Tokyo Olympics 2020: ಜಪಾನಿನಲ್ಲಿ ಸ್ಕೇಟ್​ಬೋರ್ಡಿಂಗ್ ಕ್ರೀಡೆ ಬಗ್ಗೆ ಮಕ್ಕಳಲ್ಲಿ ಹುಟ್ಟುತ್ತಿರುವ ಆಸಕ್ತಿ ಆಶ್ಚರ್ಯ ಮೂಡಿಸುತ್ತದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 28, 2021 | 1:15 AM

ಸ್ಕೇಟ್​ಬೋರ್ಡಿಂಗ್ ಈ ಬಾರಿಯ ಒಲಂಪಿಕ್ಸ್​ನಲ್ಲಿ ಸೇರ್ಪಡೆಯಾಗಿದೆ ಮತ್ತು 2024ರ ಪ್ಯಾರಿಸ್ ಒಲಂಪಿಕ್ಸ್​ನಲ್ಲೂ ಇದು ಕ್ರೀಡಾಕೂಟದ ಭಾಗವಾಗಲಿದೆ ಅಂತ ಅಂತರರಾಷ್ಟ್ರೀಯ ಒಲಂಪಿಕ್ ಸಮಿತಿ (ಐ ಒ ಸಿ) ಪ್ರಕಟಿಸಿದೆ

Tokyo Olympics 2020: ಜಪಾನಿನಲ್ಲಿ ಸ್ಕೇಟ್​ಬೋರ್ಡಿಂಗ್ ಕ್ರೀಡೆ ಬಗ್ಗೆ ಮಕ್ಕಳಲ್ಲಿ ಹುಟ್ಟುತ್ತಿರುವ ಆಸಕ್ತಿ ಆಶ್ಚರ್ಯ ಮೂಡಿಸುತ್ತದೆ!
Follow us on

ಸ್ಕೇಟ್​ಬೋರ್ಡಿಂಗ್ ಟೊಕಿಯೋ ಒಲಂಪಿಕ್ಸ್​ನಲ್ಲಿ ಪಾದಾರ್ಪಣೆ ಮಾಡಿದೆ. ಈ ಕ್ರೀಡೆ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಸಿಗುವಂತಾಗಲು ಟೊಕಿಯೋ ಒಲಂಪಿಕ್ಸ್​ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಒಂದು ಅಪ್ಯಾಯಮಾನವಾದ ವಿಡಿಯೋವನ್ನು ಪೋಸ್ಟ್ ಮಾಡಿದೆ. ಸದರಿ ವಿಡಿಯೋನಲ್ಲಿ ಒಬ್ಬ ಚಿಕ್ಕ ಹುಡುಗ ಸ್ಕೇಟ್​ಬೋರ್ಡ್​ನಲ್ಲಿ ತನ್ನ ಕೌಶಲ್ಯತೆಯನ್ನು ಮೆರೆದಿದ್ದಾನೆ. ಈಗ ಜಾರಿಯಲ್ಲಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಅತಿಥೇಯ ರಾಷ್ಟ್ರ ಜಪಾನಿನ ಯುಟೊ ಹೊರಿಗೊಮೆ ಪುರುಷರ ಸ್ಟ್ರೀಟ್ ಸ್ಕೇಟ್​ಬೋರ್ಡಿಂಗ್ ಫೈನಲ್​ನಲ್ಲಿ ಚಾಕ್ಯಚಕ್ಯತೆಯನ್ನು ಮೆರೆದು ಸ್ವರ್ಣ ಪದಕ ಗೆದ್ದರೆ ಜಪಾನಿನವರೇ ಆಗಿರುವ ಕೇವಲ 13 ವರ್ಷ ವಯಸ್ಸಿನ ಮೊಮಿಜಿ ನಿಶಿಯಾ ಮಹಿಳೆಯರ ಸ್ಟ್ರೀಟ್​ಸ್ಕೇಟ್​ಬೋರ್ಡಿಂಗ್ ಫೈನಲ್ ಗೆದ್ದು ಎಲ್ಲರನ್ನು ಚಕಿತಗೊಳಿಸಿದರು. ಈ ವಿಡಿಯೋನಲ್ಲಿ ಬಾಲಕನೊಬ್ಬ ಸ್ಕೇಟ್​ಬೋರ್ಡ್​ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದರೂ, ಎದೆಗುಂದದೆ ತನ್ನ ಪ್ರಯತ್ನವನ್ನು ಮುಂದುವರೆಸುತ್ತಾನೆ. ಟ್ವಿಟ್ಟರ್​ನಲ್ಲಿ ಪೋಸ್ಟ್​ ಆಗಿರುವ ವಿಡಿಯೋಗೆ “A future Olympian? Never give up #StrongerTogether” ಅಂತ ಶೀರ್ಷಿಕೆ ನೀಡಲಾಗಿದೆ.

