ದಾವಣಗೆರೆ: ಸಂಡೆ ಲಾಕ್‌ಡೌನ್ ಇದ್ದರೂ ಕಾನೂನು ಉಲ್ಲಂಘಿಸಿ ಪ್ರಶ್ನಿಸಿದ ಪೊಲೀಸರಿಗೇನೆ ಯುವತಿಯೊರ್ವಳು ವಾಗ್ವಾದಕ್ಕಿಳಿದದ್ದಲ್ಲದೇ ಧಮ್ಕಿ ಹಾಕಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಲಾಕ್‌ಡೌನ್ ಉಲ್ಲಂಘಿಸಿದ್ದಲ್ಲದೇ ದಾವಣೆಗೆರೆಯ ಗುಂಡಿವೃತ್ತದಲ್ಲಿ ಯುವಕನೊಂದಿಗೆ ಹೆಲ್ಮೆಟ್ ಧರಿಸದೆ ಬೈಕ್‌ನಲ್ಲಿ ಸುತ್ತಡುತ್ತಿದ್ದ ಯುವತಿಯನ್ನ ಪೊಲೀಸರು ಲಾಕ್ ಡೌನ್ ಉಲ್ಲಂಘನೆ ಮತ್ತು ಹೆಲ್ಮೆಟ್ ಕುರಿತು ಪ್ರಶ್ನಿಸಿದ್ದಾರೆ. ಇದರಿಂದ ಕೆಂಡಾಮಂಡಲವಾಗಿರುವ ಆಕೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದದ್ದಲ್ಲದೇ ಅವರಿಗೇ ಧಮ್ಕಿ ಹಾಕಿದ್ದಾಳೆ. ಡ್ಯೂಟಿ ಮೇಲಿದ್ದ ಪಿಎಸ್ಐ ಯುವತಿ ಮತ್ತು ಆಕೆಯ ಜೊತೆಗಿದ್ದ ಯುವಕನಿಗೆ ಹೆಲ್ಮೆಟ್ ಇಲ್ಲದ್ದು ಮತ್ತು ಲಾಕ್‌ಡೌನ್ ಉಲ್ಲಂಘನೆ ಮಾಡಿದ್ದಕ್ಕೆ ದಂಡ ಕಟ್ಟಿ ಎಂದು ಪೈನ್ ಹಾಕಿದ್ದಾರೆ.
ಆದ್ರೆ ಇದಕ್ಕೆ ಯುವತಿ ಮತ್ತು ಯುವಕ ಮಾತ್ರ ಪೊಲೀಸರಿಗೇ ಕ್ಯಾರೆ ಎನ್ನದೇ ತಾವು ಮಾತ್ರ ದಂಡ ಕಟ್ಟೋಲ್ಲ ಎಂದು ಬಡಾವಣೆ ಠಾಣೆ ಕ್ರೈಂ ವಿಭಾಗದ ಪಿಎಸ್ ಐ ಚಿದಾನಂದ ಹಾಗೂ ಇತರ ಡ್ಟೂಟಿ ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾರೆ.
Published On - 2:38 pm, Sun, 26 July 20