ಮನೆ ಬಳಿ ನಿಂತಿದ್ದವನಿಗೆ ಲಾಂಗ್ ತೋರಿಸಿ.. ಖಾಲಿ ಪರ್ಸ್ ದರೋಡೆ ಮಾಡಿದರು!
ನೆಲಮಂಗಲ: ಮನೆ ಬಳಿ ನಿಂತಿದ್ದವನಿಗೆ ಲಾಂಗ್ ತೋರಿಸಿ ದುಷ್ಕರ್ಮಿಗಳು ಮೊಬೈಲ್ ದರೋಡೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಟೌನ್ ಪ್ರದೇಶದ ಬಿನ್ನಮಂಗಲದಲ್ಲಿ ನಡೆದಿದೆ. ಕುಮಾರ್ ಎಂಬುವವರ ಮೊಬೈಲ್ ದರೋಡೆ ಮಾಡಲಾಗಿದೆ. ದರೋಡೆಕೋರರು ಕುಮಾರ್ ಬಳಿಯಿದ್ದ 15 ಸಾವಿರ ಬೆಲೆಬಾಳುವ ಮೊಬೈಲ್ ಕದ್ದಿದ್ದಾರೆ. ಜೊತೆಗೆ, ಕಳ್ಳತನ ಮಾಡುವ ಅವಸರದಲ್ಲಿ ಕುಮಾರ್ರ ಖಾಲಿ ಪರ್ಸ್ ಕೂಡ ಕಸಿದು ಪರಾರಿಯಾಗಿದ್ದಾರೆ. ನೆಲಮಂಗಲ ನಗರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲ: ಮನೆ ಬಳಿ ನಿಂತಿದ್ದವನಿಗೆ ಲಾಂಗ್ ತೋರಿಸಿ ದುಷ್ಕರ್ಮಿಗಳು ಮೊಬೈಲ್ ದರೋಡೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಟೌನ್ ಪ್ರದೇಶದ ಬಿನ್ನಮಂಗಲದಲ್ಲಿ ನಡೆದಿದೆ. ಕುಮಾರ್ ಎಂಬುವವರ ಮೊಬೈಲ್ ದರೋಡೆ ಮಾಡಲಾಗಿದೆ.
ದರೋಡೆಕೋರರು ಕುಮಾರ್ ಬಳಿಯಿದ್ದ 15 ಸಾವಿರ ಬೆಲೆಬಾಳುವ ಮೊಬೈಲ್ ಕದ್ದಿದ್ದಾರೆ. ಜೊತೆಗೆ, ಕಳ್ಳತನ ಮಾಡುವ ಅವಸರದಲ್ಲಿ ಕುಮಾರ್ರ ಖಾಲಿ ಪರ್ಸ್ ಕೂಡ ಕಸಿದು ಪರಾರಿಯಾಗಿದ್ದಾರೆ. ನೆಲಮಂಗಲ ನಗರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.