ಈ ಬಾಲಕ ಮುಂದಿನ ಒಲಂಪಿಯನ್ ಅಗಲಿದ್ದಾನೆಯೇ ಅಂತ ಟ್ವೀಟ್​ನಲ್ಲಿ ಪ್ರಶ್ನೆ ಕೇಳಲಾಗಿದೆ. ಅವನ ಸ್ಕಿಲ್ ಮತ್ತು ಸಂಕಲ್ಪ ಗಮನಿಸಿದರೆ, ಖಂಡಿತವಾಗಿಯೂ ಮೊಮಿಜಿ ನಿಶಿಯಾಳ ಹಾಗೆ ಸ್ಕೇಟ್​ಬೋರ್ಡಿಂಗ್ ಬಹಳ ದೊಡ್ಡ ಹೆಸರು ಮಾಡಲಿದ್ದಾನೆ.

ಆಗಲೇ ಹೇಳಿದ ಹಾಗೆ ಸ್ಕೇಟ್​ಬೋರ್ಡಿಂಗ್ ಈ ಬಾರಿಯ ಒಲಂಪಿಕ್ಸ್​ನಲ್ಲಿ ಸೇರ್ಪಡೆಯಾಗಿದೆ ಮತ್ತು 2024ರ ಪ್ಯಾರಿಸ್ ಒಲಂಪಿಕ್ಸ್​ನಲ್ಲೂ ಇದು ಕ್ರೀಡಾಕೂಟದ ಭಾಗವಾಗಲಿದೆ ಅಂತ ಅಂತರರಾಷ್ಟ್ರೀಯ ಒಲಂಪಿಕ್ ಸಮಿತಿ (ಐ ಒ ಸಿ) ಪ್ರಕಟಿಸಿದೆ.

ಅಸಲಿಗೆ ಟೊಕಿಯೋ ಒಲಂಪಿಕ್ಸ್ ಕಳೆದ ವರ್ಷವೇ ನಡೆಯಬೇಕಿತ್ತು. ಆದರೆ ಕೋವಿಡ್-19 ಪಿಡುಗಿನಿಂದಾಗಿ ಕ್ರೀಡಾಕೂಟ ಒಂದು ವರ್ಷ ಮುಂದೂಡಲ್ಪಟ್ಟು ಈಗ ನಡೆಯುತ್ತಿದೆ.

ಟೊಕಿಯೋ ಒಲಂಪಿಕ್ಸ್ ಉದ್ಘಾಟನಾ ಸಮಾರಂಭ ಜುಲೈ 23ರಂದು ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಿತು. ಜಪಾನಿದ ದೊರೆ ನರುಹಿಟೊ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಪಿಡುಗು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಒಲಂಪಿಕ್ಸ್ ನಡೆಸಲೇಬಾರದು ಅಂತ ಹಲವಾರು ಪ್ರತಿಭಟನೆಗಳು ನಡೆದರೂ ಕ್ರೀಡಾಕೂಟವನ್ನು ಯಶಸ್ವೀಯಾಗಿ ನಡೆಸಲಾಗುತ್ತಿದೆ.

ಪದಕಗಳ ಪಟ್ಟಿ ನೋಡುವುದಾದರೆ, 9 ಚಿನ್ನ, 5 ಬೆಳ್ಳಿ ಮತ್ತು 8 ಕಂಚು ಸೇರಿ ಒಟ್ಟು 22 ಪದಕಗಳನ್ನು ಗೆದ್ದಿರುವ ಅಮೆರಿಕ ಅಗ್ರಸ್ಥಾನದಲ್ಲಿದೆ.

ಇದನ್ನೂ ಓದಿ: Tokyo Olympics 2020: ಪದಕ ಗೆಲ್ಲುವ ಭಾರತೀಯ ಕ್ರೀಡಾಪಟುಗಳ ಕೋಚ್​ಗಳಿಗೂ ನಗದು ಬಹಮಾನ ನೀಡುವ ಘೋಷಣೆ ಮಾಡಿದ ಐಒಎ