Small Savings & Big Dreams: ಅಸ್ಸಾಮಿನ ಒಬ್ಬ ಚಿಕ್ಕ ವ್ಯಾಪಾರಿ 10 ಮತ್ತು 5 ರೂ. ಮುಖಬೆಲೆ ನಾಣ್ಯಗಳನ್ನು ಸಂಗ್ರಹಿಸಿ ದ್ವಿಚಕ್ರ ವಾಹನ ಖರೀದಿಸಿದರು!
ಸ್ಕೂಟಿಯನ್ನು ಕೊಳ್ಳಲು ಸೈದುಲ್ಲಾ ರೂ. 90,000 ಖರ್ಚು ಮಾಡಿದರು. ಸಣ್ಣಪುಟ್ಟ ಉಳಿತಾಯಗಳಿಂದಲೂ ದೊಡ್ಡ ದೊಡ್ಡ ಕನಸುಗಳನ್ನು ಈಡೇರಿಸಿಕೊಳ್ಳಬಹುದು ಅನ್ನೋದನ್ನು ಸೈದುಲ್ಲಾ ಸಾಬೀತು ಮಾಡಿದ್ದಾರೆ.
ಗುವಹಾಟಿ: ಅಸ್ಸಾಂನ ಡರಂಗ್ ಜಿಲ್ಲೆಯಲ್ಲಿರುವ ಸಿಪಾಜರ್ ಎಂಬ ಊರಿನ ನಿವಾಸಿ ಮೊಹಮ್ಮದ್ ಸೈದುಲ್ ಹಕ್ (Mohammad Saidul Haque) ಒಂದು ಚೀಲದ ತುಂಬ ನಾಣ್ಯಗಳನ್ನು (coins) ತುಂಬಿಕೊಂಡು ರಾಜ್ಯದ ರಾಜಧಾನಿ ಗುವಹಾಟಿಯಲ್ಲಿರುವ (Guwahati) ಬೈಕ್ ಶೋರೂಮ್ ಪ್ರವೇಶಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅವರು ಹೊತ್ತು ತಂದ ನಾಣ್ಯಗಳನ್ನು ಶೋರೂಮ್ ಸಿಬ್ಬಂದಿ ಸಾಲಾಗಿ ಜೋಡಿಸಿ ಎಣಿಸಿದ್ದಾರೆ. ಸೈದುಲ್ ಏನು ಹೇಳುತ್ತಾರೆ ಅಂತ ಕೇಳಿಸಿಕೊಳ್ಳಿ.
‘ಒಂದು ಚಿಕ್ಕ ಅಂಗಡಿಯನ್ನು ನಾನು ನಡೆಸುತ್ತೇನೆ ಮತ್ತು ಕಳೆದ 6 ವರ್ಷಗಳಿಂದ 5 ಮತ್ತು 10 ರೂ. ಮುಖಬೆಲೆಯ ನಾಣ್ಯಗಳನ್ನು ನಾನು ಸಂಗ್ರಹಿಸುತ್ತಿದ್ದೆ. ಆ ನಾಣ್ಯಗಳನ್ನು ಹೊತ್ತುಕೊಡು ಇಂದು ಸ್ಕೂಟಿ ಶೋರೂಮಿಗೆ ಬಂದಿದ್ದೇನೆ. ಸ್ಕೂಟಿ ಕೊಳ್ಳವಷ್ಟು ನಾಣ್ಯ ಸಂಗ್ರಹವಾಗಿದ್ದು ಮತ್ತು ಅದನ್ನು ಕೊಳ್ಳಲು ಸಾಧ್ಯವಾಗಿದ್ದು ಬಹಳ ಸಂತೋಷ ತಂದಿದೆ. ಸ್ಕೂಟಿಯನ್ನು ಕೊಂಡಿದ್ದು ನನ್ನಲ್ಲಿ ಹೆಮ್ಮೆ ಮತ್ತು ಅಭಿಮಾನ ಮೂಡಿಸಿದೆ,’ ಎಂದು ಸೈದುಲ್ ಹೇಳುತ್ತಾರೆ.
‘ನಮ್ಮ ಶೋರೂಮಿನ ಒಬ್ಬ ಎಕ್ಸಿಕ್ಯೂಟಿವ್ ನನ್ನಲ್ಲಿಗೆ ಬಂದು ಒಬ್ಬ ವ್ಯಕ್ತಿ 10, 5 ಮತ್ತು 1 ರೂ. ಮುಖಬೆಲೆಯ ನಾಣ್ಯಗಳನ್ನು ತಂದಿದ್ದಾರೆಂದು ಹೇಳಿದಾಗ ನನಗೆ ಬಹಳ ಸಂತೋಷವಾಯಿತು. ಅವರಂಥ ಗ್ರಾಹಕರು ವರ್ಷಕ್ಕೆ ಒಬ್ಬರೋ ಒಬ್ಬರೋ ಬರುತ್ತಾರೆ. ಇಂಥ ಸಂಗತಿಗಳನ್ನು ನಾನು ದಿನಪತ್ರಿಕೆಗಳಲ್ಲಿ ಓದುತ್ತೇನೆ ಇಲ್ಲವೇ ಟಿವಿಯಲ್ಲಿ ನೋಡುತ್ತಿರುತ್ತೇನೆ. ಅಂಥ ಒಬ್ಬ ವ್ಯಕ್ತಿ ನನ್ನ ಶೋರೂಮಿಗೆ ಬಂದಿರುವ ಸುದ್ದಿ ಕೇಳಿ ನನಗೆ ಬಹಳ ಸಂತೋಷವಾಯಿತು. ಅವರು ದ್ವಿಚಕ್ರವಾಹನವೊಂದನ್ನು ಖರೀದಿಸಿದರು. ಅವರು ಆದಷ್ಟು ಬೇಗ ನಾಲ್ಕು ಚಕ್ರದ ವಾಹನ ಕೊಳ್ಳುವಂತಾಗಲಿ ಅಂತ ಹಾರೈಸುತ್ತೇನೆ,’ ಎಂದು ಶೋರೂಮ್ ಮಾಲೀಕ ಹೇಳಿದರು.
ಇದನ್ನೂ ಓದಿ: Sharenting: ಈ ದೇಶದಲ್ಲಿ ಪೋಷಕರು ತಮ್ಮ ಮಕ್ಕಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡೋಹಾಗಿಲ್ಲ!
ಸ್ಕೂಟಿಯನ್ನು ಕೊಳ್ಳಲು ಸೈದುಲ್ಲಾ ರೂ. 90,000 ಖರ್ಚು ಮಾಡಿದರು. ಸಣ್ಣಪುಟ್ಟ ಉಳಿತಾಯಗಳಿಂದಲೂ ದೊಡ್ಡ ದೊಡ್ಡ ಕನಸುಗಳನ್ನು ಈಡೇರಿಸಿಕೊಳ್ಳಬಹುದು ಅನ್ನೋದನ್ನು ಸೈದುಲ್ಲಾ ಸಾಬೀತು ಮಾಡಿದ್ದಾರೆ. ಅವರಿಗೆ ನಮ್ಮದೊಂದು ಸಲಾಂ ಮಾರಾಯ್ರೇ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