ತಲೆಮರೆಸಿಕೊಂಡು ಓಡಾಡ್ತಿದ್ದ ಸಂಪತ್​ ರಾಜ್ ಕೊನೆಗೂ ಬಂಧನ..

ತಲೆಮರೆಸಿಕೊಂಡು ಓಡಾಡ್ತಿದ್ದ ಸಂಪತ್​ ರಾಜ್ ಕೊನೆಗೂ ಬಂಧನ..

ಬೆಂಗಳೂರು: ಬೆಂಗಳೂರಿನ ಕೆ.ಜೆ.ಹಳ್ಳಿ-ಡಿ.ಜೆ.ಹಳ್ಳಿ ಗಲಭೆ ಪ್ರಕರಣ, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸಂಪತ್​ ರಾಜ್ ಕೊನೆಗೂ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಪ್ರಕರಣದಲ್ಲಿ ಚಾರ್ಜ್​ಶೀಟ್ ದಾಖಲಾದ ದಿನದಿಂದ ತಪ್ಪಿಸಿಕೊಂಡು ಹೋಗ್ತಿದ್ದ ಮಾಜಿ ಮೇಯರ್ ಕೊನೆಗೂ ಸಿಕ್ಕಿ ಬಿದ್ದಿದ್ದು, ಸಿಸಿಬಿ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಬೆಂಗಳೂರಲ್ಲಿ ‘ಕೊಳ್ಳಿ’ದೆವ್ವಗಳ ನರ್ತನ..! ಹೌದು.. ಆಗಸ್ಟ್ 11ರ ಸಂಜೆ ಸುಮಾರು ಐದೂವರೆ ಆರು ಗಂಟೆ ಇರಬಹುದು. ಅಂದು ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿಯಲ್ಲಿ ವಿವಾದಾತ್ಮಕ ಪೋಸ್ಟ್ ಒಂದು ಭಾರಿ ಹಲ್​ಚಲ್ […]

Ayesha Banu

|

Nov 17, 2020 | 6:42 AM

ಬೆಂಗಳೂರು: ಬೆಂಗಳೂರಿನ ಕೆ.ಜೆ.ಹಳ್ಳಿ-ಡಿ.ಜೆ.ಹಳ್ಳಿ ಗಲಭೆ ಪ್ರಕರಣ, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸಂಪತ್​ ರಾಜ್ ಕೊನೆಗೂ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಪ್ರಕರಣದಲ್ಲಿ ಚಾರ್ಜ್​ಶೀಟ್ ದಾಖಲಾದ ದಿನದಿಂದ ತಪ್ಪಿಸಿಕೊಂಡು ಹೋಗ್ತಿದ್ದ ಮಾಜಿ ಮೇಯರ್ ಕೊನೆಗೂ ಸಿಕ್ಕಿ ಬಿದ್ದಿದ್ದು, ಸಿಸಿಬಿ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

ಬೆಂಗಳೂರಲ್ಲಿ ‘ಕೊಳ್ಳಿ’ದೆವ್ವಗಳ ನರ್ತನ..! ಹೌದು.. ಆಗಸ್ಟ್ 11ರ ಸಂಜೆ ಸುಮಾರು ಐದೂವರೆ ಆರು ಗಂಟೆ ಇರಬಹುದು. ಅಂದು ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿಯಲ್ಲಿ ವಿವಾದಾತ್ಮಕ ಪೋಸ್ಟ್ ಒಂದು ಭಾರಿ ಹಲ್​ಚಲ್ ಸೃಷ್ಟಿಸಿತ್ತು. ಅದ್ಯಾವ ಪರಿ ಇದು ಬೆಂಗಳೂರಿಗೆ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು ಅಂದ್ರೆ, ಒಂದು ಕ್ಷಣ ಬೆಂಗಳೂರಿಗರೇ ತಮ್ಮ ಕಣ್ಣನ್ನ ನಂಬದಾಗಿದ್ರು. ಯಾಕಂದ್ರೆ, ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗಳನ್ನ ಧ್ವಂಸ ಮಾಡುವಷ್ಟರ ಮಟ್ಟಿಗೆ.. ಪುಲಿಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಯನ್ನೇ ಧಗಧಗಿಸುವಂತೆ ಮಾಡುವಷ್ಟರ ಮಟ್ಟಿಗೆ ಕೊಳ್ಳಿ ದೆವ್ವಗಳು ರುದ್ರ ನರ್ತನ ಮಾಡಿದ್ವು.

