ಸತ್ತು 6 ತಿಂಗಳ ಬಳಿಕ ಮಲೇಷ್ಯಾದಿಂದ ಹುಟ್ಟೂರು ಪಿರಿಯಾಪಟ್ಟಣಕ್ಕೆ ಬಂತು ಮೃತದೇಹ!
ಮೈಸೂರು: ಆತ ಚೆನ್ನಾಗಿ ದುಡಿಬೇಕು ಅಂತ ಕೆಲಸಕ್ಕಾಗಿ ಮಲೇಷ್ಯಾಗೆ ಹೋಗಿದ್ದ. 35 ಸಾವಿರ ಸಂಬಳದ ಆಸೆ ಹುಸಿಯಾಗಿ 18 ಸಾವಿರ ಸಂಬಳದ ಕೆಲಸ ಸಿಕ್ಕಿತ್ತು. ನೊಂದ ಯುವಕ ವಾಪಸ್ ಮನೆಗೆ ಬರೋದಾಗಿ ತಾಯಿಗೆ ಕರೆ ಮಾಡಿ ಹೇಳಿದ್ದ ಆದ್ರೆ ಹುಟ್ಟೂರಿಗೆ ಬರುವ ಮೊದಲೆ ಅವನ ನಿಗೂಢ ಸಾವಾಗಿತ್ತು. ಡಿಸೆಂಬರ್‌ನಲ್ಲಿ ಮೃತಪಟ್ಟ ಯುವಕನ ಮೃತ ದೇಹ ಇಂದು ಹುಟ್ಟೂರಿಗೆ ತಲುಪಿದೆ. ಸುಮಂತ್(22) ಪಿರಿಯಾಪಟ್ಟಣದ ನಿವಾಸಿ. ಕೆಲಸಕ್ಕಾಗಿ ಮಲೇಷಿಯಾಗೆ ತೆರಳಿದ್ದ. 35 ಸಾವಿರ ರೂ. ಸಂಬಳ ಕೊಡಿಸುವುದಾಗಿ ನಂಬಿಸಿ ಮಧ್ಯವರ್ತಿಯೊಬ್ಬ […]
Follow us on
ಮೈಸೂರು: ಆತ ಚೆನ್ನಾಗಿ ದುಡಿಬೇಕು ಅಂತ ಕೆಲಸಕ್ಕಾಗಿ ಮಲೇಷ್ಯಾಗೆ ಹೋಗಿದ್ದ. 35 ಸಾವಿರ ಸಂಬಳದ ಆಸೆ ಹುಸಿಯಾಗಿ 18 ಸಾವಿರ ಸಂಬಳದ ಕೆಲಸ ಸಿಕ್ಕಿತ್ತು. ನೊಂದ ಯುವಕ ವಾಪಸ್ ಮನೆಗೆ ಬರೋದಾಗಿ ತಾಯಿಗೆ ಕರೆ ಮಾಡಿ ಹೇಳಿದ್ದ ಆದ್ರೆ ಹುಟ್ಟೂರಿಗೆ ಬರುವ ಮೊದಲೆ ಅವನ ನಿಗೂಢ ಸಾವಾಗಿತ್ತು. ಡಿಸೆಂಬರ್‌ನಲ್ಲಿ ಮೃತಪಟ್ಟ ಯುವಕನ ಮೃತ ದೇಹ ಇಂದು ಹುಟ್ಟೂರಿಗೆ ತಲುಪಿದೆ.
ಸುಮಂತ್(22) ಪಿರಿಯಾಪಟ್ಟಣದ ನಿವಾಸಿ. ಕೆಲಸಕ್ಕಾಗಿ ಮಲೇಷಿಯಾಗೆ ತೆರಳಿದ್ದ. 35 ಸಾವಿರ ರೂ. ಸಂಬಳ ಕೊಡಿಸುವುದಾಗಿ ನಂಬಿಸಿ ಮಧ್ಯವರ್ತಿಯೊಬ್ಬ ಆತನನ್ನು ಕರೆದೊಯ್ದಿದ್ದ. ಆದರೆ ಅಲ್ಲಿ ಅವನಿಗೆ ಕೇವಲ 18 ಸಾವಿರ ರೂ. ಕೆಲಸ ಕೊಡಿಸಿ ವಂಚನೆ ಮಾಡಿದ್ದಾನೆ. ಇದರಿಂದ ಮನನೊಂದ ಯುವಕ ವಾಪಸ್ಸು ಬರುವುದಾಗಿ ತಾಯಿಗೆ ಹೇಳಿಕೊಂಡಿದ್ದ.
ಅಷ್ಟರಲ್ಲೇ ಸುಮಂತ್ ಮಲೇಷಿಯಾದಲ್ಲಿ ಡಿಸೆಂಬರ್ ತಿಂಗಳಲ್ಲಿ ನಿಗೂಢವಾಗಿ ಮೃತಪಟ್ಟಿದ್ದ. ಈ ವಿಷಯವನ್ನು ಸುಮಂತ್ ಸಹೋದ್ಯೋಗಿಗಳು ಮನೆಯವರಿಗೆ ಮಾಹಿತಿ ತಿಳಿಸಿದ್ದರು. ಸಾವಿನ ತನಿಖೆ ಹಾಗೂ ಶವ ತರಿಸಿಕೊಳ್ಳಲು ಸಂಸದ ಪ್ರತಾಪ್ ಸಿಂಹಗೆ ಪೋಷಕರು ಮನವಿ ಮಾಡಿದ್ದರು.
ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿ ಶವ ತರಿಸುವುದಾಗಿ ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದ್ದರು. ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ 6 ತಿಂಗಳ ಬಳಿಕ ತಡವಾಗಿ ಸುಮಂತ್ ಮೃತದೇಹ ಹುಟ್ಟೂರಿಗೆ ಆಗಮಿಸಿದೆ. ಕೊನೆಗೂ ಅಂತ್ಯಕ್ರಿಯೆ ನೆರವೇರಿಸಿ ಕುಟುಂಬಸ್ಥರು ಸಮಾಧಾನಪಟ್ಟಿದ್ದಾರೆ.