ಚಿತ್ರದುರ್ಗದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿ ಮರೀಚಿಕೆ.. ಪ್ರಾಣಿಗಳು ಸಂಕಷ್ಟದಲ್ಲಿ..

ಚಿತ್ರದುರ್ಗದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿ ಮರೀಚಿಕೆ.. ಪ್ರಾಣಿಗಳು ಸಂಕಷ್ಟದಲ್ಲಿ..

ಕೋಟೆನಾಡು ಚಿತ್ರದುರ್ಗದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ ಬಯಲಯಸೀಮೆಯ ಏಕೈಕ ಪ್ರಾಣಿ ಸಂಗ್ರಹಾಲಯ. ಆದ್ರೆ, ಸರ್ಕಾರದ ನಿರ್ಲಕ್ಷದಿಂದಾಗಿ ಪ್ರಾಣಿ ಸಂಗ್ರಹಾಲಯದ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ. ಹಾಗೇ ಪ್ರಾಣಿಗಳು ಸಹ ಸಂಕಟಕ್ಕೆ ಸಿಲುಕುವ ದುಸ್ಥಿತಿ ಎದುರಾಗಿದೆ. ಚಿತ್ರದುರ್ಗ ನಗರದ ಬಳಿಯ ಜೋಗಿಮಟ್ಟಿ ತಪ್ಪಲಲ್ಲಿರುವ ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯವು ಸಾಕಷ್ಟು ವರ್ಷಗಳ ಹಿಂದೆಯೇ ನಿರ್ಮಾಣ ಆಗಿದ್ದು, ಈ ಭಾಗದ ಜನರಿಗೆ ಕಾಡುಪ್ರಾಣಿಗಳನ್ನು ನೋಡುವ ಭಾಗ್ಯ ಕರುಣಿಸಿದೆ. ಈ ಪ್ರಾಣಿ ಸಂಗ್ರಹಾಲಯ ವಿಸ್ತೀರ್ಣಗೊಳಿಸಿ ಅಭಿವೃದ್ಧಿಗೊಳಿಸುವ ಯೋಜನೆಗೆ ಮೂರು ವರ್ಷಗಳ ಹಿಂದೆಯೇ ಚಾಲನೆ […]

Ayesha Banu

|

Nov 17, 2020 | 7:41 AM

ಕೋಟೆನಾಡು ಚಿತ್ರದುರ್ಗದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ ಬಯಲಯಸೀಮೆಯ ಏಕೈಕ ಪ್ರಾಣಿ ಸಂಗ್ರಹಾಲಯ. ಆದ್ರೆ, ಸರ್ಕಾರದ ನಿರ್ಲಕ್ಷದಿಂದಾಗಿ ಪ್ರಾಣಿ ಸಂಗ್ರಹಾಲಯದ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ. ಹಾಗೇ ಪ್ರಾಣಿಗಳು ಸಹ ಸಂಕಟಕ್ಕೆ ಸಿಲುಕುವ ದುಸ್ಥಿತಿ ಎದುರಾಗಿದೆ.

ಚಿತ್ರದುರ್ಗ ನಗರದ ಬಳಿಯ ಜೋಗಿಮಟ್ಟಿ ತಪ್ಪಲಲ್ಲಿರುವ ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯವು ಸಾಕಷ್ಟು ವರ್ಷಗಳ ಹಿಂದೆಯೇ ನಿರ್ಮಾಣ ಆಗಿದ್ದು, ಈ ಭಾಗದ ಜನರಿಗೆ ಕಾಡುಪ್ರಾಣಿಗಳನ್ನು ನೋಡುವ ಭಾಗ್ಯ ಕರುಣಿಸಿದೆ. ಈ ಪ್ರಾಣಿ ಸಂಗ್ರಹಾಲಯ ವಿಸ್ತೀರ್ಣಗೊಳಿಸಿ ಅಭಿವೃದ್ಧಿಗೊಳಿಸುವ ಯೋಜನೆಗೆ ಮೂರು ವರ್ಷಗಳ ಹಿಂದೆಯೇ ಚಾಲನೆ ಸಿಕ್ಕಿದೆ. ಆದ್ರೆ, ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ. ನಿನ್ನೆ ಪ್ರಾಣಿ ಸಂಗ್ರಹಾಲಯವನ್ನ ವೀಕ್ಷಿಸಿದ ಬಸವಮೂರ್ತಿ ಮಾದಾರ ಚನ್ನಯ್ಯಶ್ರೀಗಳು ಪ್ರಾಣಿ ಸಂಗ್ರಹಾಲಯದತ್ತ ಹೆಚ್ಚಿನ ಗಮನಹರಿಸಿ ಅಭಿವೃದ್ಧಿ ಪಡಿಸಬೇಕುಂದು ಒತ್ತಾಯಿಸಿದರು.

ಇನ್ನು ಈಗಾಗಲೇ 60 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ ಎಂಟೂವರೆ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚಿಸಲಾಗಿದೆ. ಕರಡಿ, ಚಿರತೆಗೆ ದೊಡ್ಡ ಮನೆಗಳನ್ನು ನಿರ್ಮಿಸಲಾಗಿದೆ. ಆದ್ರೆ, ಇನ್ನುಳಿದ ಅಭಿವೃದ್ಧಿಗೆ ಐದು ಕೋಟಿಯಷ್ಟು ಹಣ ಬಿಡುಗಡೆ ಆಗಬೇಕಿದೆ. ಅನುದಾನ ಬಿಡುಗಡೆ ಆದ ಬಳಿಕ ಆಡುಮಲ್ಲೇಶ್ವರ ಝೂ ಮತ್ತಷ್ಟು ಅಭಿವೃದ್ಧಿ ಕಾಣಲಿದೆ.

ಒಟ್ಟಾರೆಯಾಗಿ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯದತ್ತ ಸರ್ಕಾರ ಗಮನಹರಿಸಿ ಶೀಘ್ರ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕಿದೆ. ಆ ಮೂಲಕ ಬಯಲು ಸೀಮೆಯ ಏಕೈಕ ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಿದೆ.

Follow us on

Related Stories

Most Read Stories

Click on your DTH Provider to Add TV9 Kannada