ಅಂದು ಹಚ್ಚಿದ ಬೆಂಕಿಗೆ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆ ಧಗಧಗನೆ ಉರಿದು ಬೂದಿಯಾಗಿತ್ತು. ಈ ಪ್ರಕರಣವನ್ನ ಚಾಲೆಂಜ್​ ಆಗಿ ತೆಗೆದುಕೊಂಡ ಬೆಂಗಳೂರು ಪೊಲೀಸರು ಸಾಲು ಸಾಲು ಆರೋಪಿಗಳನ್ನ ಬಂಧಿಸಿ ಜೈಲುಗಟ್ಟಿದ್ರು. ಆದ್ರೆ, ಈ ಪ್ರಕರಣದ ಮಾಸ್ಟರ್ ಮೈಂಡ್​ಗಳು ಅಂತಲೇ ಕರೆಯಲಾಗ್ತಿದ್ದ ಮಾಜಿ ಮೇಯರ್ ಸಂಪತ್ ರಾಜ್, ಬಿಬಿಎಂಪಿ ಮಾಜಿ ಸದಸ್ಯ ಜಾಕೀರ್ ಮಾತ್ರ ಪೊಲೀಸರ ಕೈಗೆ ಸಿಕ್ಕದೇ ತಪ್ಪಿಸಿಕೊಂಡು ಓಡಾಡ್ತಿದ್ರು. ಇಂತೋರ ಹೆಡೆಮುರಿ ಕಟ್ಟುವಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊನೆಗೂ ಮಾಜಿ ಮೇಯರ್ ಸಂಪತ್​ ರಾಜ್​ ಕೈಗೆ ಬಿತ್ತು ಕೋಳ! ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿ ಗಲಭೆ ಮತ್ತು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಧ್ವಂಸ ಕೇಸ್​ನಲ್ಲಿ ಪ್ರಮುಖ ಅರೋಪಿ ಈ ಸಂಪತ್ ರಾಜ್. ಹೇಳಿ ಕೇಳಿ ಬೆಂಗಳೂರಿನ ಮಾಜಿ ಮೇಯರ್. ಹೀಗಾಗಿ ಈ ಕೇಸ್​ನಲ್ಲಿ ನಾರ್ಮಲ್ ಆಗಿ ಅರೆಸ್ಟ್ ಮಾಡುವಂತೆ ಆರೋಪಿಯನ್ನ ಪೊಲೀಸರು ಅರೆಸ್ಟ್ ಮಾಡಲು ಹಲವು ಅಡೆತಡೆಗಳಿದ್ವು. ಇದನ್ನೇ ತಮ್ಮ ಬಂಡವಾಳ ಮಾಡಿಕೊಂಡ ಸಂಪತ್ ರಾಜ್ ಬೆಂಗಳೂರು ಸಿಸಿಬಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ಓಡಾಡಿಕೊಂಡಿದ್ರು. ಕೊರೊನಾ ನೆಪ ಹೇಳಿ ಒಂದೂವರೆ ತಿಂಗಳು ಆಸ್ಪತ್ರೆಯಲ್ಲಿದ್ದ ಸಂಪತ್ ರಾಜ್, 22 ದಿನಗಳ ಹಿಂದೆ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ರು. ಅಲ್ಲಿಂದ ನಿನ್ನೆಯವರೆಗೆ ಎಲ್ಲಿದ್ದಾರೆ ಅನ್ನೋದೇ ಗೊತ್ತಾಗದೇ ಪೊಲೀಸರು ಭಾರಿ ತಲೆ ಕೆಡಿಸಿಕೊಂಡಿದ್ರು. ಆದ್ರೆ, ನಿನ್ನೆ ಸಿಸಿಬಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿತ್ತು. ಇದಾದ ಬಳಿಕ ಪ್ರಮುಖ ಆರೋಪಿ ಸಂಪತ್ ರಾಜ್ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಸಂಪತ್ ರಾಜ್ ಆಪ್ತನಿಗೆ ಗ್ರಿಲ್​.. ಕೊನೆಗೆ ಸಿಕ್ಕಿತ್ತು ನಿಖರ ಮಾಹಿತಿ..! ಸಂಪತ್ ರಾಜ್ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡಲು ಸಹಾಯ ಮಾಡ್ತಿದ್ದ ಅವರ ಆಪ್ತ ರಿಯಾಜುದ್ದೀನ್ ಮೇಲೆ, ಸಿಸಿಬಿ ಹದ್ದಿನಗಣ್ಣಿಟ್ಟಿತ್ತು. ಇದೇ ಕಾರಣಕ್ಕೆ ನಿನ್ನೆ ಮಧ್ಯಾಹ್ನ ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ರಿಯಾಜುದ್ದೀನ್​ಗೆ ಫುಲ್ ಡ್ರಿಲ್ ಮಾಡಿದ್ರು. ಇದಾದ ಕೆಲವೇ ಗಂಟೆಗಳಲ್ಲಿ ಸಂಪತ್ ರಾಜ್ ಬಂಧಿಸಲಾಗಿದೆ. ಇದ್ರಿಂದ, ರಿಯಾಜುದ್ದೀನ್ ನೀಡಿದ್ದ ಸುಳಿವಿನ ಮೇರೆಗೆ ಸಂಪತ್ ರಾಜ್ ಬಂಧನವಾಯ್ತಾ ಅನ್ನೋ ಪ್ರಶ್ನೆ ಈಗ ಕಾಡತೊಡಗಿದೆ.

