಗಿ ಅಗತ್ಯ ಸೇವೆಗಳಿಗೆ ಯಾವುದೇ ತೊಂದ್ರೆ ಆಗಲ್ಲ. ಅಷ್ಟಕ್ಕೂ ಒಂದ್ವೇಳೆ ಬಂದ್ ಆದ್ರೂ ಏನೆಲ್ಲ ಓಪನ್ ಇರುತ್ತೆ ಅನ್ನೋದನ್ನ ನೋಡೋಣ ಬನ್ನಿ,
ನಾಳೆ ಕರ್ನಾಟಕ ಬಂದ್ ಏನಿರುತ್ತೆ? ಹಾಲು, ಪೇಪರ್, ಹಣ್ಣು, ತರಕಾರಿ ಎಂದಿನಂತೆ ನಾಳೆಯೂ ಇರಲಿದೆ. ಆಸ್ಪತ್ರೆ, ಮೆಡಿಕಲ್ ಸೇವೆಗಳಿಗೆ ಯಾವುದೇ ಅಡಚಣೆಯಾಗಲ್ಲ. ಪೆಟ್ರೋಲ್ ಬಂಕ್ ಮಾಲೀಕರು ನೈತಿಕವಾಗಿ ಬಂದ್‌ಗೆ ಬೆಂಬಲ ನೀಡಿರೋದ್ರಿಂದ ಪೆಟ್ರೋಲ್ ಬಂಕ್ ಓಪನ್ ಇರುತ್ತೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಮೆಟ್ರೋ, ವಿಮಾನ, ರೈಲು ಸಂಚಾರ ಬಂದ್ ಆಗೋದಿಲ್ಲ. ರಾಜ್ಯ ಸರ್ಕಾರಿ ಸಾರಿಗೆ ನೌಕರರ ಸಂಘ ನೈತಿಕ ಬೆಂಬಲವನ್ನಷ್ಟೇ ನೀಡಿದ್ದು, ಎಂದಿನಂತೆ ಬಸ್ ಸಂಚಾರ ಇರಲಿದೆ. . ಹೋಟೆಲ್ ಮಾಲೀಕರು ಸಹ ನೈತಿಕ ಬೆಂಬಲ ನೀಡಿದ್ದು, ಶುಕ್ರವಾರ ಹೋಟೆಲ್ ಸೇವೆ ಇರುತ್ತೆ ಅಂದಿದ್ದಾರೆ. ಮದ್ಯದ ಅಂಗಡಿ ಮಾಲೀಕರು ನೈತಿಕ ಬೆಂಬಲ ನೀಡಿದ್ದು, ಎಲ್ಲಾ ಮದ್ಯದ ಅಂಗಡಿಗಳು ಓಪನ್ ಇರುತ್ತೆ.
ನಾಳೆ ಬಂದ್‌ವೇಳೆ ಏನಿರಲ್ಲ? ನಾಳೆ ಓಲಾ-ಉಬರ್ ಸೇವೆ ಸಿಗೋದು ಬಹುತೇಕ ಅನುಮಾನವಾಗಿದೆ. ಇದೇ ರೀತಿ ಆಟೋ-ಟ್ಯಾಕ್ಸಿಗಳು ಸಹ ರಸ್ತೆಗಿಳಿಯೋದು ಡೌಟ್. ಖಾಸಗಿ ಬಸ್ ಸೇವೆ ನಾಳೆ ಬಂದ್ ಆಗುವ ಸಾಧ್ಯತೆ ಇದೆ.
ಒಟ್ನಲ್ಲಿ ನಾಳೆ ಕರ್ನಾಟಕ ಬಂದ್ ಎಂದು ಹೇಳುತ್ತಿದ್ದರು ಬಹುತೇಕ ಎಲ್ಲಾ ಓಪನ್ ಇರಲಿದೆ. ಮೊದಲೇ ಕೊರೊನಾ ಲಾಕ್‌ಡೌನ್‌ನಿಂದ ವ್ಯಾಪಾರಸ್ಥರು ಕಂಗೆಟ್ಟು ಹೋಗಿದ್ದು, ಮತ್ತೆ ಬಾಗಿಲು ಹಾಕಿದ್ರೆ ಜೀವನ ನಡೆಯಲ್ಲ ಅನ್ನೋದು ಗೊತ್ತಾಗಿದೆ. ಹಾಗಾಗಿ ರೈತರಿಗೆ ನೈತಿಕ ಬೆಂಬಲ ನೀಡಿ, ವ್ಯಾಪಾರ ಮಾಡಲು ನಿರ್ಧಾರಿಸಿದ್ದಾರೆ.