
ಕೆಎಎಸ್ ಅಧಿಕಾರಿ ಡಾ. ಸುಧಾ ಮನೆ ಮೇಲೆ ಎಸಿಬಿ ದಾಳಿ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯದ ಹಲವೆಡೆ ಡಾ.ಸುಧಾ ಅವರ ಆಸ್ತಿಯ ಮೇಲೆ ದಾಳಿ ಮಾಡಿರುವ ಎಸಿಬಿ ಅಧಿಕಾರಿಗಳಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ.
ಹೊದಲೆಲ್ಲಾ ಅಕ್ರಮ ಆಸ್ತಿ ಮಾಡೋದೆ ಕಾಯಕ, ಗಂಡನ ಹೆಸರಿನಲ್ಲಿ ಹತ್ತಾರು ಉದ್ಯಮ:
ಡಾ.ಸುಧಾ ಹೊದಲೆಲ್ಲಾ ಅಕ್ರಮವಾಗಿ ಆಸ್ತಿ ಮಾಡಿರುವುದು ಬೆಳಕಿಗೆ ಬರುತ್ತಿದ್ದು, ಈ ಮೊದಲು ಡಾ.ಸುಧಾ ಉಡುಪಿಯಲ್ಲೂ ಕೆಲಕಾಲ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಆ ವೇಳೆ ಡಾ.ಸುಧಾ ಹಲವಾರು ಕಡೆ ಹಣ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಜೊತೆಗೆ ಗಂಡನ ಹೆಸರಿನಲ್ಲಿ ಹತ್ತಾರು ಉದ್ಯಮ ಹೊಂದಿರುವುದು ಬಹಿರಂಗವಾಗಿದೆ.
ಬೆಂಗಳೂರಿನ ಎಸಿಬಿ ಅಧಿಕಾರಿ ಬಾಲಕೃಷ್ಣ ನೇತೃತ್ವದಲ್ಲಿ ಉಡುಪಿಯಲ್ಲಿ ದಾಳಿ ನಡೆಸಲಾಗಿದ್ದು, ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನಲ್ಲಿರುವ ಚಾಂತಾರಿನ ದೇವದಾಸ್ ಶೆಟ್ಟಿ ಎಂಬವರ ಮನೆಯಲ್ಲಿ ತಪಾಸಣೆ ನಡೆಸಲಾಗುತ್ತಿದೆ. ದೇವದಾಸ್ ಶೆಟ್ಟಿ ಡಾ. ಸುಧಾ ಪತಿಯ ಗೆಳೆಯ ಎಂಬುದು ತಿಳಿದುಬಂದಿದೆ. ಈ ತನಿಖೆಗೆ ಉಡುಪಿ ಎಸಿಬಿ ಅಧಿಕಾರಿ ಸತೀಶ್, ಚಂದ್ರಕಲಾ ಸಾಥ್ ನೀಡಿದ್ದಾರೆ.
Published On - 1:54 pm, Sat, 7 November 20