ಸಂಪತ್ ರಾಜ್ ಹೈಡ್ರಾಮಾ! ಯಾವಾಗ ಗಲಭೆ ಪ್ರಕರಣದಲ್ಲಿ ಪೊಲೀಸರಿಗೆ ಸಂಪತ್ ರಾಜ್ ಸಿಕ್ಕಿ ಬೀಳ್ತಾರೆ ಅಂತಾ ಗೊತ್ತಾಯ್ತೋ, ಅಂದ್ರೆ ಸೆಪ್ಟೆಂಬರ್ 14ರಂದು ಕೊರೊನಾ ನೆಪವೊಡ್ಡಿ ಸಂಪತ್​ ರಾಜ್ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾದ್ರು. ಬಳಿಕ ಅಕ್ಟೋಬರ್ 3 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ರು. ಆದ್ರೆ, ಮರುದಿನವೇ ಅಂದ್ರೆ ಅಕ್ಟೋಬರ್ 4ರಂದು ಮತ್ತೆ ಕೊರೊನಾ ನೆಪವೊಡ್ಡಿ ಎರಡನೇ ಬಾರಿ ಆಸ್ಪತ್ರೆಗೆ ದಾಖಲಾಗಿದ್ರು. ಅಕ್ಟೋಬರ್ 14ರಂದು ಎರಡನೇ ಬಾರಿ ಡಿಸ್ಚಾರ್ಜ್ ಆದ ಸಂಪತ್ ರಾಜ್, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ರು. ಆದ್ರೆ, ಹೈಕೋರ್ಟ್ ಅಕ್ಟೋಬರ್ 16ರಂದು ಜಾಮೀನು ಅರ್ಜಿ ತಿರಸ್ಕರಿಸಿತ್ತು. ಜಾಮೀನು ಅರ್ಜಿ ತಿರಸ್ಕೃತವಾದ ತಕ್ಷಣ ಸಂಪತ್ ರಾಜ್ ಮತ್ತೆ ಆಸ್ಪತ್ರೆ ಪಾಲಾಗಿದ್ರು. ಸಂಪತ್ ರಾಜ್ ಡಿಸ್ಚಾರ್ಜ್ ಆಗುವ ವೇಳೆ ತಮಗೆ ಮಾಹಿತಿ ನೀಡುವಂತೆ ಸಿಸಿಬಿ ಪೊಲೀಸರು ಅಕ್ಟೋಬರ್ 17ರಂದು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ನೋಟಿಸ್ ನೀಡಿದ್ರು. ಇಷ್ಟಾದ್ರೂ, ಸಿಸಿಬಿ ಪೊಲೀಸರ ಕಣ್ಣು ತಪ್ಪಿಸಿ ಅಕ್ಟೋಬರ್ 23ರಂದು ಸಂಪತ್ ರಾಜ್ ಎಸ್ಕೇಪ್ ಆಗಿದ್ರು.

