ಕೋಟೆನಾಡು ಚಿತ್ರದುರ್ಗದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ ಬಯಲಯಸೀಮೆಯ ಏಕೈಕ ಪ್ರಾಣಿ ಸಂಗ್ರಹಾಲಯ. ಆದ್ರೆ, ಸರ್ಕಾರದ ನಿರ್ಲಕ್ಷದಿಂದಾಗಿ ಪ್ರಾಣಿ ಸಂಗ್ರಹಾಲಯದ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ. ಹಾಗೇ ಪ್ರಾಣಿಗಳು ಸಹ ಸಂಕಟಕ್ಕೆ ಸಿಲುಕುವ ದುಸ್ಥಿತಿ ಎದುರಾಗಿದೆ.
ಇನ್ನು ಈಗಾಗಲೇ 60 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ ಎಂಟೂವರೆ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚಿಸಲಾಗಿದೆ. ಕರಡಿ, ಚಿರತೆಗೆ ದೊಡ್ಡ ಮನೆಗಳನ್ನು ನಿರ್ಮಿಸಲಾಗಿದೆ. ಆದ್ರೆ, ಇನ್ನುಳಿದ ಅಭಿವೃದ್ಧಿಗೆ ಐದು ಕೋಟಿಯಷ್ಟು ಹಣ ಬಿಡುಗಡೆ ಆಗಬೇಕಿದೆ. ಅನುದಾನ ಬಿಡುಗಡೆ ಆದ ಬಳಿಕ ಆಡುಮಲ್ಲೇಶ್ವರ ಝೂ ಮತ್ತಷ್ಟು ಅಭಿವೃದ್ಧಿ ಕಾಣಲಿದೆ.
ಒಟ್ಟಾರೆಯಾಗಿ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯದತ್ತ ಸರ್ಕಾರ ಗಮನಹರಿಸಿ ಶೀಘ್ರ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕಿದೆ. ಆ ಮೂಲಕ ಬಯಲು ಸೀಮೆಯ ಏಕೈಕ ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಿದೆ.