ಕೊರೊನಾ ಎಫೆಕ್ಟ್: ಅರಕಲಗೂಡು ಶಾಸಕ AT ರಾಮಸ್ವಾಮಿ ಏಕಾಂಗಿ ಪ್ರತಿಭಟನೆ

ಹಾಸನ:ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ಹಾಗೂ APMC ತಿದ್ದುಪಡಿ ಕಾಯ್ದೆಗಳನ್ನ ವಿರೋಧಿಸಿ ರಾಜ್ಯದಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ, ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಅವರು ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ. ಕೊರೊನಾ ಹಿನ್ನೆಲೆ ಏಕಾಂಗಿ ಪ್ರತಿಭಟನೆ  ಬಡವರ ವಿರೋಧಿ ಕಾನೂನುಗಳಿಗೆ ಧಿಕ್ಕಾರ ಎಂಬ ನಾಮಫಲಕವನ್ನು ಕೈಯಲ್ಲಿ ಹಿಡಿದು ತಾಲೂಕು ಕಚೇರಿ ಎದುರು ಕುಳಿತಿರುವ ಶಾಸಕ ರಾಮಸ್ವಾಮಿ, ಕೊರೊನಾ ಹಿನ್ನೆಲೆ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. ದೇವರಾಜ ಅರಸು ಜನಪರ ಭೂ […]

ಕೊರೊನಾ ಎಫೆಕ್ಟ್: ಅರಕಲಗೂಡು ಶಾಸಕ AT ರಾಮಸ್ವಾಮಿ ಏಕಾಂಗಿ ಪ್ರತಿಭಟನೆ

Updated on: Sep 28, 2020 | 11:48 AM

ಹಾಸನ:ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ಹಾಗೂ APMC ತಿದ್ದುಪಡಿ ಕಾಯ್ದೆಗಳನ್ನ ವಿರೋಧಿಸಿ ರಾಜ್ಯದಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ, ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಅವರು ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ.

ಕೊರೊನಾ ಹಿನ್ನೆಲೆ ಏಕಾಂಗಿ ಪ್ರತಿಭಟನೆ 
ಬಡವರ ವಿರೋಧಿ ಕಾನೂನುಗಳಿಗೆ ಧಿಕ್ಕಾರ ಎಂಬ ನಾಮಫಲಕವನ್ನು ಕೈಯಲ್ಲಿ ಹಿಡಿದು ತಾಲೂಕು ಕಚೇರಿ ಎದುರು ಕುಳಿತಿರುವ ಶಾಸಕ ರಾಮಸ್ವಾಮಿ, ಕೊರೊನಾ ಹಿನ್ನೆಲೆ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ದೇವರಾಜ ಅರಸು ಜನಪರ ಭೂ ಸುಧಾರಣೆ ಕಾಯ್ದೆ ತಂದಿದ್ದರು. ಆದರೆ ಈ ಸರ್ಕಾರ ಅವರ ಆಶಯ ಬುಡಮೇಲು ಮಾಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಎ.ಟಿ. ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 11:46 am, Mon, 28 September 20