ಯಾವಾಗ ಸಂಪತ್ ರಾಜ್ ಎಸ್ಕೇಪ್ ಆದ್ರೋ, ಪೊಲೀಸರಿಗೆ ಭಾರಿ ಟೆನ್ಷನ್ ಶುರುವಾಗಿತ್ತು. ಇದ್ರ ನಡುವೆ ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಈ ವಿಷಯ ಪ್ರಸ್ತಾಪವಾಗಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಇಷ್ಟಾದ್ರೂ ಸಂಪತ್ ರಾಜ್​ರನ್ನ ಹಿಡಿಯಲು ಆಗದೆ, ಕಾಂಗ್ರೆಸ್ ವಿರುದ್ಧ ಗೂಬೆ ಕೂರಿಸೋದ್ಯಾಕೆ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ರು. ಈ ಪ್ರಕರಣ ರಾಜ್ಯ ಸರ್ಕಾರಕ್ಕೂ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿತ್ತು.

ಸಿಸಿಬಿ ಮೂಲಗಳ ಪ್ರಕಾರ, ಸಂಪತ್ ರಾಜ್ ತಲೆ ಮರೆಸಿಕೊಂಡು ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಹಲವು ಭಾಗದಲ್ಲಿ ಓಡಾಡಿದ್ರಂತೆ. ಒಂದೇ ಕಡೆ ಎರಡು ದಿನಕ್ಕಿಂತ ಹೆಚ್ಚು ಕಾಲ ಇರುತ್ತಿರಲಿಲ್ಲವಂತೆ. ಇದೇ ಕಾರಣಕ್ಕೆ ಸಿಸಿಬಿ ಅಧಿಕಾರಿಗಳಿಗೆ ಸಂಪತ್ ಬಂಧನ ಸಾಧ್ಯವಾಗಿರಲಿಲ್ಲವಂತೆ. ನಿನ್ನೆ ಬೆಂಗಳೂರಿನ ಬೆನ್ಸನ್ ಟೌನ್ ಬಳಿಯ ತನ್ನ ಸ್ನೇಹಿತನ ನಿವಾಸಕ್ಕೆ ಬಂದಿದ್ದ ವೇಳೆ ಸಿಸಿಬಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಇದೇ ಕೊನೆಯ ಅವಕಾಶ.. ಈ ಬಾರಿ ಮಿಸ್ ಆದ್ರೆ ಮತ್ತೆ ಇಂತಾ ಅವಕಾಶ ಸಿಗಲ್ಲ ಅಂತಾ ಏಕಾಏಕಿ ದಾಳಿ ಮಾಡಿ ಸಂಪತ್ ರಾಜ್​ರನ್ನ ಬಂಧಿಸಿದ್ದಾರೆ. ಸದ್ಯಕ್ಕೆ ಸಿಸಿಬಿ ವಶದಲ್ಲಿರುವ ಸಂಪತ್ ರಾಜ್​ರನ್ನ ಇಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada