Tokyo Olympics 2020: ಪದಕ ಗೆಲ್ಲುವ ಭಾರತೀಯ ಕ್ರೀಡಾಪಟುಗಳ ಕೋಚ್ಗಳಿಗೂ ನಗದು ಬಹಮಾನ ನೀಡುವ ಘೋಷಣೆ ಮಾಡಿದ ಐಒಎ
ಒಲಂಪಿಕ್ಸ್ನಲ್ಲಿ ಪದಕಗಳನ್ನು ಗೆಲ್ಲುವ ಮಟ್ಟಕ್ಕೆ ಕ್ರೀಡಾಪಟುವನ್ನು ಕೋಚ್ಗಳು ಹುರಿಗೊಳಿಸುವುದರಿಂದ ಅವರೂ ಸಹ ಬಹಮಾನ ಮತ್ತು ಪ್ರೋತ್ಸಾಹಕ್ಕೆ ಅರ್ಹರಾಗಿರುತ್ತಾರೆ. ಅಥ್ಲೀಟ್ಗಳನ್ನು ತಯಾರು ಮಾಡಲು ಕೋಚ್ಗಳು ಹಗಲು ರಾತ್ರಿ ಶ್ರಮಪಡುತ್ತಾರೆ.
ಭಾರತದ ಕ್ರೀಡಾಪಟುಗಳು ಒಲಂಪಿಕ್ಸ್ನಲ್ಲಿ ಪದಕ ಗೆದ್ದರೆ ಕೇವಲ ಅವರ ಬ್ಯಾಂಕ್ ಬ್ಯಾಲೆನ್ಸ್ ಮಾತ್ರ ಉಬ್ಬುವುದಿಲ್ಲ, ಅವರನ್ನು ಆ ಹಂತಕ್ಕೆ ತಯಾರು ಮಾಡಿದ ತರಬೇತುದಾರರು ಮತ್ತು ಕೋಚ್ಗಳು ಸಹ ನಗದು ಇನಾಮು ಪಡೆಯಲಿದ್ದಾರೆ. ಶನಿವಾರದಂದು ಮಹಿಳೆಯರು ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ದಾಖಲೆ ನಿರ್ಮಿಸಿ ದ ಮೀರಾಬಾಯಿ ಚಾನು ಅವರ ಕೋಚ್ ವಿಜಯ ಶರ್ಮ ಅವರಿಗೆ 10 ಲಕ್ಷ ರೂ. ಗಳ ಬಹುಮಾನ ನೀಡುವ ಘೋಡಣೆಯನ್ನು ಭಾರತೀಯ ಒಲಂಪಿಕ್ ಸಂಸ್ಥೆ (ಐಒಎ) ಮಾಡಿದೆ. ಸಂಸ್ಥೆ ಮಾಡಿರುವ ಘೋಷಣೆ ಪ್ರಕಾರ ಚಿನ್ನದ ಪದಕೆ ಗೆಲ್ಲುವ ಕ್ರೀಡಾಪಟುವಿನ ಕೋಚ್ ರೂ. 12.5 ಲಕ್ಷಗಳನ್ನು ಬಹುಮಾನ ಪಡೆಯಲಿದ್ದಾರೆ ಮತ್ತು ಕಂಚಿನ ಪದಕ ಗೆಲ್ಲುವ ಅಥ್ಲೀಟ್ನ ಕೋಚ್ ರೂ.7.5 ಲಕ್ಷ ನಗದನ್ನು ರಿವಾರ್ಡ್ ಆಗಿ ಪಡೆಯಲಿದ್ದಾರೆ.
ಒಲಂಪಿಕ್ಸ್ನಲ್ಲಿ ಪದಕಗಳನ್ನು ಗೆಲ್ಲುವ ಮಟ್ಟಕ್ಕೆ ಕ್ರೀಡಾಪಟುವನ್ನು ಕೋಚ್ಗಳು ಹುರಿಗೊಳಿಸುವುದರಿಂದ ಅವರೂ ಸಹ ಬಹಮಾನ ಮತ್ತು ಪ್ರೋತ್ಸಾಹಕ್ಕೆ ಅರ್ಹರಾಗಿರುತ್ತಾರೆ. ಅಥ್ಲೀಟ್ಗಳನ್ನು ತಯಾರು ಮಾಡಲು ಕೋಚ್ಗಳು ಹಗಲು ರಾತ್ರಿ ಶ್ರಮಪಡುತ್ತಾರೆ. ಅಥ್ಲೀಟ್ಗಳಂತೆ ಅವರು ಸಹ ತ್ಯಾಗಗಳನ್ನು ಮಾಡಬೇಕಾಗುತ್ತದೆ,’ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.
ಟೊಕಿಯೋ ಒಲಂಪಿಕ್ಸ್ನಲ್ಲಿ ಸ್ವರ್ಣ ಪದಕೆ ಗೆಲ್ಲುವ ಅಥ್ಲೀಟ್ಗೆ ರೂ. 75 ಲಕ್ಷ ನೀಡುವುದಾಗಿ ಐಒಎ ಗುರುವಾರದಂದು ಹೇಳಿತ್ತು. ಅದಲ್ಲದೆ ಚಿನ್ನದ ಪದಕ ಗೆಲ್ಲುವ ಕ್ರೀಡಾಪಟು ಪ್ರತಿನಿಧಿಸುವ ಕ್ರೀಡಾ ಸಂಸ್ಥೆಗಳಿಗೆ (ರಾಷ್ಟ್ರೀಯ ಕ್ರೀಡಾ ಒಕ್ಕೂಟ, ಎನ್ಎಸ್ಎಫ್) ಬೋನಸ್ ರೂಪದಲ್ಲಿ ರೂ. 25 ಲಕ್ಷ ನೀಡುವ ಘೋಷಣೆ ಯನ್ನೂ ಅದು ಮಾಡಿತ್ತು.
ಟೊಕಿಯೋ ಒಲಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆಲ್ಲುವವರಿಗೆ ರೂ. 40 ಲಕ್ಷ ಮತ್ತು ಕಂಚಿನ ಪದಕ ಗೆಲ್ಲುವವರಿಗೆ ರೂ. 25 ಲಕ್ಷ ನೀಡುವ ಘೋಷಣೆಯನ್ನೂ ಐಒಎ ಮಾಡಿದೆ. ಹಾಗೆಯೇ, ಈ ಒಲಂಪಿಕ್ಸ್ನಲ್ಲಿ ಬಾಗವಹಿಸಿರುವ ಪ್ರತಿಯೊಬ್ಬ ಅಥ್ಲೀಟ್ಗೆ ರೂ. 1ಲಕ್ಷ ಮತ್ತು ಪದಕ ಗೆಲ್ಲುವ ಎನ್ಎಸ್ಎಫ್ಗಳಿಗೆ ರೂ. 30 ಲಕ್ಷ ನೀಡುವುದಾಗಿ ಐಒಎ ಹೇಳಿದೆ.
ಇದನ್ನೂ ಓದಿ: ಟೊಕಿಯೊ ಒಲಂಪಿಕ್ಸ್ಗೆ ಅರ್ಹತೆ ಪಡೆದಿರುವ ಭಾರತೀಯರು ಮತ್ತು ಅವರು ಪ್ರತಿನಿಧಿಸಲಿರುವ ಕ್ರೀಡೆಯ ವಿವರ ಇಲ್ಲಿದೆ